ಶ್ರೀನಿವಾಸಪುರ:- ಪಟ್ಟಣದ ಪೋಸ್ಟಾಪಿಸ್ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೊಬೈಲುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.
ಶ್ರೀ ವಿನಾಯಕ ಮೊಬೈಲ್ ಅಂಗಡಿಯ ಹಿಂಬಾಗದಲ್ಲಿ ಪುರಸಭೆ ನೂತನ ಕಚೇರಿ ಆವರಣದಲ್ಲಿ ಅಂಗಡಿ ಗೋಡೆಗೆ ಕನ್ನ ಕೊರೆದು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಅಂಗಡಿ ಮಾಲಿಕ ಪುಟ್ಟಣ್ನ ಪೋಲಿಸರಿಗೆ ದೂರು ನೀಡಿರುತ್ತಾರೆ.
ಪುಟ್ಟಣ್ಣ ಇತ್ತಿಚಿಗಷ್ಟೆ ಸಾಲಸೋಲ ಮಾಡಿ ಮೊಬೈಲ್ ಅಂಗಡಿ ಪ್ರಾರಂಭಿಸಿದ್ದ ಅಂಗಡಿ ವ್ಯಾಪಾರ ಪ್ರವರ್ಧಮಾನಕ್ಕೆ ಬರುವಷ್ಟರಲ್ಲಿ ಕೊರೋನಾ ವ್ಯಾಧಿಯಿಂದ ಮಾರುಕಟ್ಟೆ ಮೇಲೆ ಪ್ರರಿಣಾಮ ಉಂಟಾಗಿದ್ದು ಅಷ್ಟರಲ್ಲಿ ಲಾಕ್ಡೌನ್ ನಿಂದಾಗಿ ಬಾಗಿಲು ಹಾಕಿದುತ್ತಾರೆ ನಿನ್ನೆಯಷ್ಟೆ ಮಾಗಿಲು ತಗೆದು ಅಂಗಡಿ ಸ್ವಚ್ಚಮಾಡಿ ಲಾಕ್ಡೌನ್ ತೆರವಾಗುವ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಬಾಗಿಲು ತಗೆಯಲು ಯೋಜನೆ ರೂಪಿಸಲು ಇಂದು ಬೆಳೆಗ್ಗೆ ಬಾಗಿಲು ತಗೆದಾಗ ಅಂಗಡಿಯಲ್ಲಿ ಮೊಬೈಲ್ ಇಲ್ಲವಾಗಿದೆ ಮತ್ತೆ ಅಂಗಡಿಯಲ್ಲಿ ಜಗಮಗಿಸುವ ಬೆಳಕಿರುವುದನ್ನು ನೋಡಿ ಗಾಭಾರಿಯಾದ ಮಾಲಿಕ ನೋಡಿದಾಗ ಕಳ್ಳರು ಪುರಸಭೆ ನೂತನ ಕಚೇರಿ ಆವರಣದ ಮೂಲಕ ಗೋಡೆಗೆ ಕನ್ನ ಕೊರೆದು ಅಂಗಡಿ ಮೂಲಕ ಒಳಬಂದು ಆಂಡ್ರಾಯಿಡ್ ಮೊಬೈಲಗಳು ಕಿಪ್ಯಾಡ್ ಮೊಬೈಲಗಳು ಕಳ್ಳತನಮಾಡಿಕೊಂಡು ಹೋಗಿದ್ದು ಕಳ್ಳರು ಹೋಗುವಾಗ ಸಿಸಿ ಕ್ಯಾಮಾರಗಳ ಪೂರ್ಣ ರೆಕಾರ್ಡಿಂಗ್ ಯುನಿಟ್ ಸಹ ಹೊತ್ತೋಯಿದಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರಿದಿ:-ಹರ್ಷವರ್ಧನ ಶ್ರೀನಿವಾಸಪುರ