ಚಿತ್ತೂರು: ರಸ್ತೆ ಅಪಘಾತದಲ್ಲಿ ಮೂರು ಆನೆಗೆಳು ಜೀವ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ . ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಲಮನೇರು ಬಳಿಯ ಜಗಮರ್ಲ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪಲಮನೇರು ಬಳಿ ಇರುವ ಕೌಂಡಿನ್ಯ ಅಭಯಾರಣ್ಯದ ಮದ್ಯವೆ ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು ಈ ರಸ್ತೆಯಲ್ಲಿ ಆನೆಗಳು ರಸ್ತೆ ದಾಟುವುದು ಸಾಮಾನ್ಯ, ಮೂರ್ನಾಲ್ಕು ದಿನಗಳ ಹಿಂದೆ ಮದ್ಯರಾತ್ರಿ ವೆಳೆ ಆನೆಗಳ ದಂಡು ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರಸ್ತೆ ದಾಟುತ್ತಿರುವಾಗ ಪಲಮನೇರು ಕಡೆಯಿಂದ ಚೆನ್ನೈ ಕಡೆಗೆ ಹೋರಟಿದ್ದ ಮಾವಿನಕಾಯಿ ತುಂಬಿದ್ದ ಇಚರ್ ಲಾರಿ ವೇಗವಾಗಿ ಹೊಗಿತಿದ್ದು ವಾಹನ ಚಾಲಕನಿಗೆ ರಸ್ತೆ ದಾಟುತ್ತಿರುವ ಆನೆಗಳ ಹಿಂಡು ಕಾಣದಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಈ ಅಪಘಾತದಲ್ಲಿ ಮೂರು ಆನೆಗಳು ಸ್ಥಳದಲ್ಲೆ ಸಾವನ್ನಪ್ಪಿವೆ ಅಪಘಾತದ ರಭಸಕ್ಕೆ ಆನೆಯೊಂದು ರಸ್ತೆ ಬದಿಯ ಹಳದಲ್ಲಿ ಬಿದಿದ್ದರೆ,ರಸ್ತೆ ಸುರಕ್ಷತೆಗೆ ಅಳವಡಿಸಿದ್ದ ಕ್ರ್ಯಾಶ್ ಬ್ಯಾರಿಯರ್ಗೆ ಡಿಕ್ಕಿ ಹೊಡೆದು ಮತ್ತೆರಡು ಆನೆಗಳು ಸಾವನ್ನಪ್ಪಿವೆ. ಈ ಅಪಘಾತದಲ್ಲಿ ಮಾವಿನಕಾಯಿ ಲಾರಿ ಸಂಪೂರ್ಣ ಜಖಂಗೊಂಡಿದ್ದು ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಮೃತ ಪಟ್ಟ ಮೂರು ಆನೆಗಳ ಪೈಕಿ ಎರಡು ಗಂಡಾನೆಗಳು ಎಂದು ಚಿತ್ತೂರು ಜಿಲ್ಲಾ ಅರಣ್ಯಾಧಿಕಾರಿಗಳು ಗುರುತಿಸಿದ್ದಾರೆ.
ಕೋಲಾರ ಜಿಲ್ಲೆಗೆ ಹೊಂದಿಕೊಂಡಿರುವ ಚಿತ್ತೂರು ಜಿಲ್ಲೆಯ ಪಲಮನೇರು ಕೌಂಡಿನ್ಯ ಅಭಯಾರಣ್ಯದ ಪ್ರದೇಶದಲ್ಲಿ
ಆನೆಗಳ ಹಿಂಡು ಇದೆ ಅವುಗಳು ಆಂಧ್ರ-ತಮಿಳುನಾಡು-ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಸಂಚರಿಸುತ್ತ ಈ ಭಾಗದ ಗ್ರಾಮಸ್ಥರಿಗೆ ಉಳಪಟ ನಿಡುತ್ತ ತಿರುಗಾಡುತ್ತ ಇರುತ್ತದೆ ಆನೆಗೆಳ ಕಾಟ ಹೆಚ್ಚಾದಾಗ ಅಯಾ ವಲಯ ಅರಣ್ಯಾಧಿಕಾರಿಗಳು ಅವುಗಳ ಹಿಂಡನ್ನು ಬೆರೆಡೆಗೆ ತೆರಳುವಂತೆ ಅಥಾವ ಕಾಡಿಗೆ ತೆರಳುವಂತೆ ಮಾಡುವುದು ಸಾಮನ್ಯ ಹೀಗೆ ಆನೆಗಳ ಹಿಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವ ಧಾವಂತದಲ್ಲಿ ಆನೆಗಳು ರಸ್ತೆ ಧಾಟುವಾಗ ರಸ್ತೆ ಅಪಘಾತವಾಗಿ ಮೂರು ಆನೆಗಳು ಪ್ರಾಣ ಕಳೆದುಕೊಂಡಿವೆ.
ಕೆಳ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿತ್ತು
ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವಂತ ಹೆದ್ದಾರಿ ರಸ್ತೆಗಳ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಕೆಳಗೆ ಸೇತುವೆಗಳ ನಿರ್ಮಾಣ ಮಾಡುವುದು ಅಗತ್ಯ ಇರುತ್ತದೆ ಅದರಲ್ಲೂ ಕೌಂಡಿನ್ಯ ಆನೆಧಾಮ ಇರುವಂತ ಕಣಿವೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ ಆನೆಗಳು ಹಿಂಡು ಹಿಂಡಾಗಿ ರಸ್ತೆ ದಾಟುವುದು ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಾಹನ ಸವಾರರಿಗೆ ಆಭಯಾರಣ್ಯದ ಸುರಕ್ಷತೆ ಮೂಡಿಸುವಂತ ಫಲಕಗಳನ್ನು ಅಳವಡಿಸಬೇಕು ಮತ್ತು ಇತರೆ ಸುರಕ್ಷತೆಯನ್ನು ಅನುಸರಿಸಬೇಕು ಆನೆಗಳು ರಸ್ತೆ ಮೇಲೆ ಬಾರದಂತೆ ಕೆಳ ಸೇತುವೆಗಳನ್ನು ನಿರ್ಮಾಣ ಆನೆಗಳು ಹಾಗು ಇತರೆ ವ್ಯನ್ಯ ಜೀವಿಗಳು ಅರಣ್ಯ ಪ್ರದೇಶದಿಂದ ರಾಷ್ಟ್ರೀಯ ಹೆದ್ದಾರಿಗೆ ಬಾರದಂತೆ ಹೆದ್ದಾರಿ ಎರಡೂ ಬದಿಯಲ್ಲಿ ಲೋಹದ ರೇಲಿಂಗ್ ಅಳವಡಿರಬೇಕಿತ್ತು ಹಾಗು ಆನೆಗಳು ದಾಟುವ ಕುರಿತಾಗಿ ಮಾಹಿತಿ ನೀಡುವ ರಾತ್ರಿ ವೇಳೆಯೂ ಕಾಣಿಸುವಂತ ಡಿಜಿಟಲ್ ಬೋರ್ಡ್ಗಳನ್ನು ಅಳವಡಿಸಿದ್ದರೆ ಚಾಲಕರಿಗೆ ಅರಿವಾಗುತ್ತಿತ್ತು ಎನ್ನುವುದು ಸ್ಥಳೀಯರ ವಾದ.