ನ್ಯೂಜ್ ಡೆಸ್ಕ್: ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಸಂಜೆ ಕಣಿವೆ ಪ್ರದೇಶವಾದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ವಾಹನ ಪ್ರಪಾತದ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿತ್ತು.
ಈ ಅಪಘಾತದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು 12 ಜನ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಕೆಲ ಯೋಧರ ಸ್ಥಿತಿ ಚಿಂತಾಜನಕವಾಗಿದ್ದು,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುತಾತ್ಮರಾದ ಐದು ಜನ ಯೋಧರಲ್ಲಿ ಮೂರು ಜನ ಯೋಧರು ಕರ್ನಾಟಕದವರಾಗಿದ್ದು ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರದ ಬಿಜಾಡಿಯ ಅನೂಪ್ (33), ಬಾಗಲಕೋಟೆ ಮಹಾಲಿಂಗಪುರದ(25) ವರ್ಷದ ಮಹೇಶ್ ಮಾರಿಗೊಂಡ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಯೋಧ
ಬಾಗಲಕೋಟೆ ಜಿಲ್ಲೆ ಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ನಾಗಪ್ಪ ಮಾರಿಗೊಂಡ ಅವರಿಗೆ 25 ವರ್ಷ ವಯಸ್ಸಾಗಿದ್ದು 6 ವರ್ಷಗಳಿಂದ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮದುವೆಯಾಗಿ ಮೂರು ವರ್ಷ ಆಗಿದ್ದು ಲಕ್ಷ್ಮಿ ಎಂಬ ಯುವತಿಯನ್ನ ಕೈಹಿಡಿದ್ದರು. ಗುರುವಾರ ಮೃತ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸುವ ಸಾಧ್ಯತೆ ಇದೆ.ಕುಂದಾಪುರದ ಕೋಟೇಶ್ವರದ ಯೋಧ ಅನೂಪ್ ಕಳೆದ 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅನುಪ್ ದಂಪತಿಗೆ ಎರಡು ವರ್ಷದ ಪುಟ್ಟ ಮಗು ಇದೆ.
ಮಣಿಪುರ ಅಪಘಾತದಲ್ಲಿ ಇನ್ನೊಬ್ಬ ಯೋಧ ಸಾವು
ಮಣಿಪುರದ ಇಂಪಾಲ್ ಜಿಲ್ಲೆಯ ಬೊಂಬಾಲಾದಲ್ಲಿ ಮತ್ತೊಂದು ಅಪಘಾತ ನಡೆದಿದ್ದು ಕಂದಕಕ್ಕೆ ಸೇನಾ ವಾಹನ ಉರುಳಿ ಬಿದ್ದು ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಖೋತ (43) ಅವರು ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿಕೊಂಡು ಬರುತ್ತಿರುವಾಗ ಅವಘಡ ನಡೆದಿತ್ತು. ಅವರು ಇನ್ನು 2-3 ಕೇವಲ ತಿಂಗಳಲ್ಲಿ ನಿವೃತ್ತಿ ಆಗಲಿದ್ದರು. ಒಟ್ಟು 6 ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಇದಾಗಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧರ್ಮರಾಜ ಅವರಿಗೆ ಹಿರಿಯ ಸೇನಾಧಿಕಾರಿಗಳು ಅಂತಿಮ ಗೌರವ ಅರ್ಪಿಸಿದ್ದು, ಗೋವಾದ ಮೂಲಕ ವಿಮಾನದಲ್ಲಿ ಪಾರ್ಥಿವ ಶರೀರ ಕುಪ್ಪಾನವಾಡಿ ತಲುಪಲಿದ್ದು,ನಾಳೆ ಅಂತ್ಯ ಸಂಸ್ಕಾರ ನೆರವೇರಲಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಅಪಘಾತದಲ್ಲಿ ಮೃತ ಪಟ್ಟ ಯೋಧರಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣನವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಿಎಂ X ಟ್ವೀಟರ್ನಲ್ಲಿ ಫೋಸ್ಟ್ ಮಾಡಿದ್ದಾರೆ.
Breaking News
- ಚಿಂತಾಮಣಿಯ ರಶ್ಮಿಹರ್ಷರಿಗೆ ಮೋಸ್ಟ್ ಪಾಪ್ಯೂಲರ್ ವೈಶ್ಯ ಲೈಮ್ಲೈಟ್ ಪ್ರಶಸ್ತಿ.
- ಕಾಶ್ಮಿರ ಸೇನಾ ವಾಹನ ಅಪಘಾತ ಕರ್ನಾಟಕದ ಮೂರು ಯೋಧರ ಸಾವು!
- j&k ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದು ಐವರು ಯೋಧರ ಸಾವು!
- ಶ್ರೀನಿವಾಸಪುರ ಭೈರವೇಶ್ವರ ಹಾಸ್ಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
- ಶ್ರೀನಿವಾಸಪುರ ಪ್ರೆಮಿಗಳ ಮದುವೆ ತಡೆಯಲು ಸಿನಿಮಾ ಶೈಲಿಯಲ್ಲಿ ಹೈಡ್ರಾಮ!
- ಶ್ರೀನಿವಾಸಪುರದ ಶಿಕ್ಷಕಿ ರಾಷ್ಟ್ರೀಯ ಕಬಡಿ ಪಂದ್ಯಾವಳಿಗೆ ಆಯ್ಕೆ
- ಶ್ರೀನಿವಾಸಪುರದ ಸರ್ಕಾರಿ ಕಚೇರಿ ಶಾಲ ಆವರಣಗಳೆ ಪಾರ್ಕಿಂಗ್ ಸ್ಥಳ!
- ತಿರುಮಲ ವೆಂಕಟೇಶ್ವರ ದರ್ಶನ ವಿಳಂಬ 29 ಕಂಪಾರ್ಟ್ಮೆಂಟ್ ಗಳಲ್ಲಿ ಕಾಯುತ್ತಿರುವ ಭಕ್ತರು!
- ಶ್ರೀನಿವಾಸಪುರದಲ್ಲಿ KSRTC ಬಸ್ಸಿಗೆ ಗುದ್ದೋಡಿದ ತಮಿಳುನಾಡು ಲಾರಿ!
- ಐವರು ಸಾವನಪ್ಪಿದ ಮುಳಬಾಗಿಲು ರಸ್ತೆ ಅಪಘಾತಕ್ಕೆ ಕಾರಣ ಇದೇನಾ?
Wednesday, December 25