ನ್ಯೂಜ್ ಡೆಸ್ಕ್:– ಕೋವಿಶೀಲ್ಡ್ ಲಸಿಕೆ ಎರಡನೆಯ ಡೋಸ್ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್ ಲಸಿಕೆ ಪಡೆಯಲು ಹೆಚ್ಚಿನ ಅಂತರ ಇರುವಂತೆ ಸರ್ಕಾರಗಳು ಹೇಳಿತ್ತು ಇದು ಲಸಿಕೆಯ ಕೊರತೆಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಆರೋಪ ಕೇಳಿಬಂದಿತ್ತು, ಆದರೆ ಈಗ ಆಕ್ಸ್ಫರ್ಡ್ ಅಧ್ಯಯನದ ಪ್ರಕಾರ ಅಚ್ಚರಿಯ ವರದಿಯೊಂದು ಬಹಿರಂಗವಾಗಿದ್ದು ಕೋವಿಶೀಲ್ಡ್ ಲಸಿಕೆಯ ಡೋಸ್ಗಳ ನಡುವಿನ ಅಂತರ ಹೆಚ್ಚಾಗಿ ಅಂದಾಜು 10 ತಿಂಗಳು ಇದ್ದರೆ ಹೆಚ್ಚು ಆ್ಯಂಟಿಬಾಡಿ ಬೂಸ್ಟ್ ಮಾಡುತ್ತದೆ ಎಂದು ಆಕ್ಸ್ಪರ್ಡ್ ವರದಿ ಹೇಳಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು 44-45 ವಾರಗಳ ಅಂತರದಲ್ಲಿ ತೆಗೆದುಕೊಂಡರೆ 8-12 ವಾರಗಳ ಅಂತರದಲ್ಲಿ ನೀಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ ಎಂದು ಲಸಿಕೆಯ ಡೆವಲಪರ್ಗಳಾದ ಆಕ್ಸ್ಫರ್ಡ್ ಲಸಿಕಾ ಸಮೂಹ ವರದಿ ಮಾಡಿದೆ.ಇದು ಒಂದನೆ ಲಸಿಕೆ ಪಡೆದು ಎರಡನೆಯದಕ್ಕೆ ಯಾಯುವರಿಗೊಂದು ಒಳ್ಳೆಯ ಅವಕಾಶ ಕಲ್ಪಿಸಿದಂತಾಗುತ್ತದೆ.
ಆ್ಯಂಟಿಬಾಡಿ ಮಟ್ಟವು ಸುಮಾರು ಒಂದು ವರ್ಷದವರೆಗೆ ಹೆಚ್ಚಿರುತ್ತದೆ ಎಂದು ವರದಿ ಹೇಳುತ್ತದೆ. ಒಂದು ಡೋಸ್ ಲಸಿಕೆ ಪಡೆದ ನಂತರ ದೀರ್ಘಕಾಲದ ಬಳಿಕ ಎರಡನೇ ಡೋಸ್ ತೆಗೆದುಕೊಳ್ಳುವುದರಿಂದ ಲಸಿಕಾ ಕೊರತೆಯನ್ನು ಕೂಡ ತಗ್ಗಿಸುತ್ತದೆ ಎಂದು ಆಕ್ಸ್ಪರ್ಡ್ ವಿವಿಯ ವರದಿ ಹೇಳಿದೆ.
ಬ್ರಿಟನ್ನ ಆಕ್ಸ್ಪರ್ಡ್ ವಿವಿ ಆಸ್ಟ್ರಾಜೆನಿಕಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಇದೇ ಲಸಿಕೆಯನ್ನು ಕೋವಿಶೀಲ್ಡ್ ಎಂದು ಕರೆಯಲಾಗುತ್ತಿದೆ. ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಇದನ್ನು ಉತ್ಪಾದಿಸುತ್ತಿದ್ದು, ದೇಶದಲ್ಲಿ ಕೋವ್ಯಾಕ್ಸಿನ್, ಸ್ಪುಟ್ನಿಕ್ -ವಿ ಜೊತೆಗೆ ಕೋವಿಶೀಲ್ಡ್ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ.
ಸಂಗ್ರಹ ವರದಿ: ಚ.ಶ್ರೀನಿವಾಸಮೂರ್ತಿ