- ನಾರೆಪ್ಪ ಸಿನಿಮಾದಲ್ಲಿ ಮದ್ಯವಯಸ್ಕನಾಗಿ ಇಬ್ಬರು ಮಕ್ಕಳ ತಂದೆಯಾಗಿ ಸಾಮಾನ್ಯ ಕುಟುಂಬದ ಯಜಮಾನನಾಗಿ ವಿಕ್ಟರಿ ವೆಂಕಟೇಶ್ ಅದ್ಭುತವಾಗಿ ನಟಿಸಿದ್ದಾರೆ.
- ನಿನ್ನೆಯಷ್ಟೆ ಡಿಜಿಟಲ್ ಫ್ಲಾಟ್ ಫಾರ್ಮಾಂ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿರುವ ತೆಲಗು ಸಿನಿಮಾ ನಾರಪ್ಪ ರೀವೂ
- ಮೂಲತಃ ತಮಿಳು ಸಿನಿಮಾ “ಅಸುರನ್” ರೀಮೇಕ್ ಆಗಿರುವ “ನಾರೆಪ್ಪ” ತೆಲಗು ನೆಟಿವೇಟಿಗೆ ಹೊಂದಿಕೊಳ್ಳುವಂತೆ ಭಟ್ಟಿ ಇಳಿಸಲಾಗಿದೆ
ನ್ಯೂಜ್ ಡೆಸ್ಕ್ :-ನಿರ್ದೇಶಕ ಶ್ರೀಕಾಂತ್ ಅದ್ದಾಲಾ ಅವರು ಮೂಲ ಚಿತ್ರಕ್ಕಿಂತ ಉತ್ತಮವಾಗಿ ತೆಲಗು ರಿಮೇಕ್ ಮಾಡಿದ್ದಾರೆ,ಇದು ನಿರ್ದೇಶಕರ ಮೊದಲ ರಿಮೇಕ್ ಚಿತ್ರ ಇದುವರಿಗೂ ಸಾಕಷ್ಟು ನೇರವಾಗಿ ತೆಲಗು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೊದಲ ಬಾರಿಗೆ ರೀಮೇಕ್ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ತಮಿಳುನಾಡಿನ ತಿರುನಲ್ ವೇಲಿ ಎಂಬಲ್ಲಿ ನಡೆದಂತ ನೈಜ ಕಥೆಯನ್ನು ಆದರಿಸಿ ಮೊದಲಿಗೆ ತಮಿಳಲ್ಲಿ ಸಿನಿಮಾ ಮಾಡಿದ್ದು ರಜನಿಕಾಂತ್ ಅಳಿಯ ಧನುಷ್ ನಟಿಸಿ ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ ಎಂಬ ತಮಿಳು ಚಿತ್ರರಂಗದಲ್ಲಿ ಭಾರಿ ಯಶಸ್ಸ ಕಂಡಿತು
ಅದನ್ನು ತೆಲುಗಿನಲ್ಲಿ ವೆಂಕಟೇಶ್ ಅವರೊಂದಿಗೆ, ಹಿಂದೆ ಘರ್ಷಣ ಸಿನಿಮಾ ಮಾಡಿದ್ದ ಕಲೈಪುಲಿ ಎಸ್. ತನು, “ನಾರಪ್ಪ” ತಗೆಯಲು ಮುಂದಾದಾಗ ಅವರೊಂದಿಗೆ ಚಿತ್ರ ಮಾಡಲು ಮುಂದೆ ಬಂದರು. ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಡಿ. ಸುರೇಶ್ಬಾಬು ಈ ಇಬ್ಬರು ಸೇರಿ ನಿರ್ಮಿಸಿರುವಂತ ಸಿನಿಮಾವನ್ನು ಜುಲೈ 20 ರಂದು ಡಿಜಿಟಲ್ ಮಾಧ್ಯಮ ಅಮೆಜಾನ್ ಪ್ರೈಮ್ ಒಟಿಟಿ ಯಲ್ಲಿ ಬಿಡುಗಡೆ ಮಾಡಿರುತ್ತಾರೆ.
‘ನಾರಪ್ಪ’ ಸಿನಿಮಾದ ಮೂಲ ಕಥೆ
ನಾರಪ್ಪ (ವೆಂಕಟೇಶ್) ತಿರುಪತಿಯಿಂದ ದೂರದ ಕುಗ್ರಾಮದ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.ಆತ ತನ್ನ ಮೂರು ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತ ಪತ್ನಿ ಸುಂದರಮ್ಮ (ಪ್ರಿಯಮಣಿ), ಹಿರಿಯ ಪುತ್ರ ಮುನ್ನಿ ಕನ್ನ (ಕಾರ್ತಿಕರತ್ನಂ), ಕಿರಿಮಗ ಚಿನ್ನಪ್ಪ (ರಾಖಿ) ಮತ್ತು ಮಗಳು ಬುಜ್ಜಮ್ಮ (ಚಿತ್ರ) ಅವರೊಂದಿಗೆ ಕೃಷಿಕನಾಗಿ ಜೀವನ ಮಾಡುತ್ತಿರುತ್ತಾನೆ ಅದೇ ಊರಿನ ಅನಕೂಲವಂತ ಹಳ್ಳಿಯ ಮುಖಂಡ ಪಾಂಡುಸಾಮಿ (ಅಡುಗಲಂ ನರೇನ್)
ಸಿಮೆಂಟ್ ಕಾರ್ಖಾನೆ ನಿರ್ಮಿಸಲು ಸುತ್ತಮುತ್ತಲಿನ ಜನರಿಂದ ಭೂಮಿಯನ್ನು ಖರೀದಿಸುತ್ತಾನೆ. ಎಲ್ಲರೂ ಭೂಮಿಯನ್ನು ಕೊಟ್ಟರೂ ನಾರಪ್ಪ ತನ್ನ ಜಮೀನನ್ನು ನೀಡಲು ನಿರಾಕರಿಸುತ್ತಾನೆ. ಇದರಿಂದ ಕುಪಿತನಾದ ಪಾಂಡುಸಾಮಿ ಅಂದಿನಿಂದಲೂ ನಾರಪ್ಪ ಭೂಮಿಯನ್ನು ಆಕ್ರಮಿಸಿಕೊಳ್ಳಲು ಬಯಸುತ್ತಾನೆ ಇದಕ್ಕಾಗಿ ಪಾಂಡುಸಾಮಿ ಮತ್ತು ನಾರಪ್ಪ ಕುಟುಂಬಗಳ ನಡುವೆ ಹೊಡೆದಾಟ ಬಡಿದಾಟ ಘರ್ಷಣೆಗಳಾಗುತ್ತದೆ ಅದು ಗ್ರಾಮೀಣ ಪ್ರಾಂತ್ಯದ ಸಾಮಾಜಿಕ ಸಮಸ್ಯೆಗಳ ಸಂಘರ್ಷಕ್ಕೂ ಕಾರಣವಾಗುತ್ತದೆ ಮುಂದೆ ನಾರಪ್ಪನ ಹಿರಿ ಮಗ ಮುನ್ನಿ ಕನ್ನ ನನ್ನು ಪೋಲಿಸರು ಬಂಧಿಸಿದಾಗ ಅನಿವಾರ್ಯವಾಗಿ ನಾರಪ್ಪ ಗ್ರಾಮಸ್ಥರ ಸಹಾಯದೊಂದಿಗೆ ನ್ಯಾಯಪಂಚಾಯಿತಿ ಮಾಡಿ ಮಗನನ್ನು ಪೋಲಿಸ್ ಬಂಧನದಿಂದ ಬಿಡಿಸಿಕೊಡುವಂತೆ ಪಾಂಡುಸಾಮಿಯನ್ನು ಅಂಗಲಾಚುತ್ತಾನೆ ಅದಕ್ಕೆ ಪಾಂಡು ನಮ್ಮವರ ಕಾಲಿಗೆ ಬಿದ್ದರೆ ಮಾತ್ರ ಕೇಸ್ ವಾಪಸ್ಸು ಪಡೆಯುತ್ತೇನೆ ಎಂದು ಷರತ್ತು ಒಡ್ಡಿದಾಗ ನಾರೆಪ್ಪ ಷರತ್ತಿನಂತೆ ಪಾಂಡುಸಾಮಿಯವರ ಮನೆಗಳವರ ಮನೆ ಮನೆಗೆ ತೆರಳಿ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾನೆ ಇದು ನ್ಯಾಯ ಪಂಚಾಯಿತಿ ಮಾಡಿದವರಿಗೆ ಇರಸು ಮುರಸಾಗುತ್ತದೆ ಪೋಲಿಸ್ ಬಂಧನದಿಂದ ಬಂದ ಮುನ್ನಿ ಕನ್ನ ತಂದೆಯನ್ನು ಅವಮಾನಿಸಿದ್ದಕ್ಕಾಗಿ ಪಾಂಡು ಕುಟುಂಬ ಸಮೇತ ಸಿನಿಮಾಕ್ಕೆ ಬಂದಾಗ ಕಪಾಳಕ್ಕೆ ಹೋಡೆದು ಸೇಡು ತಿರಿಸಿಕೊಳ್ಳುತ್ತಾನೆ, ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ, ಪಾಂಡುಸಾಮಿ ಮತ್ತು ಅವನ ಮಕ್ಕಳು ಮುನಿ ಕಣ್ಣನ್ನು ಕೊಲ್ಲುತ್ತಾರೆ. ನಾರಪ್ಪನ ಕಿರಿಯ ಮಗ ಅಪ್ರಾಪ್ತ ಚಿನ್ನಬ್ಬ ಅಣ್ಣನನ್ನು ಕೊಂದ ಪಾಂಡುಸಾಮಿಯನ್ನು ಕೊಲ್ಲುತ್ತಾನೆ. ಅದರೊಂದಿಗೆ ಪಾಂಡುಸಾಮಿ ಕುಟುಂಬವು ಅವರನ್ನು ಕೊಲ್ಲಲು ನಾರಪ್ಪ ಕುಟುಂಬವನ್ನು ಹಿಂಬಾಲಿಸುತ್ತದೆ. ನಾರಪ್ಪ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕಾಡಿಗೆ ಹೋಗುತ್ತಾನೆ. ನಂತರ ತನ್ನ ಕುಟುಂಬವನ್ನು ಉಳಿಸಲು ನಾರಪ್ಪ ಏನು ಮಾಡುತ್ತಾನೆ? ನಾರಪ್ಪ ಯಾವ ಪರಿಸ್ಥಿತಿಗಳನ್ನು ಎದುರಿಸುತ್ತಾನೆ ? ಈ ವಿಷಯಗಳನ್ನು ತಿಳಿದುಕೊಳ್ಳಲು ನೀವು ಚಲನಚಿತ್ರವನ್ನು ನೋಡಲೇಬೇಕು.
ವಿಕ್ಟರಿ ವೆಂಕಟೇಶ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡರು. ಫ್ಲ್ಯಾಷ್ಬ್ಯಾಕ್ನಲ್ಲಿ ಬರುವ ಯುವಕನ ಪಾತ್ರಕ್ಕಿಂತ ಇಬ್ಬರು ಗಂಡು ಮಕ್ಕಳ ತಂದೆಯ ಪಾತ್ರದಲ್ಲಿ ವೆಂಕಟೇಶ್ ಉತ್ತಮವಾಗಿ ನಟಿಸಿದ್ದಾರೆ, ಮಧ್ಯವಯಸ್ಕನ ಪಾತ್ರದಲ್ಲಿ ಅಸುರನ್ ಧನುಷ್ಗಿಂತ ನಾರಪ್ಪದಲ್ಲಿ ವೆಂಕಟೇಶ್ ಉತ್ತಮವಾಗಿ ನಟಿಸಿದ್ದಾರೆ.
ಇದು ಹೊಸ ಕಥೆಯೇನಲ್ಲ ಶ್ರೀಮಂತ ಮತ್ತು ಬಡವರ ನಡುವಿನ ಸಂಘರ್ಷ.ಗ್ರಾಮೀಣ ಪ್ರಾಂತ್ಯದಲ್ಲಿ ಸಾಮಾಜಿಕ ಅಸಮಾನತೆ ಹಿನ್ನಲೆಯ ಕಥೆ ಕೊಂಚ ಆಸಕ್ತಿದಾಯಕವಾಗಿದೆ. ಇಡೀ ಕಥೆ ನಾರಪ್ಪನ ಸುತ್ತ ಸುತ್ತುತ್ತದೆ. ವೆಂಕಟೇಶ್, ತಮ್ಮ ಹಿರಿತನದೊಂದಿಗೆ ಚಿತ್ರವನ್ನು ಒನ್ ಮ್ಯಾನ್ ಶೋ ಆಗಿ ತಮ್ಮ ಹೆಗಲ ಮೇಲೆ ಹೋತ್ತು ಸಾಗಿದ್ದಾರೆ. ಪ್ರಿಯಮಣಿ ವೆಂಕಟೇಶ್ ಅವರ ಪತ್ನಿ ಸುಂದರಮ್ಮ ಪಾತ್ರದಲ್ಲಿ ಮಗನನ್ನು ಕಳೆದುಕೊಂಡ ತಾಯಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿ ನಟಿಸಿದ್ದಾರೆ. ಹಿರಿಯ ನಟರಾದ ರಾಜೀವ್ ಕನಕಲಾ, ನಾಸರ್, ರಾವ್ ರಮೇಶ್, ಬ್ರಹ್ಮೊಜಿ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಸಂಗೀತ ನಿರ್ದೇಶಕ ಮಣಿಶರ್ಮ ಅವರ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಶ್ಯಾಮ್ ಕೆ ನಾಯುಡು ಉತ್ತಮ ಛಾಯಾಗ್ರಹಣ. ದೃಶ್ಯಗಳ ದೃಷ್ಟಿಯಿಂದ ಚನ್ನಾಗಿದೆ ಸಂಭಾಷಣೆ ‘ನಮ್ಮಂತವರ ಬಳಿ ಜಮೀನು ಹಣ ಇದ್ದರೆ ಕಸಿದುಕೊಳ್ಳುತ್ತಾರೆ ವಿದ್ಯೆಯನ್ನು ಯಾರು ಕದಿಯಲು ಕಿತ್ತುಕೊಳ್ಳಲು ಸಾದ್ಯವಾಗದು ಎಂಬ ಸಾಮಾಜಿಕ ಕಳಕಳಿಯ ಸಂಭಾಷಣೆ ಸಾಂದರ್ಭಿಕವಾಗಿ ಆಕರ್ಷಕವಾಗಿವೆ, ವಾಣಿಜ್ಯ ಸಿನೆಮಾಗಳ ಮಧ್ಯೆ ಹೆಚ್ಚಾಗಿ ಸಿನಿಮಾದ ವೇಗಕ್ಕೆ ಒಗ್ಗಿಕೊಂಡಿರುವ ಸರಾಸರಿ ತೆಲುಗು ವೀಕ್ಷಕರಿಗೆ, ಚಿತ್ರ ನಿಧಾನ ಗತಿಯಲ್ಲಿದೆ ಎಂದು ತೋರುತ್ತದೆ. ವೆಂಕಟೇಶ್ ನಟನೆಗಾಗಿ ಈ ಚಿತ್ರವನ್ನು ನೋಡಬೇಕು
ಚ.ಶ್ರೀನಿವಾಸಮೂರ್ತಿ