ಕೋಲಾರ: ಕೋಲಾರ ನಗರದ ಹೆಗ್ಗುರುತು ಕ್ಲಾಕ್ ಟವರ್(ಗಡಿಯಾರ ಗೋಪುರ) ಮೇಲೆ ಜಿಲ್ಲಾಡಳಿತ ರಾಷ್ಟ್ರಧ್ವಜ ಹಾರಿಸಿ ಕೋಲಾರ ನಗರ ಸೇರಿದಂತೆ ರಾಷ್ಟ್ರ ಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕೋಲಾರ ನಗರದ ಪ್ರಮುಖ ವೃತ್ತ ಕ್ಲಾಕ್ ಟವರ್(ಗಡಿಯಾರ ಗೋಪುರ) ವೃತ್ತ ಎಂದೆ ಖ್ಯಾತಿ ಅಲ್ಲಿನ 40 ಅಡಿ ಗೋಪುರದ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮಾಜದವರು ಹೆಚ್ಚು ಜನ ತಮ್ಮ ವ್ಯಾಪಾರ ವ್ಯವಹಾರ ನಡೆಸುತ್ತ ವಾಸಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಸಿರು ಬಣ್ಣ ಬಳಿಯಲಾಗಿತ್ತು ಇದರಿಂದ ಮತ್ತಷ್ಟು ವಿವಾದ ಗ್ರಸ್ತ ವಿಚಾರವಾಗಿ ಮಾರ್ಪಟ್ಟಿತು ಹಬ್ಬದ ಸಂದರ್ಭಗಳಲ್ಲಿ ಹಸಿರು ಭಾವುಟ ಹಾರಿಸುವುದು ಹಸಿರು ಬಣ್ಣದ ಸುನೇರಿ ಪೇಪರ್ ಗಳನ್ನು ಅಂಟಿಸುವುದು ವೃತ್ತವನ್ನು ಹಸಿರುಮಯವಾಗಿ ಮಾಡುವುದು ಸಾಮಾನ್ಯವಾಗಿತ್ತು ಇದು ಹಲವರ ಕೆಂಗಣ್ಣಿಗೆ ಕಾರಣವಾಗಿ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.
ಕೋಲಾರದ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಪ್ರದೇಶದ ಹಸಿರು ಚಟುವಟಿಕೆಗಳಿಗೆ ವಿರೋಧಮಾಡುತ್ತಿದ್ದರು ನಂತರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ರ್ಯಾಲಿ ನಡೆಸಿದಾಗ ಮೆರವಣಿಗೆ ಹೋರಟ ಬಿಜೆಪಿ ಕಾರ್ಯಕರ್ತರ ಗುಂಪು ಕ್ಲಾಕ್ಟವರ್ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ವಿಧಿಸಿತು ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು ಈ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತಿತ್ತು, ಇತ್ತಿಚಿನ ಬೆಳವಣಿಗೆ ಎಂಬಂತೆ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಮೇಲೆ ತ್ರಿರಂಗ ಧ್ವಜ ಹಾರಿಸಲು ಅವಕಾಶ ನೀಡಿ ಎಂದು ಜಿಲಾಡಳಿತ ವಿಶೇಷವಾಗಿ ಪೋಲಿಸ್ ಜಿಲ್ಲಾ ಆಧಿಕ್ಷಕರಿಗೆ ಪತ್ರ ಬರೆದು ಅನುಮತಿ ಕೋರಿದ್ದರು ಇದಕ್ಕೆ ಪೋಲಿಸ್ ಜಿಲ್ಲಾ ಆಧಿಕ್ಷಕ ದೇವರಾಜ್ ಅನುಮತಿ ನಿರಾಕರಿಸಿ ಮತ್ತೊಂದು ದಿನ ನಿಗದಿ ಮಾಡುತ್ತೇವೆ ಎಂದು ತಿಳಿಸಿದ್ದರು ಅದರಂತೆ ಇಂದು ಕ್ಲಾಕ್ ಟವರ್ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದ ಪೋಲಿಸ್ ಇಲಾಖೆ ಹೊರಗಿನವರಿಗೆ ಪ್ರವೇಶ ನಿಷೇಧಿಸಿ ಇಡಿ ಪ್ರದೇಶವನ್ನು ಲಾಕ್ಡೌನ್ ಮಾಡಿ ಬೆಂಗಳೂರಿನಿಂದ ತರಿಸಿದ್ದ ವಿಶೇಷ ಕ್ರೇನ್ ಗಳ ಮೂಲಕ ಕ್ಲಾಕ್ ಟವರ್(ಗಡಿಯಾರ ಗೋಪುರ) ಅನ್ನು ಸ್ವಚ್ಚ ಗೊಳಿಸಿ ಅದರ ಮೇಲೆ ಹಾರುತ್ತಿದ್ದ ಹಸಿರು ಧ್ವಜವನ್ನು ತೆರವು ಗೊಳಿಸಿ ಶ್ವೆತ ಬಣ್ಣ ಬಳಿಸಿ ಮೇಲೆ ನಾಲ್ಕು ಭಾಗದ ಸುತ್ತ ತ್ರಿರಂಗ ಬಣ್ಣ ಬಳಿಸಿ ನಂತರ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು ಈ ಸಂದರ್ಭದಲ್ಲಿ ಇಡಿ ಜಿಲ್ಲಾಡಳಿತ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಇದ್ದರು ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಪೋಲಿಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ಹಾಡಲಾಯಿತು.
ರಾಷ್ಟ್ರಧ್ವಜ ಕ್ಲಾಕ್ ಟವರ್ ಮೇಲೆ ಹಾರಾಡಿ ಆತಂಕದಲ್ಲಿದ್ದ ಪ್ರಕರಣ ಸುಖಾಂತವಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ವೆಂಕಟರಾಜ್ ಮತ್ತು ಎಸ್ಪಿ ಡಿ.ದೇವರಾಜ್ ಪರಸ್ಪರ ಹಸ್ತ ಲಾಘವ ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲಾಧಿಕಾರಿ ವೆಂಕಟರಾಜು ಕ್ಲಾಕ್ ಟವರ್ ನಗರಸಭೆ ಆಸ್ತಿಯಾಗಿದ್ದು ಇದು ಸರ್ಕಾರದದ್ದೆ ವಿವಾದ ಬೇಡ ಎಂದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ ಧ್ವಜ ಹಾರಿಸಲಾಯಿತು ಎಂದರು.
ಇಡೀ ಕಾರ್ಯಚಾರಣೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ ಎಸ್ಪಿ ಡಿ.ದೇವರಾಜ್ ಮಾತನಾಡಿ, ಕೋಲಾರ ಜಿಲ್ಲಾಧಿಕಾರಿ ವೆಂಕರಾಜು ಅವರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರಿಗೆ ಮನವರಿಕೆ ಮಾಡಲಾಯಿತು. ರಾಷ್ಟಧ್ವಜ ಹಾರಿಸಲು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬದಲಾಗಿ ಸಹಕಾರ ನೀಡಲು ಮುಂದಾದರು ವಿವಾದಕ್ಕೆ ಅವಕಾಶ ಇಲ್ಲದೆ ಎಲ್ಲರು ಸಹಕಾರ ನೀಡಿದ್ದಾರೆ ಶಾಂತಿಯುತವಾಗಿ ಸಮಸ್ಯೆ ಬಗೆ ಹರಿದಿದೆ ಎಂದರು.
ಯಾರು ನಿರ್ಮಿಸಿದ್ದ ಕ್ಲಾಕ್ ಟವರ್(ಗಡಿಯಾರ ಗೋಪುರ)
ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಭಾವಿ ಸ್ಥಿತಿವಂತ ವ್ಯಾಪಾರಿಯಾಗಿದ್ದ ಹಾಜೀ ಮಹಮದ್ ಮುಸ್ತಾಫ ಸಾಬ್ ಕೋಲಾರದಲ್ಲಿ ಹೆಗ್ಗುರುತಾಗಿರಲಿ ಎಂದು ಕ್ಲಾಕ್ ಟವರ್(ಗಡಿಯಾರ ಗೋಪುರ) ನಿರ್ಮಿದ ಎಂದು ಹೇಳಲಾಗುತ್ತಿದೆ.ಅಂದಿನ ಮೈಸೂರು ಸಂಸ್ಥಾನದ ಯುವರಾಜರಾಗಿದ್ದ ನರಸಿಂಹರಾಜ ಓಡೆಯರ್1938 ರಲ್ಲಿ ಕ್ಲಾಕ್ಟವರ್ ಉದ್ಘಾಟನೆ ಮಾಡಿದ್ದರು.
ಏಳು ದಶಕಗಳ ನಂತರ ರಾಷ್ಟ್ರಧ್ವಜ, ಹರ್ಷ ವ್ಯಕ್ತಪಡಿಸಿದ ಸಂಸದ ಮುನಿಸ್ವಾಮಿ
ಕೋಲಾರ ಸಂಸದ ಮುನಿಸ್ವಾಮಿ ಮಾತನಾಡಿ, ಏಳು ದಶಕಗಳ ರಾಷ್ಟ್ರ ಪ್ರೇಮಿಗಳ ಕನಸು ನನಸಾಗಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದುವರೆಗೂ ಅಲ್ಲಿ ರಾಷ್ಟಧ್ವಜ ಹಾರಿಸಲು ಸಾಧ್ಯವಾಗಿಲ್ಲ. ಕೋಲಾರ ಜನತೆಯ 74 ವರ್ಷಗಳ ನಿತಂರ ಪ್ರಯತ್ನ ಇಂದು ನನಸಾಗಿದೆ. ಡೊಂಗಿ ಸೆಕ್ಯೂಲರ್ ರಾಜಕಾರಿಣಿಗಳ ಓಟ್ ಬ್ಯಾಂಕ್ ಕುತಂತ್ರದಿಂದ ಸಾಧ್ಯಗಿರಲಿಲ್ಲ. ರಾಷ್ಟಧ್ವಜ ನನ್ನ ಸಂಕಲ್ಪ ನೇರವೇರಿದ್ದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಾಷ್ಟಧ್ವಜ ಹಾರಿಸುತ್ತಿದ್ದಂತೆ ಅಲ್ಲಿದ್ದ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಅಂಜುಮನ್ ಸಮಸ್ಥೆಯವರು ಭಾರತ್ ದೇಶ ಹಮಾರ ಹೈ ಹಿಂದುಸ್ಥಾನ್ ಹಮಾರ ಹೈ ಭಾರತ ಮಾತೆಗೆ ಜೈ ಎಂದು ಘೋಷಣೆಗಳನ್ನು ಕೂಗಿದರು.
ವಿಶೇಷ ವರದಿ:ಚ.ಶ್ರೀನಿವಾಸಮೂರ್ತಿ