ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಅತೀ ಹೆಚ್ಚಿನ ಸಕ್ರಿಯ ಹೊಂದಿರುವ ಪಟ್ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ .
ನ್ಯೂಜ್ ಡೆಸ್ಕ್:-ಕರ್ನಾಟದಲ್ಲಿ ಗುರುವಾರ ಕೊರೋನಾ ಸೊಂಕಿತರ ಸಂಖ್ಯೆ 4,234 ತಲುಪಿದೆ ಇದುವರಿಗೂ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 10 ಲಕ್ಷ ಗಡಿ ದಾಟಿದೆ. ಇದು ದೇಶದಲ್ಲಿ 10 ಲಕ್ಷದ ಗಡಿ ದಾಟಿದ ಮೂರನೇ ರಾಜ್ಯ ಗುರುತಿಸಲಾಗುದೆ!
ಕಳೆದ ವರ್ಷ ಮಾ.8ರಂದು ರಾಜ್ಯದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು, ಮೊದಲ ಒಂದು ಲಕ್ಷ ಪ್ರಕರಣಗಳು 108 ದಿನಗಳಲ್ಲಿ ವರದಿಯಾದರೇ, ಕಡೆಯ ಒಂದು ಲಕ್ಷ ಪ್ರಕರಣಗಳು 110 ದಿನಗಳಲ್ಲಿ ವರದಿಯಾಗಿವೆ. ಈ ನಡುವೆ ಸೋಂಕಿತರ ಸಂಖ್ಯೆ ಏರಿಳಿತ ಕಂಡಿದೆ. ಈ ವರ್ಷದ ಮೊದಲ ತಿಂಗಳಲ್ಲಿ ಕೆಲ ದಿನಗಳು ಪ್ರಕರಣಗಳ ಸಂಖ್ಯೆ 500ರ ಗಡಿಯ ಆಸುಪಾಸಿಗೆ ಇಳಿಕೆಯಾಗಿತ್ತು. ಈಗ ಮತ್ತೆ ಏರುತ್ತಿದೆ. ಮಾರ್ಚ್ ಒಂದೇ ತಿಂಗಳಲ್ಲಿ 45,753 ಮಂದಿ ಸೋಂಕಿತರಾಗಿದ್ದಾರೆ.
ರಾಜ್ಯದಲ್ಲಿ ಇದೀಗ ಒಟ್ಟಾರೆ ಶೇ.4.65ರಷ್ಟು ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 265 ಮಂದಿ ಅಪಾಯ ಸ್ಥಿತಿಯಲ್ಲಿದ್ದಾರೆ. ಇವರೆಲ್ಲರಿಗೂ ತೀವ್ರ ನಿಘಾ ಗಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ಹೇಳಲಾಗಿದೆ.
ಗುರುವಾರ ಒಂದೇ ದಿನ ಮಹಾಮಾರಿ ವೈರಸ್ ರಾಜ್ಯದಲ್ಲಿ ಒಟ್ಟು 18 ಮಂದಿಯನ್ನು ಬಲಿ ತಗೆದುಕೊಂಡಿದೆ, ಇದರೊಂದಿಗೆ ಸಾವಿನ ಸಂಖ್ಯೆ 12,585ಕ್ಕೆ ಏರಿಗೆಯಾಗಿದೆ.
ರಾಜ್ಯದಲ್ಲಿ ನಿನ್ನೆ ಪತ್ತೆಯಾದ ಒಟ್ಟಾರೆ 4,234 ಸೋಂಕಿತರ ಪೈಕಿ ಬೆಂಗಳೂರಿನಲ್ಲಿಯೇ ಅರ್ಧದಷ್ಟು ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ನಿನ್ನೆ 2,906 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಾಗಿ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಶೀಘ್ರಗತಿಯಲ್ಲಿ ಪತ್ತೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ.95.6ಕ್ಕೆ ತಲುಪಿದೆ. ಹಾಗು ಸಾವಿನ ಶೇಕಡಾವಾರು 1.25ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಪತ್ತೆಯಾಗಿರುವ ಪ್ರತೀ 100 ಕೇಸ್ ಗಳ ಪೈಕಿ 96 ಮಂದಿ ಗುಣಮುಖರಾಗುತ್ತಿದ್ದು, ಒಬ್ಬರು ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿದ್ದು, ಹೊಸ ಸೋಂಕು ಪ್ರಕರಣ ಪ್ರತೀನಿತ್ಯ ಶೇ.0.3ರಷ್ಟು ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಪ್ರತೀ 10 ಲಕ್ಷ ಜನರ ಪೈಕಿ 3,25,408 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 5 ಜಿಲ್ಲೆಗಳಲ್ಲಿ ಬೆಂಗಳೂರು ನಗರ (21,798), ಕಲಬುರಗಿ (1,244), ಬೀದರ್ (1,059), ತುಮಕೂರು (727), ಬೆಂಗಳೂರು ಗ್ರಾಮಂತರ (604) ಪ್ರತೀನಿತ್ಯ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.
- ಮಾಸ್ಕ್ ದರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
- ಆದಷ್ಟು ಜನಸಂದಣಿ ಪ್ರದೇಶ, ಸಭೆ, ಸಮಾರಂಭಗಳಿಂದ ದೂರ ಉಳಿಯಿರಿ
- ಅವಶ್ಯಕತೆ ಇದ್ದರಷ್ಟೆ ಮಾತ್ರ ಜನಸಂದಣಿ ಪ್ರದೇಶಕ್ಕೆ ಹೋಗಿ