ಕೋಲಾರ:- ಕಠಿಣ ಲಾಕ್ಡೌನ್ ಗೂ ಜಾರಿಗೆ ತಂದರೂ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿಲ್ಲ.
ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್ಡೌನ್ ಕೂಡಾ ಭಾನುವಾರ ಅಂತ್ಯಗೊಂಡಿದೆ. ಆದರೆ ಸೋಂಕು ಹರಡುತ್ತಲೇ ಇದೆ.ಸೋಂಕಿನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇಳಿಯದ ಕಾರಣ ಕಠಿಣ ಲಾಕ್ಡೌನ್ನ್ನು ಮತ್ತೇ ಮುಂದುವರೆಸುವ ಸಾಧ್ಯತೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ 38 ಸಾವಿರ ಮಂದಿಗೆ ಕೊರೋನಾ ಹಬ್ಬಿದ್ದು ಸೋಂಕಿಗೆ 376 ಮಂದಿ ಮೃತಪಟ್ಟಿದ್ದಾರೆ. 7400 ಮಂದಿ ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಶೇಕಡವಾರು ಪ್ರಮಾಣ ಶನಿವಾರ 32.72 ರಷ್ಟಿತ್ತು. ಸೋಂಕಿನ ಶೇಕಡವಾರು ಪ್ರಮಾಣದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ.
ಜನತಾ ಕಫ್ರ್ಯೂ,ಸೆಮಿ ಲಾಕ್ಡೌನ್ ಹಾಗು ಎರಡು ಬಾರಿ ಕಠಿಣ ಲಾಕ್ಡೌನ್ಗೂ ಸೋಂಕು ತಗ್ಗುತ್ತಿಲ್ಲ. ಮತ್ತೊಂದು ಜಿಲ್ಲಾ ಮಟ್ಟದ ಸಂಪೂರ್ಣ ಲಾಕ್ಡೌನ್ ಮಾಡುವ ಅನಿವಾರ್ಯತೆ ಉಂಟಾಗಿದೆ. ಜಿಲ್ಲೆಯಲ್ಲಿ ಇವತ್ತಿಗೂ ಸೋಂಕಿತರ ಸಂಖ್ಯೆ 680 ಕ್ಕೂ ಹೆಚ್ಚು ಇದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಹರಡುತ್ತಿರುವುದರಿಂದ ವ್ಯವಸ್ಥೆ ಹಿಡಿತಕ್ಕೆ ಸಿಗುತ್ತಿಲ್ಲವಂತೆ, ಸೋಂಕು ಇಂತಹ ಗ್ರಾಮದಲ್ಲಿ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಏರ್ಪಟ್ಟಿದೆ.
ಗ್ರಾಮಗಳಲ್ಲಿ ನಿಯಮಾಳಿ ಉಲ್ಲಂಘನೆ
ಕೆಲವು ಹಳ್ಳಿಗಳಲ್ಲಿ ವಾಣಿಜ್ಯ ವ್ಯವಹಾರಕ್ಕೆ ತಡೆ ಇಲ್ಲದೆ ಅಂಗಡಿ ಮುಂಗಟ್ಟುಗಳು ತಗೆದು ವಹಿವಾಟು ನಡೆಸಲಾಗುತ್ತಿವೆ ಎನ್ನುವ ಆರೋಪ ಇದೆ ಜೊತೆಗೆ ಜನತೆ ಸಹ ಮಾಸ್ಕ್ ಧರಿಸದೆ, ದೈಹಿಕ ಅಂತರವನ್ನು ಕಾಯ್ದುಕೊಳ್ಳದೆ ಸಹಜವಾಗಿ ತಿರುಗಾಡುತ್ತಿರುವುದು ಆಡಳಿತ ವ್ಯವಸ್ಥೆಗೆ ತಲೆನೋವಾಗಿದೆ ಎಂದಿರುತ್ತಾರೆ.
ಈಗಲೂ ಜನ ಸಂದಣಿ ಕಾರ್ಯಕ್ರಮಗಳು
ಗ್ರಾಮಗಳಲ್ಲಿ ಕೆಲವರು ಈಗಲೂ ಸಭೆ ಸಮಾರಂಭ,ಮದುವೆಗಳು ಅಂತಹ ಕಾರ್ಯಕ್ರಮಗಳನ್ನು ಯಾವುದೇ ನಿಯಮಗಳನ್ನು ಪಾಲಿಸದೆ ನಡೆಯುತ್ತಿದ್ದಾರೆ.ಈ ನಿಟ್ಟಿನಲ್ಲಿ ಕೆಲವೊಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಿಗಿ ಕ್ರಮವನ್ನು ಅನುಸರಿಸದೆ ನಿರ್ಲಕ್ಷ್ಯಸಿರುವುದರಿಂದ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲವಂತೆ.
ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಸೋಂಕು ಹರಡಲು ಮೂಲ ಕಾರಣ ಬೆಂಗಳೂರಿನಿಂದ ಹಳ್ಳಿಗಳಿಗೆ ಬಂದಂತ ಜನರಿಂದ ಎನ್ನುವಮಾತಿದೆ ಬೆಂಗಳೂರಿನಲ್ಲಿ ವಾಸವಿದ್ದ ಜಿಲ್ಲೆಯ ಸಾವಿರಾರು ಮಂದಿ ಅಲ್ಲಿಂದ ಕೋಲಾರ ಜಿಲ್ಲೆಗೆ ಬಂದರು, ಅಲ್ಲದೆ ಯುಗಾದಿ ಹಬ್ಬದ ವೇಳೆ ಹಬ್ಬ ಆಚರಣೆಗಾಗಿ ಜಿಲ್ಲೆಗೆ ಬಂದವರಿಂದಲೂ ಸೋಂಕು ಹರಡಿತ್ತು.ಇದರಿಂದಾಗಿ ಬೆಂಗಳೂರಿನಲ್ಲಿ ಸೋಂಕು ತಗ್ಗಿದರೂ
ಅಸಹಯಾಕರಾದ ಪಂಚಾಯಿತಿ ಅಧಿಕಾರಿಗಳು
ಕೊರೋನಾ ತಡೆಗಟ್ಟುವ ಸಂಬಂದ ಗ್ರಾಮೀಣ ಭಾಗದಲ್ಲಿ ವ್ಯಾಪಾರಸ್ಥರಿಗೆ,ಜನತೆಗೆ ನಿರ್ಭಂದ ಹೇರಿದ್ದರು,ಕೋವಿಡ್ ನಿಭಂದನೆಗಳಿಗೆ ಸ್ಥಳಿಯರು ಸ್ಪಂದನೆ ನೀಡುವುದಿಲ್ಲ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಂಕರಪ್ಪ ಅಸಾಹಿತಕತೆ ವ್ಯಕ್ತಪಡಿಸಿರುತ್ತಾರೆ.
ಕೋಲಾರದ ಹಳ್ಳಿಗಳಲ್ಲಿ ತಗ್ಗಲಿಲ್ಲ.
ಇದನ್ನು ತಡೆಯಲು ಜನತಾ ಕಫ್ರ್ಯೂವಿಫಲವಾದ ಸಾಲದಾಗಿದೆ ಎಂದು ಜಿಲ್ಲಾಡಳಿತ ಕಠಿಣ ಲಾಕ್ಡೌನ್ ಜಾರಿಗೆ ತಂದಿತಾದರೂ ಭಾನುವಾರ ಮಿಸ್ ಆಯಿತೆಂದು ಬಹುತೇಕ ಮಾಂಸಹಾರಿಗಳು ಮಂಗಳವಾರ ಒಬ್ಬರ ಮೇಲೊಬ್ಬರು ಬಿದ್ದು ಮಾಂಸ ಖರಿದಿ ಮಾಡಿದ್ದು ಮುಂದೆ ಯಾವತ್ತು ಇದರ ಎಫೇಕ್ಟ್ ಇರುತ್ತದೊ ಗೊತ್ತಿಲ್ಲ ಎನ್ನುತ್ತಾರೆ.
ಜಿಲ್ಲೆಯಲ್ಲಿನ ಆರೋಗ್ಯ ತುರ್ತು ನೋಡಿಕೊಂಡು ಸೋಂಕಿನ ಪ್ರಮಾಣ ತಗ್ಗಿಸಲು ಮತ್ತೊಂದು ಕಠಿಣ ಲಾಕ್ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ನೋಡಬೇಕಿದೆ.
- ಜನರ ಆರೋಗ್ಯಕ್ಕಾಗಿ www.vcsnewz.com ಸಮಾಜಿಕ ಕಳಕಳಿ
- ಮಾಸ್ಕ್ ದರಿಸಿ ಸಾಮಾಜಿಕ ಅಂತರ ಕಾಪಾಡಿ
- ಆದಷ್ಟು ಜನಸಂದಣಿ ಪ್ರದೇಶ,ಸಭೆ,ಸಮಾರಂಭಗಳಿಂದ ದೂರ ಉಳಿಯಿರಿ
- ಅವಶ್ಯಕತೆ ಇದ್ದರಷ್ಟೆ ಮಾತ್ರ ಜನಸಂದಣಿ ಪ್ರದೇಶಕ್ಕೆ ಹೋಗಿ.
- ಮನೆಯಲ್ಲೆ ಇದ್ದು ಆರೋಗ್ಯ ಕಾಪಾಡಿಕೊಳ್ಳಿ.