ನ್ಯೂಜ್ ಡೆಸ್ಕ್: ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಹೆಲಿಕಾಪ್ಟರ್ ಖರಿದಿಸಿ ಅದಕ್ಕೆ ಪೂಜೆ ಮಾಡಿಸಲು ಯಾದಾದ್ರಿಯ ಬೆಟ್ಟದ ಮೇಲಿನ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸಾಮಾನ್ಯವಾಗಿ ಹೊಸದಾಗಿ ಖರೀದಿಸಿದ ದ್ವಿಚಕ್ರವಾಹನಕ್ಕೊ, ನಾಲ್ಕು ಚಕ್ರದ ಕಾರು ಟೆಂಪೊ ವಾಹನಗಳನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುವುದು ಮಾಮೂಲು, ಆದರೆ ತೆಲಂಗಾಣ ರಾಜ್ಯದ ಕರಿಂನಗರ ಪ್ರತಿಮಾ ಮೆಡಿಕಲ್ ಕಾಲೇಜು ಮಾಲಿಕ ಮತ್ತು ತೆಲಂಗಾಣದ ಪ್ರಭಾವಿ ಉದ್ಯಮಿ ಪ್ರತಿಮಾ ಗ್ರೂಪ್ಸ್ ಮಾಲೀಕ ಬೋಯನಪಲ್ಲಿ ಶ್ರೀನಿವಾಸ್ ರಾವ್ ಏರ್ಬಸ್ ಎಸಿಹೆಚ್ 135 ಹೆಲಿಕಾಪ್ಟರ್ ಅನ್ನು 5.7 ಮಿಲಿಯನ್ ಯುಎಸ್ ಡಾಲರ್ ಕೊಟ್ಟು ಖರೀದಿಸಿದ್ದಾರೆ ಅದಕ್ಕೆ ಪೂಜೆ ಸಲ್ಲಿಸಲು ತಮ್ಮ ಇಷ್ಟ ದೈವ ಯಾದಾದ್ರಿಯ ಬೆಟ್ಟದ ಮೇಲಿನ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಂದು ಅದಕ್ಕೆ ವಾಹನ ಪೂಜೆ ಮಾಡಿಸಿದ್ದಾರೆ.!
ಕುಟುಂಬಸಮೇತವಾಗಿ ಶ್ರೀನಿವಾಸ್ ರಾವ್ ಹೆಲಿಕಾಪ್ಟರ್ನಲ್ಲಿಯೇ ದೇವಸ್ಥಾನಕ್ಕೆ ಬಂದು ಮೂವರು ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ.
ಉದ್ಯಮಿ ಶ್ರೀನಿವಾಸ್ ರಾವ್ ತೆಲಂಗಾಣದ ಪ್ರಭಾವಿ ಬಿಜೆಪಿ ಮುಖಂಡ ಮಾಜಿ ಕೇಂದ್ರ ಸಚಿವ ಹಾಗು ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ಸಂಬಂಧಿಯಾಗಿದ್ದು,ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಅವರೂ ಉಪಸ್ಥಿತರಿದ್ದರು. ಪ್ರತಿಮಾ ಗ್ರೂಪ್ಸ್ ಇನ್ಫ್ರಾಸ್ಟ್ರಕ್ಚರ್, ಇಂಧನ, ಟೆಲಿಕಾಂ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನೂ ಹೊಂದಿದೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Thursday, April 3