ಶ್ರೀನಿವಾಸಪುರ:ಒಂಟಿ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಹಾಡು ಹಗಲೇ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಇಂದು ಮಂಗಳವಾರ ತಾಲೂಕಿನ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಗುರುವಲೋಳ್ಳಗಡ್ಡ ಗ್ರಾಮದಲ್ಲಿ ನಡೆದಿರುತ್ತದೆ. ಕಳ್ಳರು ಮನೆಯಲ್ಲಿರುವ ಬಂಗಾರ ದುಡ್ದು ಸೇರಿದಂತೆ ಜಮೀನು ದಾಖಲೆಗಳು ಮತ್ತು ಮೊಬೈಲ್ ಫೋನ್ ಹೊತ್ತೊಯಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಾರೆ.
ಗೌನಿಪಲ್ಲಿ-ರಾಯಲ್ಪಾಡು ಮುಖ್ಯರಸ್ತೆಯಲ್ಲಿ ಗುರುವಲೋಳ್ಳಗಡ್ಡ ಗ್ರಾಮದ ರಸ್ತೆ ಅಂಚಿನ ಮನೆ ಆನಂದಪ್ಪ ಎಂಬುವರಿಗೆ ಸೇರಿದ್ದು ನಡು ಮಧ್ಯಾನಃ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳತನ ಮಾಡಿರುವ ಚಾಲಾಕಿಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ 2 ನಕ್ಲೆಸ್ 70 ಸಾವಿರಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿದ್ದಲ್ಲದೆ ಜಮೀನು ದಾಖಲೆ ಪತ್ರಗಳನ್ನು ಹಾಗು ಮನೆಯಲ್ಲಿದ್ದ ಮೊಬೈಲ್ ಪೋನ್ ಅನ್ನು ತಗೆದುಕೊಂಡು ಹೋಗಿರುವುದಾಗಿ ಮನೆಯ ಯಜಮಾನ ರಾಯಲ್ಪಾಡು ಪೋಲಿಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.
ಶ್ವಾನ ದಳ ಬೆರಳಚ್ಚು ತಜ್ಞರ ಭೇಟಿ
ದೂರುದಾಖಲಿಸಿಕೊಂಡ ಪೋಲಿಸರು ಕಳ್ಳರ ಜಾಡು ಕಂಡು ಹಿಡಿಯಲು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದು ಶ್ವಾನಗಳು ಊರಿನ ದೇವಾಲಯದ ವರಿಗೂ ಹೋಗಿಬಂದಿರುತ್ತವೆ.ಮೊಬೈಲ್ ನೆಟ್ ವರ್ಕ್ ಕುರಿತಂತೆ ಪೋಲಿಸರು ಪರಶೀಲನೆ ನಡೆಸಿದ್ದು ಮೊಬೈಲ್ ನೆಟ್ ವರ್ಕ್ ಮುದಿಮಡಗು ಮಾರ್ಗವಾಗಿ ಆಂಧ್ರದ ಮೊಟಕು ಗ್ರಾಮದ ರಸ್ತೆಯಲ್ಲಿ ಪೊದೆಗಳಲ್ಲಿ ಮೊಬೈಲ್ ಎಸೆದಿದ್ದು, ಆಂಧ್ರಕ್ಕೆ ತೆರೆಳಲು ನೂತನವಾಗಿ ನಿರ್ಮಾಣ ಮಾಡಿರುವ ಬಿ.ಕೊತ್ತಕೋಟ ರಸ್ತೆ ಮಾರ್ಗವಾಗಿ ಕಳ್ಳರು ಹೋಗಿರುವುದಾಗಿ ಶಂಕಿಸಲಾಗಿದೆ.
ಪೋಲಿಸ್ ಹಿರಿಯ ಅಧಿಕಾರಿಗಳ ಭೇಟಿ
ಮನೆ ಕಳ್ಳತನ ನಡೆದ ಸ್ಥಳಕ್ಕೆ ಕೋಲಾರ ಆಡಿಷನಲ್ ಎಸ್ ಪಿ ಜಗದೀಶ್,ವೃತ್ತ ನೀರಿಕ್ಷಕ ಶಿವಕುಮಾರ್,ಸಬ್ ಇನ್ಸಪೇಕ್ಟರ್ ಯೋಗಿಶ್ ಕುಮಾರ್ ಭೇಟಿ ನೀಡಿದ್ದರು.