- ಬಿಸಿಲ ಝಳದಿಂದಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗೆ ಹಾಹಾಕಾರ
- ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದೆ
- ವೃದ್ಧರು,ಬಾಣಂತಿಯರು ಮತ್ತು ಮಕ್ಕಳ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಲಸೀಮೆ ಪ್ರದೇಶ ಎಂದು ಗುರುತಿಸಿರುವ ಬಂಡೆಗಳ ನಾಡು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸೂರ್ಯ ಝಳುಪಿಸುತ್ತಿದ್ದಾನೆ ದಿನೆ ದಿನೆ ತಾಪಮಾನ ಏರಿಕೆಯಾಗುತ್ತಿದೆ ಇದರಿಂದ ಜನ ತತ್ತರಿಸಿದ್ದಾರೆ ವಿಶೇಷವಾಗಿ ನಾಲ್ಕೈದು ದಿನಗಳಿಂದ ಸೂರ್ಯನ ಪ್ರಖರತೆ ಏರಿಕೆಯಾಗುತ್ತಿದೆ ಮುಂಜಾನೆ ಸೂರ್ಯ ಹುಟ್ಟುತ್ತಲೆ ಧಗೆಯನ್ನು ಜೊತೆಗೆ ಕರೆತಂದಿದ್ದಾನೇನೋ ಎನ್ನುವಂತೆ ಶುಕ್ರವಾರದಿಂದ ಇಚಿಗೆ ಬೆಳಗಾನೆ ಸೂರ್ಯನ ಪ್ರಖರತೆ ಇರುತ್ತದೆ, ಮಧ್ಯಾನದ ಹೊತ್ತಿಗೆ ಸೂರ್ಯ ಭೂಮಿಗೆ ಬಂದಿದ್ದಾನೇನೊ ಎನ್ನುವಂತೆ ಭೂಮಿ ಕೆಂಡದಂತೆ ಸುಡುತ್ತಿದೆ ಮನೆಯ ಚಾವಣಿ ಕಾದ ಕಾವಲಿಯಾಗುತ್ತದೆ ಡಾಂಬರು ರಸ್ತೆಗಳು ಬಿಸಿಲ ತಾಪವನ್ನು ಉಗುಳುತ್ತಿವೆ.ಬಿಸಿಲ ಬೇಗೆಗೆ ಮೈತುಂಬಾ ಬೆವರು ಸುರಿಯುತ್ತಿದ್ದು ಬೇಗೆಯಿಂದ ಬೆಂದು ಹೋಗಿರುವ ಜನತೆ ಬಿಸಿಲಿನ ತಾಪದಿಂದಾಗಿ ಹೇಗಪ್ಪಾ ಕಾಲ ಕಳೆಯೋದು ಎನ್ನುತ್ತಾರೆ.ಮನೆಯಲ್ಲಿ ಕಚೇರಿಯಲ್ಲಿ ಕೂತವರ ತಲೆಯ ಮೇಲೆ ಫ್ಯಾನ್ ತಿರುಗುತ್ತಲೆ ಇರಬೇಕು ಇಲ್ಲ ಎಂದರೆ ಇಲ್ಲದ ಕಿರಿಕಿರಿ ಶುರುವಾಗುತ್ತದೆ ಎಂತದೊ ಕಳೆದುಕೊಂಡವರಂತೆ ಪರಿತಪಿಸುವಂತಾಗಿದೆ.
ಮಧ್ಯಾಹ್ನವಾಗುತ್ತಿದ್ದಂತೆಯೇ ಬೀದಿಗಳಲ್ಲಿ ಜನ ಸಂಚಾರ ತನ್ನಷ್ಟಕ್ಕೆ ತಾನೆ ಇಳಿಕೆಯಾಗುತ್ತದೆ.ಹವಾಮಾನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಅತಿ ಹೆಚ್ಚು ಉಷ್ಣಾಂಶ ೪೦ ಡಿಗ್ರಿ ದಾಟಿದೆ ಎನ್ನಲಾಗುತ್ತಿದೆ ಜನತೆ ಅದರಲ್ಲೂ ವೃದ್ದರು ಮಹಿಳೆಯರು ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಇಂತಹವರು ಸಾದ್ಯವಾದಷ್ಟು ಮನೆಯೊಳಗೆ ಇರುವಂತಾಗಬೇಕು ಕೆಲಸ ಕಾರ್ಯಗಳು ಇದ್ದರೆ ಬೆಳಿಗ್ಗೆ ೧೦ ಗಂಟೆಯೊಳಗಾಗಿ ಮುಗಿಸಿಕೊಳ್ಳುವಂತೆ ಹವಮಾನ ತಙ್ಞರು ಹೇಳುತ್ತಾರೆ ವಿಶೇಷವಾಗಿ ವೃದ್ಧರು, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ ಅವರನ್ನು ಮನೆಯಲ್ಲೇ ಇರಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ. ಆರೋಗ್ಯದ ದೃಷ್ಟಿಯಿಂದ ಅವರಿಗೆ ಒಆರ್ಎಸ್, ನಿಂಬೆ ಹಣ್ಣಿನ ನೀರು, ತೆಂಗಿನ ನೀರು, ಲಸ್ಸಿ ಮತ್ತು ಮಜ್ಜಿಗೆ ಕುಡಿಯಲು ನೀಡುವುದು ಉತ್ತಮ ಎನ್ನುತ್ತಾರೆ.ರಿಫ್ರೀಝೇಟರನಲ್ಲಿ ಇಟ್ಟಿರುವಂತ ಅತಿ ತಣ್ಣಗಿನ ಪಾನೀಯಗಳು ಪದಾರ್ಥಾಗಳು ತಿನ್ನುವುದು ಸೂಕ್ತ ಅಲ್ಲ ಆದರೂ ಬಿಸಿಲಿನ ತಾಪವನ್ನು ತಡೆಯಲು ಜನತೆ ಅಲ್ಪಮಟ್ಟಿನ ಪರಿಹಾರ ಎನ್ನುವಂತೆ ತಂಪು ಪಾನೀಯ, ಎಳ ನೀರು, ಕಲ್ಲಂಗಡಿ, ಸೋಡಾ, ಐಸ್ ಕ್ರೀಂಗಳ ಮೋರೆ ಹೋಗಿದ್ದಾರೆ.
ಸೂರ್ಯನ ತಾಪಕ್ಕೆ ತತ್ತರಿಸಿರುವುದು ಬರಿ ಜನರಲ್ಲ ಪ್ರಾಣಿ ಪಕ್ಷಿಗಳು ಜಾನುವಾರುಗಳು ತತ್ತರಿಸಿವೆ