ರೈತ ಹೋರಾಟವನ್ನು ದುಷ್ಕರ್ಮಿಗಳು ದುರ್ಬಳಿಕೆ ಮಾಡಿಕೊಂಡರ
ಪ್ರತ್ಯೇಕತಾವಾದಿ ಖಲಿಸ್ತಾನ್ ಸಂಘಟನೆ ಭಾಗಿಯಾಗಿರುವ ಶಂಖೆ!
ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಟ್ರ್ಯಾಕ್ಟರ್ ನುಗ್ಗಿಸಿ ಬೆದರಿಕೆ
ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರದಲ್ಲಿ ಗಾಯಗೊಂಡ 83 ಪೊಲೀಸರು
ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ಹೆಚ್ಚು ಪೋಲಿಸರ ನಿಯೋಜನೆಗೆ ಸೂಚನೆ
ಕೆಂಪು ಕೋಟೆಯ ಮೇಲೆ ಇತರೆ ಧ್ವಜ ಹಾರಿಸಿದ ಘಟನೆ
ಧ್ವಜ ವಿವಾದ ಕೃತ್ಯಕ್ಕೆ ವ್ಯಾಪಕ ಜನಾಕ್ರೋಶ
ನ್ಯೂಜ್ ಡೆಸ್ಕ್:ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದಿಲ್ಲಿ ಬಳಿ ರೈತ ಸಂಘಟನೆಗಳು ನಡೆಸುತ್ತಿದ್ದ ಹೋರಾಟ ಮಂಗಳವಾರ ವ್ಯಾಪಕ ಹಿಂಸಾಚಾರಕ್ಕೆ ದಾರಿಯಾಗಿದೆ. ಶಾಂತಿಯುತ ಹೋರಾಟ ಅರಾಜಕತೆಯ ಹಾದಿಗೆ ತಿರುಗಿದೆ. ಇದರೊಂದಿಗೆ ಕಳೆದ 60 ದಿನಗಳಿಂದ ಕಾಯ್ದುಕೊಂಡು ಬರಲಾಗಿದ್ದ ಶಾಂತಿ ಮಂತ್ರ ಒಂದೇ ದಿನದಲ್ಲಿ ದಾರಿ ತಪ್ಪಿ ಗಂಭಿರತೆಯನ್ನು ಕಳೆದುಕೊಂಡು,ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಹೋರಾಟದ ಮುಂಚೂಣಿಯಲ್ಲಿದ್ದ ರೈತ ಮುಖಂಡರು ದಿಲ್ಲಿಯ ಹಿಂಸಾಚಾರದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಹೋರಾಟ ಹಾದಿ ತಪ್ಪಿದೆ ಎಂದು ನೋವು ಬೇಸರ ತೋಡಿಕೊಂಡಿದ್ದಾರಂತೆ,ರೈತರ ನಡುವೆ ಸಮಾಜಘಾತುಕ ಶಕ್ತಿಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತ ರೈತ ಹೋರಾಟದ ಅವಕಾಶ ಬಳಸಿಕೊಂಡಿದೆ ಎಂಬ ಸರಕಾರದ ವಾದವು ಸತ್ಯ ಎನ್ನಲಾಗುತ್ತಿದೆ. ರೈತರು ಶಾಂತಿಯುತವಾಗಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಯೋಜಿಸಿದ್ದರೂ, ಪ್ರತಿಭಟನಾಕಾರರ ಸೋಗಿನಲ್ಲಿ ಕೆಲ ಸಿಖ್ ಮೂಲಭೂತವಾದಿಗಳು ಹಾಗೂ ಸಮಾಜಘಾತುಕ ಶಕ್ತಿಗಳು ಉದ್ಧಟತನದಿಂದ ವರ್ತಿಸಿ ಇಡೀ ಹೋರಾಟವನ್ನು ರೂಪು ರೇಷೆಗಳನ್ನು ಬದಲಿಸಿ ತಮ್ಮ ಹತೋಟಿಗೆ ತಗೆದುಕೊಂಡು ಹೋರಾಟದ ಗಂಭಿರತೆಯನ್ನು ಹಾಳು ಮಾಡಿವೆ ಎನ್ನಲಾಗುತ್ತಿದೆ.
ದಿಲ್ಲಿಯ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳ ಮೂಲಕ ಹೊರಡುವ ಟ್ರ್ಯಾಕ್ಟರ್ ರಾರಯಲಿಯು ಪೊಲೀಸರು ಅನುಮತಿ ನೀಡಿದ ಮಾರ್ಗದಲ್ಲಿ ಸಂಚರಿಸಿ,ಮತ್ತದೇ ಗಡಿಗಳಿಗೆ ವಾಪಸಾಗಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಮಂಗಳವಾರ ಟ್ರ್ಯಾಕ್ಟರ್ ಪರೇಡ್ ವೇಳೆ, ಕೆಲವೇ ನಿಮಿಷಗಳಲ್ಲಿ ಎಲ್ಲವೂ ಆಯೋಮಯವಾಗಿದ್ದು ನಿಗದಿತ ಮಾರ್ಗಗಳನ್ನು ಕೈ ಬಿಟ್ಟು ಸಿಕ್ಕ ಸಿಕ್ಕ ಕಡೆಗಳಲ್ಲಿ ಪ್ರತಿಭಟನಾಕಾರರು ನಗರದ ಮದ್ಯದಲ್ಲಿ ನುಗ್ಗಿರುತ್ತಾರೆ. ಸರಕಾರದ ಅಧಿಕೃತ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಟ್ರ್ಯಾಕ್ಟರ್ ರಾರಯಲಿ ನಡೆಸಲು ಪೊಲೀಸರು ಸೂಚಿಸಿದ್ದರೂ, ಎಲ್ಲಾ ಷರತ್ತುಗಳನ್ನು ಉಲ್ಲಂಘಿಘಿಸಿ ಮುಂಜಾನೆ 7 ಗಂಟೆಗೇ ರಾರಯಲಿ ಆರಂಭಿಸಲಾಯಿತಾದರೂ ಅತ್ತ ಪರೇಡ್ ನಡೆಯುತ್ತಿದ್ದರೆ, ಮತ್ತೊಂದೆಡೆ ಟ್ರ್ಯಾಕ್ಟರ್, ಬೈಕ್, ಕುದುರೆ ಹಾಗೂ ಕಾಲ್ನಡಿಗೆ ಜಾಥಾ ಮೂಲಕ ಜನಸಾಗರವೇ ಕೆಂಪುಕೋಟೆಯತ್ತ ಲಗ್ಗೆ ಇಟ್ಟಿತು.ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ತೀವ್ರ ಘರ್ಷಣೆಗೆ ಇಳಿದರು. ಕಲ್ಲುಗಳನ್ನು ತೂರಿದರು, ಸರಕಾರಿ ಬಸ್ಗಳು, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದರು. ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದರು. ಕೆಲವೆಡೆ ಖಡ್ಗ, ದೊಣ್ಣೆಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿದೆ. ಪೊಲೀಸರ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಕ್ಕೂ ಬಗ್ಗದ ಪ್ರತಿಭಟನಾಕಾರರು ಮಧ್ಯಾಹ್ನದ ವೇಳೆಗೆ ಕೆಂಪು ಕೋಟೆ ತಲುಪಿ ಹೋರಾಟದ ಧ್ವಜಾರೋಹಣ ನೆರವೇರಿಸಿದರು.ಕೆಂಪು ಕೋಟೆ ಮುಂಭಾಗದಲ್ಲಿರುವ ಧ್ವಜ ಸ್ತಂಭದ ಮೇಲೆ ತಾವು ತಂದಿದ್ದ ಕಿಸಾನ್ ಧ್ವಜ ಹಾಗೂ ಸಿಖ್ ಧ್ವಜವನ್ನು ಹಾರಿಸಿದ ರೈತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಈ ಮಧ್ಯೆ, ಕೆಂಪುಕೋಟೆಯಿಂದ ಶಾಂತಿಯುತವಾಗಿ ನಿರ್ಗಮಿಸುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದರೂ, ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ. ಬಳಿಕ ಲಘು ಲಾಠಿ ಪ್ರಹಾರದ ಮೂಲಕ ಅವರನ್ನು ಚದುರಿಸಲಾಯಿತು. ಕೆಂಪುಕೋಟೆ ಧ್ವಜಾರೋಹಣದ ಬಳಿಕ ರೈತರು ಮತ್ತೆ ತಮ್ಮ ಮೂಲ ಪ್ರತಿಭಟನಾ ಸ್ಥಳಗಳಾದ ದಿಲ್ಲಿಗಡಿಗಳತ್ತ ಹೊರಟರು. ಸಂಜೆ ವೇಳೆಗೆ ರೈತರು ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿಗೆ ಮರಳಿರುತ್ತಾರೆ.