ನ್ಯೂಜ್ ಡೆಸ್ಕ್:NVIDIA ವಿಶ್ವದ ಅತ್ಯಂತ ದುಬಾರಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ CEO ಜೆನ್ಸನ್ ಹುವಾಂಗ್ ವಾಚ್ ಧರಿಸುವುದಿಲ್ಲ. ಅದಕ್ಕೆ ಕಾರಣವನ್ನು ಅವರು ಸಹ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ನಮ್ಮ ಕಂಪನಿಯ ಉದ್ಯೋಗಿಗಳನ್ನು ಕೇಳಿ ನಮ್ಮಲ್ಲಿ ದೀರ್ಘಾವಧಿ ಯೋಜನೆಗಳು ಯಾವುದು ಇರುವುದಿಲ್ಲ. ನಾವೇನಿದ್ದರು ವರ್ತಮಾನದತ್ತ(ongoing process) ದೃಷ್ಟಿ ಹರಿಸುವುದು ನಮ್ಮ ಮುಖ್ಯ ಕಾರ್ಯಸೂಚಿಯಾಗಿದೆ. ಈ ರೀತಿಯಾದ ಆಲೋಚನೆಯೊಂದಿಗೆ ನಾನು ಗಡಿಯಾರವನ್ನು ಧರಿಸುವುದಿಲ್ಲ ಎಂದಿರುತ್ತಾರೆ.
ಇದೊಂದು ಸಾಫ್ಟ್ವೇರ್ ಮತ್ತು ಫ್ಯಾಬ್ಲೆಸ್ ಕಂಪನಿಯಾಗಿದ್ದು, ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ಗಳು (ಜಿಪಿಯುಗಳು), ಡೇಟಾ ಸೈನ್ಸ್ ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ಗಾಗಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳು (ಎಪಿಐಗಳು), ಹಾಗೆಯೇ ಮೊಬೈಲ್ ಕಂಪ್ಯೂಟಿಂಗ್ ಮತ್ತು ಆಟೋಮೋಟಿವ್ಗಾಗಿ ಚಿಪ್ ಯೂನಿಟ್ಗಳಲ್ಲಿ (ಎಸ್ಒಸಿಗಳು) ಸಿಸ್ಟಮ್ ಅನ್ನು ವಿನ್ಯಾಸಗೊಳಿಸುತ್ತದೆ ಮತ್ತು ಪೂರೈಸುತ್ತದೆ.ಎಂದಿರುತ್ತಾರೆ.