ಯಲ್ದೂರಿನಲ್ಲಿ ರಥೋತ್ಸವ ಹಾಗು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ರಥೋತ್ಸವ ಊರಿನಲ್ಲಿ ಸಂಭ್ರಮ ಮನೆ ಮಾಡಿರುತ್ತದೆ ಹಬ್ಬದ ವಾತವರಣ ಮೂಡಿಸುವಂತೆ ಗ್ರಾಮದ ತುಂಬ ಯುವಕರು ಸಡಗರದಿಂದ ತಿರುಗಾಡುತ್ತ ಒಡಾಡುತ್ತ ಇರುತ್ತಾರೆ ಇಲ್ಲಿನ ನ್ಯಾಷನಲ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಹಿಡಿದು ಯಲ್ದೂರಿನಲ್ಲಿ ಬದುಕಿ ಕಟ್ಟಿಕೊಂಡು ಜೀವನ ಮಾಡಿದ್ದ ಮಾಡುತ್ತಿರುವ ಹಾಗು ಅಲ್ಲೆ ನೆಲೆ ನಿಂತ ಯುವಕರು ಬದುಕು ಆರಿಸಿ ದೇಶ ವಿದೇಶಗಳಲ್ಲಿ ನೆಲೆನಿಂತ ಬಹುತೇಕ ಯುವಕರು ಯುವತಿಯರು ಗ್ರಾಮದ ನಡುವೆ ಇರುವಂತ ಬೃಹತ್ ಶ್ರೀಕೋದಂಡರಾಮ ದೇವಾಲಯದ ಜಾತ್ರೆಗೆ ಆಗಮಿಸಿ connect ಆಗುತ್ತಾರೆ. ಶ್ರೀರಾಮ ಭಕ್ತಿಯ ಸಂಕೇತ ಎನ್ನುವಂತೆ ಹಿರಿಯ,ಕಿರಿಯ ಸ್ನೇಹಿತರೂ ಬಂಧುಗಳು ಸಹೋದರ,ಸಹೋದರಿಯರೂ ಜಾತ್ರೆ ನೆಪದಲ್ಲಿ ಭಕ್ತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತ ಹಳೆಯ ನೆನಪುಗಳೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ weekend ಸಂದರ್ಭದಲ್ಲಿ ಜಾತ್ರೆ ಬಂದರೆ ಒಂದೇರಡು ದಿನ ಊರಲ್ಲಿ ಇದ್ದು ಸ್ನೇಹಿತರೊಂದಿಗೆ ಎರಡು ದಿನಗಳ ಬೊನಸ್ ಸಂಭ್ರಮ ಆಚರಿಸುತ್ತಾರೆ ಇಲ್ಲವಾದರೆ rotine life ಎನ್ನುವಂತೆ ಬಂದುಹೋಗುತ್ತಾರೆ.
ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ ಶ್ರೀ ಕೋದಂಡರಾಮ ದೇವರ ಬ್ರಹ್ಮ ರಥೋತ್ಸವ ಕಲ್ಯಾಣೋತ್ಸವ ಗರುಡೋತ್ಸವ ಹಾಗೂ ಜಾತ್ರಾ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಚೈತ್ರ ಮಾಸದ ಹುಣ್ಣಿಮೆಯ ಹಿಂದಿನ ದಿನದಂದು ಶುಕ್ರವಾರ ರಾತ್ರಿ ನಡೆದ ಶ್ರೀಸಿತಾ ರಾಮರ ಕಲ್ಯಾಣಮಹೋತ್ಸವ
ಅತ್ಯಂತ ವೈಭವದಿಂದ ನಡೆಯಿತು. ಜನಕ ಮಹಾರಾಜರ ಪುತ್ರಿ ಸಿತಾಮಾತೆಯನ್ನು ಸಿತಮ್ಮನ ಮನೆಯಿಂದ ದಿಬ್ಬಣದೊಂದಿಗೆ ಮೂಲಕ ತಾಳ ಮೇಳಗಳೊಂದಿಗೆ ಶ್ರೀ ಕೋದಂಡರಾಮ ದೇವಾಲಯಕ್ಕೆ ಕರೆ ತಂದು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕಣ್ಣುಗಳಿಗೆ ಹಬ್ಬ ಎನ್ನುವಂತ ಅಲಂಕೃತವಾದ ಕಲ್ಯಾಣ ವೇದಿಕೆಯಲ್ಲಿ ಲಕ್ಷ್ಮಣ ಸಮೇತ ಶ್ರೀರಾಮ ಮತ್ತು ಸೀತಾದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ದೇವಾಲಯದ ಅರ್ಚಕರ ವೇದ ಮಂತ್ರ ಪಠಣದ ನಡುವೆ ಸೀತಾರಾಮರ ಕಲ್ಯಾಣೋತ್ಸವ ನಡೆಯಿತು.


ಗರುಡೋತ್ಸವ
ಗರುಡವಾಹನದ ಮೇಲೆ ವಿರಯಜಮಾನನಾಗಿ ಕುಳಿತ ಸೀತಾರಮರ ಗರುಡೋತ್ಸವ ನೋಡಲು ಎರಡು ಕಣ್ಣು ಸಾಲದು.ಶನಿವಾರ ಮುಂಜಾನೆ ಸಂಪ್ರದಾಯದಂತೆ ಗರುಡೋತ್ಸವವನ್ನು ಯುವಕರು ಬುಜಗಳ ಮೇಲೆ ಹೊತ್ತು ಊರಿನಲ್ಲಿ ಮೆರವಣಿಗೆ ನಡೆಸಿದರು.
ಬ್ರಹ್ಮ ರಥೋತ್ಸವ
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಸೇರಿದಂತೆ ಗ್ರಾಮದ ರಸ್ತೆಗಳನ್ನು ಹೂವು ಹಾಗೂ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಶೃಂಗಾರ ಮಾಡಲಾಗಿತ್ತು.ಶನಿವಾರ ಶ್ರೀರಾಮದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಧ್ಯಾಹ್ನ ವೈಖನಾಸ ಆಗಮಶಾಸ್ತ್ರದಂತೆ ದೊಡ್ಡ ಸಂಖ್ಯೆಯ ಜನರ ಸಾಕ್ಷಿಯಾಗಿ ವೇದ ವಿದ್ವಾಂಸರ ಮಂತ್ರಘೋಷ,ಭಕ್ತರ ಶ್ರೀರಾಮಘೋಷ ಗಳೊಂದಿಗೆ ಬೃಹತ್ ರಥವನ್ನು ಎಳೆಯಲಾಯಿತು.ಗ್ರಾಮಸ್ಥರು ರಸ್ತೆಗೆ ಚಲ್ಲಿ, ರಂಗೋಲಿ ಹಾಕಿ ಕೋದಂಡ ರಾಮನನ್ನು ಬರಮಾಡಿಕೊಂಡರು.