ಶ್ರೀನಿವಾಸಪುರ:ರೈತನೊರ್ವ ದ್ವಿಚಕ್ರ ವಾಹದಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಪಟ್ಟಣದ ವೇಣು ಶಾಲೆ ವೃತ್ತದಲ್ಲಿ ನಡೆದಿರುತ್ತದೆ.
ತಾಲ್ಲೂಕಿನ ಚಿರುವನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬ ರೈತ ಕೆನರಾ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡಿದ್ದು ಹಣವನ್ನು ಬೈಕ್ ಮುಂಬಾಗದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿ ಇರಿಸಿಕೊಂಡು ಊರಿಗೆ ಹೋಗಬೇಕಾದರೆ ವೇಣು ಶಾಲೆಯ ಬಳಿಯಿರುವ ಸಾಯಿ ಬೇಕರಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ತಿಂಡಿ ತರಲು ಬೇಕರಿ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನದ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ ಹಣದ ಜೊತೆಗೆ ಚೆಕ್ ಬುಕ್ ಹಾಗೂ ಪಾಸ್ ಪುಸ್ತಕವನ್ನು ಸಹ ಕಳ್ಳರು ಕದ್ದೊಯಿದಿರುತ್ತಾರೆ.
ಹೊಸ ಕಾರು ಖರೀದಿಸಲು ಕೃಷ್ಣಾರೆಡ್ಡಿ ಮಕ್ಕಳು ಬೆಂಗಳೂರಿನಿಂದ ತಮ್ಮ ತಂದೆ ಖಾತೆಗೆ ಹಣ ಜಮಾ ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯವನ್ನು ವೃತ್ತಿಪರ ಕಳ್ಳರು ಎಸಗಿರುವುದಾಗಿ .ಪೋಲಿಸರು ಶಂಕಿಸಿರುತ್ತಾರೆ.
ಇಬ್ಬರು ವ್ಯಕ್ತಿಗಳು ವ್ಯವಸ್ಥಿತವಾಗಿ ಕಾರ್ಯಚರಣೆ ನಡೆಸಿ ಹಣ ಎಗರಿಸಿದ್ದಾಗಿ ಹೇಳಲಾಗಿದ್ದು ಹಣ ಎಗರಿಸುವ ಮೊದಲು ಇಬ್ಬರು ವ್ಯಕ್ತಿಗಳು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡ ಕೃಷ್ಣಾರೆಡ್ಡಿಯನ್ನು ಅನುಸರಿಸಿಕೊಂಡು ಬಂದಿರಬಹುದು ಎನ್ನಲಾಗಿದ್ದು ಬೇಕರಿ ಬಳಿ ನಂಬಿಹಳ್ಳಿ ರಸ್ತೆಯಲ್ಲಿ ರೈತಕೃಷ್ಣಾರೆಡ್ಡಿ ವಾಹನ ನಿಲ್ಲಿಸಿ ಬೇಕರಿಗೆ ಹೋಗುತ್ತಾರೆ ಇತ್ತ ಖದಿಮರಲ್ಲಿ ಒರ್ವ ರೈತಕೃಷ್ಣಾರೆಡ್ಡಿ ವಾಹನ ಬಳಿ ಕ್ಯಾಶುವಲ್ ಆಗಿ ಬಂದವನು ಅತ್ತ ಇತ್ತ ನೋಡುತ್ತ ಟ್ಯಾಂಕ್ ಮೇಲಿನ ಬ್ಯಾಗಿಗೆ ಕೈ ಹಾಕಿ ಹಣದ ಗಂಟು ಎತ್ತಿಕೊಳ್ಳುತ್ತಾನೆ ನಂತರ ಹಾಗೆ ಮುಂದೆ ಹೆಜ್ಜೆ ಇಡುವಷ್ಟರಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದವನ ವಾಹನ ಹತ್ತಿ ಕೋಲಾರದ ಕಡೆ ಹೊರಟುಹೋಗುತ್ತಾರೆ. ಈ ದೃಶ್ಯ ಬೇಕರಿಯಲ್ಲಿನ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ,