ಚಿಂತಾಮಣಿ: ಚಿಂತಾಮಣಿ ತಾಲೂಕಿನ ಗ್ರಾಮೀಣ ಪ್ರಾಂತ್ಯದ ಹಳ್ಳಿ ಹಳ್ಳಿಯಲ್ಲೂ ಪ್ಲಾಸ್ಟಿಕ್ ವಿರುದ್ದ ತಾಲೂಕು ಪಂಚಾಯಿತಿ ಅಧಿಕಾರಿಗಳು ಸ್ಥಳಿಯ ಗ್ರಾಮ ಪಂಚಾಯಿತಿ ಜೊತೆಗೂಡಿ ಯುದ್ದವನ್ನೆ ಸಾರಿದ್ದಾರೆ,ಹಳ್ಳಿಗಳಲ್ಲಿನ ಅಂಗಡಿ,ಬೇಕರಿ,ಬಾರ್,ಹೊಟೆಲ್,ಗೂಡಂಗಡಿಗಳಲ್ಲಿ ಬಳಸುತ್ತಿರುವ ನಿಷೇಧಿತ ಪ್ಲಾಸ್ಟಿಕ್ ಕವರ್,ಪ್ಲಾಸ್ಟಿಕ್ ಲೋಟಗಳನ್ನು ಕಟ್ಟುನಿಟ್ಟಾಗಿ ಸಿಝ್ ಮಾಡುತ್ತಿದ್ದಾರೆ.ನಿಷೇಧಿತ ಪ್ಲಾಸ್ಟಿಕ್ ಕವರ್,ಪ್ಲಾಸ್ಟಿಕ್ ಲೋಟಗಳ ಬಳಕೆ ಮುಂದುವರಿದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವು ಎಂದು ಎಚ್ಚರಿಕೆ ನೀಡಿದ ಇವೊ,ಮನುಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಂದ ಚಿಂತಾಮಣಿ ತಾಲೂಕು ಅನ್ನು ಮುಕ್ತ ಮಾಡಲು ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದ್ದು ಹಿಂದಿನ ಕಾಲದಲ್ಲಿ ಪ್ಲಾಸ್ಟಿಕ್ ಕವರ್ ಇಲ್ಲದ ಸಮಯದಲ್ಲಿ ಪೇಪರ್ ಬಳಿಸಿ ದಿನಸಿ, ಹೂ ಇನ್ನಿತರೆ ಜನ ಬಳಕೆ ವಸ್ತುಗಳನ್ನು ಕಟ್ಟಿಕೊಟ್ಟಂತೆ ಈಗಲೂ ಪೇಪರ್ ಬಳಸುವಂತೆ ಮತ್ತು ಮರು ಬಳಕೆಯಾಗುವ ಪ್ಲಾಸ್ಟಿಕ್ ಅನ್ನು ಬಳಸುವಂತೆ ಸಲಹೆ ನೀಡಿದ ಅವರು ಜನತೆ ಸಹ ಅಂಗಡಿಗೆ ಹೊಗಬೇಕು ಎಂದಾಗ ಕೈಚಿಲ ತಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳುಬೇಕು ಎನ್ನುತ್ತಾರೆ, ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು ಜನತೆ ಸಹಕರಿಸುವಂತೆ ಮನವಿ ಮಾಡಿದರು.
ಆರಂಭ ಎನ್ನುವಂತೆ ಪಂಚಾಯಿತಿ ಮುಖ್ಯ ಕೇಂದ್ರಗಳಾದ ಕೈವಾರ,ಮುರಗಮಲ್ಲ,ಊಲವಾಡಿ,ಮುಂತಾದ ಕಡೆ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಆಗುವ ಮಾರಕ ಕುರಿತಾಗಿ ತಿಳಿಸುತ್ತಿರುವ ಪಂಚಾಯಿತಿ ಅಧಿಕಾರಿಗಳು ಪ್ಲಾಸ್ಟಿಕ್ ಕವರಿಗೆ ಪರ್ಯಾಯವಾದುದನ್ನು ಬಳಸುವಂತೆ ಅರಿವು ಮೂಡಿಸುತ್ತಿದ್ದಾರೆ.

