ತಿರುಮಲ: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಕ್ರಾಂತಿ ಮುನ್ನಾ ದಿನವಾದ ಬುಧವಾರ ತಿರುಮಲ ಶ್ರೀನಿವಾಸನನ್ನು ದರ್ಶನ ಮಾಡಲು 34,768 ಭಕ್ತರು ಭೇಟಿ ನೀಡಿದ್ದು, 13,462 ಭಕ್ತರು ತಲೆ ಮುಡಿ ನೀಡಿರುತ್ತಾರೆ,ಹುಂಡಿ ಆದಾಯ ರೂ. 2.63 ಕೋಟಿ ರೂ ಎಂದು ಟಿಟಿಡಿ ಅಧಿಕಾರಿಗಳು ಹೇಳಿರುತ್ತಾರೆ.
ಇಂದಿಗೆ ವೆಂಕಟೇಶ್ವರನ ಸನ್ನಿಧಾನದಲ್ಲಿ ಧನುರ್ಮಾಸದ ಪೂಜೆಗಳು ಕೊನೆಗೊಳ್ಳುತ್ತವೆ. ಈ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಶುಕ್ರವಾರದಿಂದ ಮುಂಜಾನೆ ನಡೆಯುವಂತ ಸೇವೆಗಳಾದ ಸುಪ್ರಭಾತ ಸೇವೆ ಪುನರಾರಂಭಗೊಳ್ಳಲಿದ್ದು, ಶುಕ್ರವಾರ ಗೋದಾದೇವಿ ಪರಿಣಯೋತ್ಸವ ಮತ್ತು ಪಾರ್ವತಿಮಾತೆ ಹಬ್ಬವು ನಡೆಯಲಿದೆ ಎಂದು .ಟಿಟಿಡಿ ಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ 16 ರಂದು ಧನುರ್ಮಸ ಪೂಜೆ ಪ್ರಾರಂಭವಾದ ಹಿನ್ನಲೆಯಲ್ಲಿ ಸುಪ್ರಭಾತ ಸೇವೆ ಬದಲಿಗೆ ಗೋದಾ ತಿರುಪ್ಪವಾಯಿ ಪಠಣ ಪ್ರಾರಂಭ ಮಾಡಲಾಗಿತ್ತು.