ಶ್ರೀ ಮನ್ನಾನಾರಯಣನ ದಶಾವತಾರದಲ್ಲಿ ಕೂರ್ಮಾವತಾರ ಎರಡನೆಯ ಅವತಾರ
ಅಮೆಯ ಮೂರ್ತಿಯನ್ನು ಪೂಜಿಸುವುದರಿಂದ ಅಭಿಷ್ಟೆಗಳು ಈಡೇರುವುದು ಎಂಬ ನಂಬಿಕೆ
ಆಮೆಯ ವಿಗ್ರಹವನ್ನು ತಂದು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಎಲ್ಲರೂ ಬಯಸುವುದು ಅಯೂರಾರೋಗ್ಯ,ಐಶ್ವರ್ಯ,ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡಬೇಕು ಎನ್ನುವುದು ಸಹಜ ಇದೆಲ್ಲವನ್ನು ಪಡೆಯಬೇಕು ಎನ್ನುವರು ಮನೆಯಲ್ಲಿ ಆಮೆಯ ವಿಗ್ರಹವನ್ನು ಇಟ್ಟು ಪೂಜಿಸಿದರೆ ಎಲ್ಲವನ್ನು ಪಡೆಯಬಹುದು ಎನ್ನುತ್ತಾರೆ ಜ್ಯೋತಿಷ್ಯರು.
ಆಮೆಯನ್ನು ವಿಷ್ಣುವಿನ ಅವತಾರ ಎಂದೇ ಹೇಳುತ್ತಾರೆ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿಯ ಆವಾಹನೆ ಆಗುತ್ತದೆ ಇದು ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಬಹಳಷ್ಟು ವಾಡಿಕೆ ಆದ್ದರಿಂದ ನೀವು ಮನೆಯಲ್ಲಿ ಆಮೆಯ ಪ್ರತಿಮೆಯನ್ನು
ಯಾವಾಗಲೂ ತರಬಾರದು ಆಮೆಯ ಪ್ರತಿಮೆಯನ್ನು ಗುರುವಾರದ ದಿನ ಮನೆಗೆ ತರಬೇಕು ನಂತರ ಅದನ್ನು ಅಕ್ಕಿಯ ಒಳಗೆ ಮುಚ್ಚಿಟ್ಟು ಮರು ದಿನ ಅಂದ್ರೆ ಶುಕ್ರವಾರ ಬೆಳ್ಳಗೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ದ ಧರಿಸಿ ನಂತರ ದೇವರ ಕೋಣೆ ಅಥವ ನಿಗದಿತ ಸ್ಥಳದಲ್ಲಿ ಒಂದಿಷ್ಟು ಅಕ್ಕಿ ಹಾಕಿ ಮೂರ್ತಿ ಇಡಬೇಕು. ಗುರುವಾರದ ದಿನ ಮನೆಗೆ ತಂದು ಶುಕ್ರವಾರ ಪ್ರತಿಷ್ಠೆ ಮಾಡಿದ್ರೆ ಬಹಳಷ್ಟು ಒಳ್ಳೆಯದಾಗುತ್ತದೆ.ಗಾಜಿನ ಬಟ್ಟಲು ಅಥವಾ ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ತುಂಬಿ ಅದರ ಮೇಲೆ ಹಿತ್ತಾಳೆಯ ಆಮೆಯ ವಿಗ್ರಹವನ್ನು ಇಡಬೇಕು ಈ ಆಮೆಯ ವಿಗ್ರಹವನ್ನು ಉತ್ತರ ದಿಕ್ಕಿಗೆ ಇಡಬೇಕು ಹಾಗೆ ಮನೆಯ ಒಳಗಡೆ ಬರುವ ರೀತಿ ಆಮೆಯ ವಿಗ್ರಹವನ್ನು ಇಡಬೇಕು ಈ ರೀತಿ ಇಡುವುದರಿಂದ ಲಕ್ಷ್ಮಿ ಮನೆಯ ಒಳಗೆ ಬರುತ್ತಾಳೆ ಎನ್ನುವುದು ಪ್ರತೀತಿ ಈ ರೀತಿ ಮಾಡುವುದರಿಂದ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುತ್ತಾರೆ.
ಧರ್ಮ ಸಂಸ್ಥಾಪನೆಗಾಗಿ ಭಗವಂತ ಶ್ರೀಮನ್ನಾನಾರಯಣ ತಳೆದ ದಶಾವತರಾಗಳಲ್ಲಿ ವರಹಾ ಅವತಾರಕ್ಕೆ ಮೊದಲೆ ಅಂದರೆ ಎರಡೇ ಅವತಾರವೆ ಕೂರ್ಮಾವತಾರ ಅಷ್ಟಕ್ಕೂ ಶ್ರೀಮನ್ನಾನಾರಯಣ ಕೂರ್ಮಾವತಾರ ತಾಳಿದ್ದಾದರೂ ಯಾಕೆ ಎನ್ನುವುದಾದರೆ,ದೇವತೆಗಳು ಮತ್ತು ರಾಕ್ಷಸರು ಅಮರತ್ವಕ್ಕಾಗಿ ಅಮೃತವನ್ನು ಪಡೆಯುವ ಸಲುವಾಗಿ ಸಮುದ್ರ ಮಥನ ನಡೆಸಲು ಮುಂದಾದಾಗ ಸಮುದ್ರ ಕುಸಿಯಲು ಆರಂಭಿಸುತ್ತದೆ ಆಗ ಮಹಾವಿಷ್ಣು ಆಮೆಯ (ಕೂರ್ಮಾವತಾರದಲ್ಲಿ) ರೂಪದಲ್ಲಿ ಅವತರಿಸಿ,ಮಂದರ ಪರ್ವತವನ್ನು ತನ್ನ ಬೆನ್ನಮೇಲಿರಿಸಿಕೊಂಡು ಸಮುದ್ರ ಕುಸಿತವನ್ನು ತಡೆದು ದೇವತೆಗಳಿಗೆ ನೇರವಾಗುತ್ತಾನೆ.ಈ ಹಿನ್ನಲೆಯಲ್ಲಿ ಜನರು ದೇವತೆಗಳ ಕಷ್ಟಗಳಿಗೆ ಸ್ಪಂದಿಸಿರುವ ಶ್ರೀಮನ್ನಾನಾರಯಣ ಕೂರ್ಮಾವತಾರಿಯಾಗಿ ಪರ್ವತವನ್ನೆ ತನ್ನ ಮೇಲಿರಿಸಿಕೊಂಡು ಧರ್ಮ ಸಂಸ್ಥಾಪನೆ ಮಾಡಿರುವ ಭಗವಂತ ಜನರ ಕಷ್ಟಗಳನ್ನು ಸಹ ತನ್ನ ಬೆನ್ನಮೇಲಿರಿಸಿಕೊಂಡು ನಿವಾರಿಸುತ್ತಾನೆ ಎಂಬ ನಂಬಿಕೆಯಿಂದ ಮನೆಯಲ್ಲಿ ಕೂರ್ಮಾವತಾರದ ವಿಗ್ರಹ ಇಟ್ಟು ಆರಾಧಿಸುತ್ತಾರೆ ಎನ್ನುವುದು ಮಾತು.