ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಸರೋಜಿನಿರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸುಮಾರು 50 ಲಕ್ಷ ವೆಚ್ಚದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠವನ್ನು ನಿರ್ಮಿಸಿ ರಾಯರ ಮೃತ್ತಿಕಾ ಬೃಂದಾವನವನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ.
ವಿದ್ಯತ್ ಕಂಟ್ರಾಕ್ಟರ್ ಬಾಬುರೆಡ್ಡಿ ಉಪಾದ್ಯಾಯ ಪದ್ಮನಾಭ್ ಕುಟುಂಬದವರು ಪ್ರಮುಖದಾನಿಗಳಾಗಿ ನಿರ್ಮಾಣ ಮಾಡಿರುವಂತ
ರಾಯರ ಮಠದಲ್ಲಿ ರಾಯರ ಮೃತ್ತಿಕಾ ಬೃಂದಾವನ,ಶ್ರೀನಿವಾಸ ದೇವರ, ಮುಖ್ಯ ಪ್ರಾಣದೇವರ,ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ ಇಲ್ಲಿ ಹಿಂದೆ ಮುಖ್ಯಪ್ರಾಣದೇವರು ಶ್ರೀ ಅಂಜನೇಯ ಸ್ವಾಮಿ ದಕ್ಷಿಣಾಮುಖವಾಗಿ ಸಣ್ಣ ದೇವಾಲಯ ಇದ್ದು ಈಗ್ಗೆ 40-50 ವರ್ಷಗಳ ಹಿಂದೆ ಸುಖತೀರ್ಥಾಚಾರ್ ಕಾಲದಲ್ಲಿ ಅಲ್ಲಿ ನಿತ್ಯ ಪೂಜೆ ಕಾರ್ಯಕ್ರಮಗಳು ನಡೆಯುತಿತ್ತು ದಕ್ಷಿಣಾಮುಖವಾಗಿರುವಂತ ಅಂಜನೇಯನ ಪೂಜೆ ಸಲ್ಲಿಸಿದರೆ ಗ್ರಹ ದೋಷಗಳು ನಿವಾರಣೆಯಾಗುತ್ತದೆ ಎಂಬ ಪ್ರತಿತಿ ಸ್ಥಳೀಯರಲ್ಲಿ ಇತ್ತು ಇತ್ತಿಚಿಗೆ ಸುಖತೀರ್ಥಾಚಾರ್ ಕುಟುಂಬದ ಶ್ರೀನಾಥ್ ಭಕ್ತಾದಿಗಳ ನೆರವಿನಿಂದ ರಾಘವೇಂದ್ರ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೇರವೇರಿಸಲಾಗುತಿತ್ತು ಅಲ್ಲಿ ಶ್ರೀ ಅಂಜನೇಯ ಸ್ವಾಮಿ ದಕ್ಷಿಣಾಮುಖವಾಗಿ,ರಾಯರ ಬೃಂದಾವನ ಪೂರ್ವಾಭಿಮುಖವಾಗಿ ಪೂಜಾಕಾರ್ಯಕರಮಗಳನ್ನು ನಡೆಸಲಾಗುತಿತ್ತು ಈ ಬಗ್ಗೆ ವಾಸ್ತು ತಙ್ಞರ ಸೂಚನೆಯಂತೆ ರಾಯರ ಬೃಂದಾವನ ಸ್ಥಾಪಿಸಿದ್ದ ಗರ್ಭ ಗುಡಿ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ದಾನಿಗಳು ತಾವಾಗಿ ಮುಂದೆ ಬಂದ ಹಿನ್ನಲೆಯಲ್ಲಿ ಭವ್ಯವಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣ ಮಾದಲು ಸಹಕಾರಿಯಾಗಿದೆ ಎಂದು ಶ್ರೀನಾಥಚಾರ್ಯ ಹೇಳುತ್ತಾರೆ.
ಮೂರು ದಿನಗಳ ಕಾಲ ನಡೆದ ರಾಯರ ಮೃತ್ತಿಕಾ ಬೃಂದಾವನ ಸ್ಥಾಪನೆಯನ್ನು ಕರಕಮಲ ಸಂಜಾತ ಸುವಿದ್ಯೇಂಧ್ರರ್ತರ್ಥ ಶ್ರೀಪಾದರು ನೇರವೇರಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಮನುಷ್ಯನ ಜೀವನದಲ್ಲಿ ಎಲ್ಲವೂ ವ್ಯವಹಾರಿಕವಾಗುತ್ತಿರುವುದರಿಂದ ಮಾನಸಿಕ ನೆಮ್ಮದಿ ಬಾಂಧವ್ಯಗಳು ಇಲ್ಲವಾಗುತ್ತಿದೆ ಇದಕ್ಕೆ ಪರಿಹಾರ ಎಂದರೆ ಆದ್ಯಾತ್ಮಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಪ್ರತಿ ಊರಿನಲ್ಲೂ ರಾಯರ ಮೃತ್ತಿಕಾ ಬೃಂದಾವನ ಸ್ಥಾಪನೆ ಮಾಡುವುದರಿಂದ ಊರು ಅಲ್ಲಿನ ಜನರಿಗೆ ರಾಯರು ಅನುಗ್ರಹಿಸುತ್ತಾರೆ ಇದರಿಂದ ಜನರು ಚೈತನ್ಯವಂತರಾಗಿರುತ್ತಾರೆ ಎಂದರು
ಮೃತ್ತಿಕಾ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಪೂಜಾ ಕಾರ್ಯಗಳು ನೇರವೇರಿಸಲಾಯಿತು
ರಾಯರ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಕುಮಾರ್ ದಿಂಬಾಲ್ ಅಶೋಕ್, ಬಿ.ಎಂ.ಪ್ರಕಾಶ್,ಬಿ.ಎನ್.ಸೂರ್ಯನಾರಾಯಣ,ದೇವಾಲಯದ ಪ್ರಮುಖರಾದ ಚೇತನ್, ಶ್ರೀನಾಥ್,ರಾಮು,ಗುರುರಾಜ್, ಮುಂತಾದವರು ಇದ್ದರು.