- ಆಕ್ಸಿಜನ್ ಕೊರತೆ ಆತಂಕದಲ್ಲಿ ಖಾಸಗಿ ಆಸ್ಪತ್ರೆ
- ಪೋಲಿಸ್ ಅಧಿಕಾರಿ ಸಮಯ ಪ್ರಜ್ಞೆ ಉಳಿದ 18 ಜನರು
- ಆಕ್ಸಿಜನ್ ಸಮಸ್ಯೆ ಉಂಟಾಗಿ, ಸೋಂಕಿತರು ನರಳಾಡುವ ಸ್ಥಿತಿ ಉಂಟಾಗಿದೆ.ತಡರಾತ್ರಿ ನಟ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ನಿಂದ 11 ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದೆ.
ನ್ಯೂಜ್ ಡೆಸ್ಕ್:-ಪೋಲಿಸ್ ಇನ್ಸೆಪೆಕ್ಟರ್ ಯಾಮಾರಿ ಕೈ ಚಲ್ಲಿದ್ದರೆ ಬರೋಬರಿ 18 ಜನ ಉಸಿರು ನಿಂತು ಹೋಗುತಿತ್ತು ಅವರ ಸಮಯ ಪ್ರಜ್ಞೆಯಿಂದ ಇವತ್ತು ಜನರ ಬದುಕಿದ್ದಾರೆ, ಇಲ್ಲವಾಗಿದ್ದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆದಂತೆ ಜನರು ಸತ್ತು ಹೋಗುತ್ತಿದ್ದರು.
ಸಮಯ ಪ್ರಜ್ಞೆ ತೋರಿ ಜನರ ಜೀವ ಉಳಿಸಿದ ಪೋಲಿಸ್ ಅಧಿಕಾರಿ ಹೆಸರು ಕೆ. ಪಿ. ಸತ್ಯನಾರಾಯಣ. ಇವರು ಯಲಹಂಕ ಟೌನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್. ಇವರು ಹೆಸರಿಗೆ ಪೋಲಿಸ್ ಅಧಿಕಾರಿಯಾದರು ಇವರ ಮುಖದಲ್ಲಿ ಎದ್ದು ಕಾಣೋದು ಅಕ್ಕರೆ ಮತ್ತು ಕರುಣೆ ತುಂಬಿದ ನೋಟ.
ಇವರ ಸಮಯ ಪ್ರಜ್ಞೆ ತೋರಿದ್ದು ಸೋಮವಾರ ಮಧ್ಯರಾತ್ರಿ ೧ ಗಂಟೆಸಮಯದಲ್ಲಿ ಯಲಹಂಕದ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಮುಕ್ತಾಯವಾಗಿದೆ.ಸುಮಾರು 18 ಜನ ಪ್ರಾಣವಾಯುವಿನ ಉಸಿರಾಡುತ್ತಿದ್ದವರ ಜೀವಕ್ಕೆ ಅಪಾಯ ಎನ್ನುವಂತ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷನ ಪೋಲಿಸ್ ಠಾಣೆಗೆ ಕರೆ ಮಾಡಿದ್ದಾರೆ ಅಲ್ಲಿದ್ದ ಇನ್ಸ್ ಪೆಕ್ಟರ್ ಸತ್ಯನಾರಾಯಣ ಆಸ್ಪತ್ರೆ ಬಳಿ ಬಂದಿರುತ್ತಾರೆ ಅಲ್ಲಿನ ಪರಿಸ್ಥಿತಿ ನೋಡಿದ ಅವರು ತಕ್ಷಣ ಸಮಯ ಪ್ರಜ್ಞೆ ತೋರಿ ಇಮ್ಮಡಿಯಟ್ ಆಗಿ ಖ್ಯಾತ ನಟ ಜನೋಪಕಾರಿ ಸೋನು ಸೂದ್ ಟ್ರಸ್ಟ್ ಸದಸ್ಯರಿಗೆ ಫೋನ್ ಮಾಡಿ ಅವರಿಂದ ಸರಿ ರಾತ್ರಿಯಲ್ಲಿ ಪ್ರಾಣವಾಯು(ಆಮ್ಲಜನಕ) ಸರಬರಾಜು ಮಾಡಿಸಿ, ರೋಗಿಗಳ ಪ್ರಾಣ ಕಾಪಾಡಿರುತ್ತಾರೆ. ಆಮ್ಲಜನಕ ತಂದಿದ್ದು ಸ್ಕೂಟರ್,ಖಾಸಾಗಿ ಕಾರುಗಳಲ್ಲಿ ಪ್ರಾಣವಾಯುವನ್ನು ತರಿಸಿ ಉಸಿರು ನಿಲ್ಲುವಂತಾಗಿದ್ದ ಸೋಂಕಿತರಿಗೆ ನೆರವಾಗಿದ್ದಾರೆ. ರೋಗಿಗಳು ಸಹಜ ಸ್ಥಿತಿಗೆ ಬರುವವರೆಗೂ ಇಡಿ ರಾತ್ರಿ ಆಸ್ಪತ್ರೆಯ ಆವರಣದಲ್ಲೇ ಕುತಿದ್ದಾರೆ ರೋಗಿಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟ ನಂತರ ಹೋರಟಿರುತ್ತಾರೆ.
ಇನ್ಸ್ ಪೆಕ್ಟರ್ ಸತ್ಯನಾರಾಯಣ ಎಲ್ಲೆ ಕಾರ್ಯ ನಿರ್ವಹಿಸಿರಲಿ ಅಲ್ಲಿ ಕಾನೂನು – ಸುವ್ಯವಸ್ಥೆ, ಅಪರಾಧ ತನಿಖೆ ಎಲ್ಲದರಲ್ಲೂ ನ್ಯಾಯ ನೀತಿಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಪಡೆದಿರುವ ದಕ್ಷ ಅಧಿಕಾರಿ.
ಇನ್ಸ್ ಪೆಕ್ಟರ್ ಸತ್ಯನಾರಾಯಣಗೆ ಧನ್ಯವಾದ ಹೇಳಿರುವ ಸೋನು
ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರ ಸಮಯ ಪ್ರಜ್ಞೆಯಿಂದ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡುವ ಮೂಲಕ ಜನರ ಜೀವ ಉಳಿಸಲು ಸಹಕಾರ ವಾಗಿದೆ ಎಂದು ಝೂಮ್ ಕಾಲ್ ಮೂಲಕ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರನ್ನು ಮಾತನಾಡಿರುವ ಸೋನು ಸೂದ್ ಕೃತಜ್ಞತೆ ಸಲ್ಲಿಸಿದ್ದಾರೆ ಬೆಂಗಳೂರಿಗೆ ಬಂದಾಗ ನಿಮ್ಮೊಂದಿಗೆ ಊಟ ಮಾಡುತ್ತೇನೆ ಎಂದು ತಿಳಿಸಿರುತ್ತಾರೆ.
ಮಾನವಿಯತೆಯ ಪ್ರತಿರೂಪ ಸೋನು ಸೂದ್.
ಸಿನಿಮಾಗಳಲ್ಲಿ ಖಳನಾಯಕನಾಗಿ ಬಯಂಕರವಾಗಿ ಅಬ್ಬರಿಸುವ ಬಹುಭಾಷಾ ನಟ ಸೋನು ಸೂದ್ ನಿಜ ಜೀವನದಲ್ಲಿ ಅಕ್ಷರಶಃ ಮಾನವಿಯತೆಯ ಪ್ರತಿರೂಪವಾಗಿದ್ದಾರೆ. ಅವರು ಮಾಡುತ್ತಿರುವ ಜನಪರ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಲಾಕ್ ಡೌನ್ ಆದಾಗಿನಿಂದನೂ ಸೋನು ಸೂದ್ ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ನೆರವಾಗಿದೆ. ಅವರ ಸಮಾಜ ಸೇವೆ ಅಷ್ಟಕ್ಕೆ ನಿಂತಿಲ್ಲ. ಲಾಕ್ ಡೌನ್ ಬಳಿಕವೂ ಸಮಾಜ ಸೇವೆ ಮುಂದುವರೆಸಿರುವ ಸೋನು ಸೂದ್ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಬಡವರಿಗೆ, ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿದ್ದಾರೆ.
ಮದನಪಲ್ಲಿ ರೈತನಿಗೆ ಟ್ರಾಕ್ಟರ್ ಕೊಡಿಸಿದ್ದು.
ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ರೈತರೊಬ್ಬರು ತನ್ನ ಹೊಲದಲ್ಲಿ ಎತ್ತುಗಳಿಲ್ಲದೆ ತನ್ನ ಇಬ್ಬರು ಹೆಣ್ಣು ಮಕ್ಕಳಿಂದಲೇ ನೇಗಿಲನ್ನು ಎಳೆಯಿಸಿ, ಭೂಮಿ ಉಳುಮೆ ಮಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು ಇದನ್ನು ನೋಡಿದ ಸೋನು.ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಮದನಪಲ್ಲಿ ರೈತ ಕುಟುಂಬದ ನಾಗೇಶ್ವರ್ ರಾವ್ ಅವರಿಗೆ ಟ್ರ್ಯಾಕಟರ್ ಕೊಡಿಸಿದ್ದಾರೆ.
ಕ್ಷಮೆ ಯಾಚಿಸಿರುವ ನಟ
ಸೋನು ಸೂದ್, ಸಾವಿರಾರು ಕೂಲಿ ಕಾರ್ಮಿಕರನ್ನು ಮರಳಿ ಮನೆಗೆ ಸೇರಿಸಿದ್ದಾರೆ. ವಿದೇಶದಲ್ಲಿ ಸಿಲುಕ್ಕಿದ್ದ ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕೆರೆಸಿಕೊಂಡಿದ್ದಾರೆ.ನಿರುದ್ಯೋಗಿ ವಲಸೆ ಕಾರ್ಮಿಕರಿಗೆ ಆರ್ಥಿಕ ಸಹಾಯಮಾಡಿ, ಉದ್ಯೋಗಾವಕಾಶ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ನೆರವಾಗುತ್ತಿರುವ ಸೋನು ಸೂದ್ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಇಷ್ಟೆಲ್ಲ ಸಂದೇಶಗಳು ಸಹಾಯಕೋರಿ ಬಂದರೆ ಹೇಗೆ ಸಹಾಯಮಾಡಲು ಸಾಧ್ಯ. ಈ ಬಗ್ಗೆ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಬೆರದುಕೊಂಡಿದ್ದಾರೆ, ” ಇಂದಿನ ಸಹಾಯ ಸಂದೇಶಗಳಿವು. ಸರಾಸರಿ ಇಷ್ಟು ಮನವಿಗಳು ಬಂದಿವೆ. ಎಲ್ಲರನ್ನೂ ಸಂಪರ್ಕ ಮಾಡುವುದು ಅಸಾಧ್ಯವಾಗಿದೆ. ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಂದೇಶಗಳು ಮಿಸ್ ಆಗಿದ್ದಾರೆ ಕ್ಷಮಿಸಿ” ಎಂದು ಕೋರಿದ್ದಾರೆ.
ಕರವೇ ರಾಜ್ಯ ಉಪಾಧ್ಯಕ್ಷರಾದ ಅಂಜನಗೌಡ್ರು ಖುದ್ದು ಹೋಗಿ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರನ್ನು ಭೇಟಿ ಮಾಡಿ ಅಭಿನಂದಿಸಿರುತ್ತಾರೆ.