- ಕೋಲಾರದ ನಗರದ ಬಾಪೂಜಿ ಶಾಲೆ ಆವರಣದಲ್ಲಿ ಕೊಲೆ
- ಕೊಲೆಯಾದ ದುರ್ದೈವಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ
ಕೋಲಾರ:ಯಾಕೋ ಕೋಲಾರ ಜಿಲ್ಲೆಯಲ್ಲಿ ಸರಣಿ ಕೊಲೆಗಳಾಗುತ್ತಿದೆ ಮೊನ್ನೆ ಶ್ರೀನಿವಾಸಪುರದಲ್ಲೊಂದು ಮಹಿಳೆ ಕೊಲೆ ಆನಂತರದಲ್ಲಿ ಮಾಲೂರಿನಲ್ಲೊಂದು ಯುವರಾಜಕಾರಣಿ ಹತ್ಯೆ ನಡೆಯುತ್ತದೆ,ನಿನ್ನೆ ಶ್ರೀನಿವಾಸಪುರದಲ್ಲೊಬ್ಬ ಪ್ರಭಾವಿ ರಾಜಕಾರಣಿಯನ್ನು ಹುಡುಗರು ಕೊಂದು ಹಾಕ್ತಾರೆ ಇಂದು ಕೋಲಾರದಲ್ಲಿ ನೆತ್ತರು ಹರದಿದ್ದು ಅಪ್ರಾಪ್ತ ವಿದ್ಯಾರ್ಥಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಇನ್ನೂ ಮೊದಲನೆ ವರ್ಷದ ಪಿಯುಸಿ ಓದುತ್ತಿರುವ ಸದ್ರೂಪಿ ಸುಂದರ ವಿದ್ಯಾರ್ಥಿ ದುಷ್ಕರ್ಮಿಗಳ ಆರ್ಬಟಕ್ಕೆ ಸಿಲುಕಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.ಕೊಲೆಯಾದ ಯುವಕನನ್ನು ಕೋಲಾರ ನಗರದ ಟೇಕಲ್ ರಸ್ತೆಯ ಪೇಟೆ ಚಾಮನಹಳ್ಳಿ(ಪಿಸಿ)ಬಡಾವಣೆಯ ಶಾಂತಿ ನಗರದ ನಿವಾಸಿ ಪೇಯಿಂಟಿಂಗ್ ಕೆಲಸ ಮಾಡುವ ಅರುಣ್ ಸಿಂಗ್-ಸುಶೀಲಾ ದಂಪತಿ ಮಗ ಕಾರ್ತಿಕ್ ಸಿಂಗ್ ಇತ ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಮೊದಲನೆ ವರ್ಷದ ಪಿಯುಸಿ ವಿದ್ಯಾರ್ಥಿ ಓದಿನಲ್ಲಿ ತುಂಬಾ ಇಂಟಿಲಿಜೆಂಟ್ ಚಿಗುರು ಮೀಸೆಯ ಹುಡುಗ ಯಾವ ಹಿರೋಗು ಕಡಿಮೆ ಇಲ್ಲದಂತಿದ್ದ ಎಲ್ಲಾ ಹುಡುಗರಿಗಿದ್ದಂತೆ ಇವನಿಗೂ ಕನಸುಗಳಿತ್ತು ಅದರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು ಇತರರು ಹೊಟ್ಟೆ ಕಿಚ್ಚುಪಡುವಷ್ಟು ಸದ್ರುಪಿಯಾಗಿದ್ದ ಸ್ಥಳೀಯ ಬಡಾವಣೆ ಹುಡುಗರಿಗೆ ಇವನನ್ನು ನೋಡಿದರೆ ಕೊಂಚ ಅಸೂಯೆ ಎನ್ನುತ್ತಾರೆ.ಇನ್ನು ಹದಿನೇಳು ವರ್ಷದ ಕಾರ್ತಿಕ್ ಸಿಂಗ್ ಗೆ ಸ್ನೇಹಿತರ ಸಹವಾಸವೇ ಸಾವಿಗೆ ಕಾರಣವಾಯ್ತಾ ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಶುಕ್ರವಾರ ಆಗಿದ್ದೇನು
ಶುಕ್ರವಾರ ಹೊಟ್ಟೆ ನೋವು ಎಂದು ಕಾರ್ತಿಕ್ ಸಿಂಗ್ ಕಾಲೇಜಿಗೆ ರಜೆ ಹಾಕಿ ಮನೆಯಲ್ಲೆ ಉಳದಿದ್ದಾನೆ ಸಂಜೆ ಸುಮಾರು 5.30 ವೇಳೆಗೆ ಸ್ನೇಹಿತರು ಪೋನ್ ಮಾಡಿ ಕರಿತಿದ್ದಾರೆ ಎಂದು ತನ್ನ ಅಮ್ಮ ಸುಶೀಲಾಗೆ ಹೇಳಿ ಮನೆಯಿಂದ ಹೊರ ಹೋಗಿದ್ದಾನೆ ತಡ ಸಂಜೆಯಾದರು ಮಗ ಮನೆಗೆ ಬಾರದಿದ್ದ ಬಗ್ಗೆ ತಾಯಿ ಕರಳು ಎದರು ನೋಡುತ್ತ ಕುಳತಿದೆ ಸುಮಾರು 7 ಗಂಟೆ ಹೊತ್ತಿಗೆ ಕಾರ್ತಿಕ್ ಮೊಬೈಲ್ ಪೋನ್ ಸ್ವಿಚ್ ಆಫ್ ಆಗುತ್ತದೆ,ತಾಯಿ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾಳೆ ಎಲ್ಲೋ ಸ್ನೇಹಿತರೊಂದಿಗೆ ಹೋಗಿರಬೇಕು ತಡವಾಗಿ ಬರಬಹುದು ಎಂದು ಸಮಾಧಾನ ಮಾಡಿಕೊಂಡು ತಂದೆ ತಾಯಿಗಳಿಬ್ಬರು ಮಗನ ಆಗಮನಕ್ಕಾಗಿ ಮನೆಯಲ್ಲಿ ಎದರು ನೋಡುತ್ತಿರುವಾಗ ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಹತ್ತಿರ ಯಾರೋ ಬಂದು ನಿಮ್ಮ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾಗ ತಾಯಿ ಕರಳು ಕಿತ್ತುಬರುತ್ತದೆ ಘಟನ ಸ್ಥಳಕ್ಕೆ ಡಾವಂತದಿಂದ ಓಡುತ್ತ ಹೋಗುತ್ತಾರೆ ಅಲ್ಲಿ ನೋಡಿದರೆ ಮಗ ಕಾರ್ತಿಕ್ ಬಾಪೂಜಿ ಶಾಲೆ ಆವರಣದಲ್ಲಿ ಬರ್ಬರವಾಗಿ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆ ಶಾಲೆಯ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಾಯಿ ಸುಶೀಲಾರ ಕರಳು ಹಿಂಡುವ ಮಾತು.
ಯಾರ ಕೃತ್ಯ ಇದು ಸಾರ್ವಜನಿಕರ ಪ್ರಶ್ನೆ
ಪಾಪದ ಅಪ್ರಪ್ತಾ ಬಾಲಕನನ್ನು ಅಮಾನುಷವಾಗಿ ಕೊಲೆ ಮಾಡಿರುವ ಹಂತಕರು ಯಾರೆಂದರೆ ಕೋಲಾರದ ನಗರದ ನಿವಾಸಿ ಪೊಲೀಸ್ ಸಿಬ್ಬಂದಿಯೊಬ್ಬರ ಅಪ್ರಪ್ತಾ ಮಗ ದಿಲೀಪ್ ಆಲಿಯಾಸ್ ಶೈನ್ ಎಂಬುವನೇ ಕೊಲೆ ಆರೋಪಿ ಎನ್ನುತ್ತಾರೆ.ಅಪ್ರಾಪ್ತ ಬಾಲಕವಾಗಿರುವ ಶೈನ್ ಮತ್ತು ಸ್ನೇಹಿತರು ಸೇರಿಕೊಂಡು ಹುಟ್ಟು ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿ ಸರ್ಕಾರಿ ಶಾಲೆ ಆವರಣಕ್ಕೆ ಬರುವಂತೆ ಕಾರ್ತಿಕ್ ಸಿಂಗ್ನನ್ನು ಕರೆಸಿಕೊಂಡಿದ್ದಾರೆ.ಒರ್ವ ಸ್ನೇಹಿತ ಕಾರ್ತಿಕ್ ಸಿಂಗ್ನನ್ನು ಕರೆತಂದು ಬಾಪೂಜಿ ಶಾಲೆ ಸಮೀಪ ಬಿಟ್ಟು ಹೊರಡುತ್ತಾನೆ. ಅಲ್ಲಿದ್ದವರು ಬಾಪೂಜಿ ಶಾಲಾ ಆವರಣಕ್ಕೆ ಕರೆದುಕೊಂಡು ಕೂರಿಸಿಕೊಳ್ಳುತ್ತಾರೆ. ನಂತರ ಮೃತನ ಬಟ್ಟೆ ಬಿಚ್ಚಿಸಿದ್ದಾರೆ,ಸ್ನೇಹಿತರೆಲ್ಲ ಕೂಡಿ ದೈಹಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆ,ಇದಕ್ಕೆ ಕಾರ್ತಿಕ್ ಸಿಂಗ್ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈ ಮೇಲೆ ಚಾಕು, ಹಾಗು ಬಾಟಲ್ ಗಾಜಿನಿಂದ ಕೊಯ್ದಿದ್ದಾರೆ ನಂತರ ಕೊಲೆ ಮಾಡಿದ್ದಾರೆ. ಕಾರ್ತಿಕ್ ಸಿಂಗ್ ಮೃತಪಡುತ್ತಿದ್ದಂತೆ ಶೈನ್ ಮತ್ತು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ.
ಯಾರು ಇವ ಹಂತಕ
ಕೊಲೆ ಆರೋಪಿ ದಿಲೀಪ್@ಶೈನ್ ಕಳೆದ ವರ್ಷ ತನ್ನ 16ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾನೆ ಅದಕ್ಕೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರನ್ನು ಕರೆಸಿ ಅವರ ಸಮಕ್ಷಮದಲ್ಲಿ ಲಾಂಗ್ ಬಳಸಿ ಕೇಕನ್ನು ಕತ್ತರಿಸುತ್ತಾನೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಶೇರ್ ಮಾಡಿ ಸದ್ದು ಮಾಡುತ್ತಾನೆ.ದಿಲಿಪ್ ರಂಪಾಟ ಹುಚ್ಚಾಟ ಇಷ್ಟೆ ಅಲ್ಲ ಕಳೆದ ಫೆಬ್ರವರಿ ತಿಂಗಳಲ್ಲಿ ಪೇಟೆ ಚಾಮನಹಳ್ಳಿ ನಿವಾಸಿಗಳಾದ ಗಣೇಶ್ ಮತ್ತು ಗಗನ್ ಇಬ್ಬರು ಬಾಲಕರನ್ನು ನಗರದ ಟೇಕಲ್ ರಸ್ತೆಯಲ್ಲಿ ಅಡ್ಡಗಟ್ಟಿ ಸರ್ಕಾರಿ ಶಾಲಾ ಆವರಣಕ್ಕೆ ಕರೆಸಿಕೊಂಡು ನಾನೆಂದರೆ ಏನು ಅಂದುಕೊಂಡಿದೀರ, ನನ್ನ ಮುಂದೆ ನೀವು ನಡೆದುಕೊಂಡು ಹೋಗಬಾರದು, ನಿಮ್ಮಿಬ್ಬರನ್ನು ಇವತ್ತೆ ಮುಗಿಸುತ್ತೇನೆ ಎಂದು ಅಪ್ಪಟ ಸಿನಿಮಾ ಸ್ಟೈಲ್ ನಲ್ಲಿ ಅಬ್ಬರಿಸುತ್ತಾನೆ ನಂತರ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾನೆ ಹಲ್ಲೆಗೊಳಗಾದ ಗಣೇಶ್ ಮತ್ತು ಗಗನ್ ರನ್ನು ನಗರದ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುವ ಪೋಷಕರು ನಂತರದಲ್ಲಿ ಗಗನ್ ತಂದೆ ಶೈನ್ ಹಾಗೂ 3 ಮಂದಿ ಅಪ್ರಪ್ತಾರ ವಿರುದ್ಧ ದೂರು ದಾಖಲಿಸುತ್ತಾರೆ ಅಂದು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಸುತ್ತಾರೆಯಾದರು ಪೊಲೀಸಪ್ಪನ ಮಗ ಎಂಬ ಕರುಣೆಯಿಂದ ಅಪ್ರಾಪ್ತ ಎಂದು ಬಿಟ್ಟು ಕಳಿಸುತ್ತಾರೆ.
ಯಾಕೆ ಹೀಗೆ ಶೈನ್
ಇನ್ನು ಚಿಗರು ಮೀಸೆ ಬಲಿತಿಲ್ಲ ಆಗಲೆ ಕೊಲೆ ಆರೋಪ ಹೊತ್ತಿರುವ ದಿಲೀಪ್@ಶೈನ್ ಬ್ಯಾಕ್ ಗ್ರೌಂಡ್ ಎನೂ ದೊಡ್ಡದಲ್ಲ ಅವರ ಕುಟುಂಬದವರಿಗೆ ಅಪರಾಧ ಹಿನ್ನಲೆ ಇಲ್ಲ ತಂದೆ ಪೋಲಿಸ್ ಪೇದೆ ಸಾತ್ವಿಕ ಮನುಷ್ಯ ಅದರೆ ಮಗ ಶೈನ್ ಡೇಂಜರ್ ಹುಡುಗ ಅವನ ದಾರಿ crime ಕಡೆ ಸಾಗುತ್ತಿದೆ ಡಾನ್ ಆಗಬೇಕು ಎಂದು ಕನಸ್ಸು ಕಂಡಂತಿರುವ ಶೈನ್ ಮತ್ತೊರ್ವ ಅಪ್ರಾಪ್ತನನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದಾನೆ.
ಹತ್ಯೆಯಾಗಿರುವ ಕಾರ್ತಿಕ್ ಸಿಂಗ್ ಪೋಷಕರ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೋಲಿಸರು ಕೊಲೆ ಆರೋಪಿಗಳ ಪತ್ತೆಗಾಗಿ 3 ತನಿಖಾ ತಂಡಗಳನ್ನು ರಚನೆ ಮಾಡಿದ್ದು ಪೋಲಿಸ್ ಇಲಾಖೆ ಅನುಮಾನಸ್ಪದವಾಗಿ ಮೂರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಮತ್ತೇರಿಸುತ್ತಿರುವ ಗಾಂಜ!
ಇತ್ತಿಚಿಗೆ ಕೋಲಾರ ಜಿಲ್ಲೆಯಲ್ಲಿ ಸಣ್ಣ ಸಣ್ಣ ಹುಡುಗರು ಗಾಂಜಾ ನಶೆಗೆ ಜೋತು ಬಿದ್ದಂತಿದೆ, ಹೆಚ್ಚು-ಕಡಿಮೆ ಸಾಮನ್ಯ ಹುಡುಗರ ಕೈಗು ಎಟುಕುವಂತೆ ಸಿಗುತ್ತಿರುವ ಗಾಂಜಾ, ನಶೆ ಏರಿಸಿಕೊಂಡವರು ಕ್ಷುಲ್ಲಕ ಕಾರಣಕ್ಕಾಗಿ ಸಿನಿಮಾ ಸ್ಟೈಲ್ನಲ್ಲಿ ಗಲಾಟೆ ಮಾಡೋದು, ಅಬ್ಬರಿಸುವುದು ಮಾಡುತ್ತಾರೆ ಅನ್ನುವ ಆರೋಪ ಎಲ್ಲಡೆ ಕೇಳಿಬರುತ್ತಿದೆ .