ಚಿಂತಾಮಣಿ:ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆ ಭಾನುವಾರದ ಸಂತೆಯಂದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ ಇದು ಜಗತ್ತಿಗೆ ಗೊತ್ತಿರುವ ಸತ್ಯ ಇಂತಹ ಮಾರುಕಟ್ಟೆಯಲ್ಲಿ ಹೊಲ್ ಸೇಲ್ ಅಂಗಡಿಯಲ್ಲಿ ಮೊನ್ನೆ ಭಾನುವಾರ ಖತರನಾಕ್ ಕಳ್ಳರು 5 ಲಕ್ಷ ರೂ ಹಣ ಎಗರಿಸಿಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.
ಚೇಳೂರು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಧವಸಧಾನ್ಯ ವಿಭಾದಲ್ಲಿರುವ ಕೈಲಾಸ ಟ್ರೇಡರ್ಸ್ ಮಾಲೀಕ ಅಕ್ಕಿ ಹೋಲ್ ಸೇಲ್ ಮಾರಾಟಗಾರ ರಾಮಕೃಷ್ಣಪ್ಪ ಭಾನುವಾರ ಸಂತೆ ದಿನವಾದ ಹಿನ್ನಲೆಯಲ್ಲಿ ಅಕ್ಕಿ ಖರೀದಿಸಲು ಗಿರಾಕಿಗಳು ಬರುತ್ತಿದ್ದು ಜನ ಸಂದಣಿ ಏರ್ಪಟ್ಟಿದೆ ಈ ಸಂದರ್ಭದಲ್ಲಿ ಮಾಲಿಕ ಸೈಕಲ್ ಗ್ಯಾಪ ವಿರಾಮದಲ್ಲಿ ಪಕ್ಕದ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕೈಲಾಸ ಟ್ರೇಡರ್ಸ್ ಅಂಗಡಿಯಲ್ಲಿ ಬೀಗ ಹಾಕಿಟ್ಟಿದ್ದ ಕ್ಯಾಷ್ ಟೇಬಲ್ನ ಡೋರ್ ಬಾಗಿಲು ಮುರಿದ ಕಳ್ಳರು ಕ್ಷಣಾರ್ಧದಲ್ಲಿ 5 ಲಕ್ಷ ರೂಗಳನ್ನು ದೋಚಿ ಕೊಂಡು ಹೋಗಿರುವ ಘಟನೆ ನಡೆದಿದೆ.
ಭಾನುವಾರ ಸಂತೆ ದಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ಅಂಗಡಿಗಳಲ್ಲಿ ಕೊಟ್ಯಾಂತರ ಹಣದ ವ್ಯವಹಾರ ನಡೆಯುತ್ತದೆ ಈ ಹಿನ್ನಲೆಯಲ್ಲಿ ಕೈಲಾಸ್ ಟ್ರೇಡರ್ಸ್ ನಲ್ಲೂ ನಡೆದಿದ್ದ ವ್ಯಾಪಾರದ ಹಣವನ್ನು ಕ್ಯಾಷ್ ಟೇಬಲ್ನಲ್ಲಿ ಇಟ್ಟಿದ್ದನ್ನು ಗಮನಿಸಿರಬಹುದಾದ ಖದೀಮರು ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.ಈ ಬಗ್ಗೆ ಚಿಂತಾಮಣಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.