ಚಿಂತಾಮಣಿ:ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿನ ಹೋಟೆಲ್ಗೆ ನುಗ್ಗಿದ ಪರಿಣಾಮ ಹೋಟೆಲ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ಗುರುವಾರ ನಡೆದಿರುತ್ತದೆ.
ಮೃತರನ್ನು ಹೋಟೆಲ್ ಮಾಲಿಕ ಶಿವಾನಂದ(60) ಹಾಗು ಅಡುಗೆ ಭಟ್ಟ ಕುಮಾರ್(50) ಎಂದು ಗುರುತಿಸಲಾಗಿದ್ದು
ಘಟನೆ ಸಂದರ್ಭದಲ್ಲಿ ಹೋಟೆಲ್ನಲ್ಲಿದ್ದ ಗ್ರಾಹಕರು ಸೇರಿದಂತೆ ಇತರೆ ಕೆಲಸಗಾರರು ಅಪಾಯದಿಂದ ಪಾರಾಗಿದ್ದಾರೆ
ಚಿಂತಾಮಣಿ ಕಡೆಯಿಂದ ಬಂದು ಕೋಲಾರ ಕಡೆಗೆ ತೆರಳಲು ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ವೇಗವಾಗಿ ಬಂದಿದ್ದು ಕೋಲಾರ ವೃತ್ತದಲ್ಲಿ ತಿರವು ತಗೆದುಕೊಳ್ಳಬೇಕಾಗಿದ್ದು ಚಾಲಕ ಅತಿವೇಗ ಮತ್ತು ಅಜಾಗ ರೂಕತೆಯಿಂದ ಚಾಲನೆಯಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿರುವ ಸೆಲ್ವಂ ಸರ್ವೀಸ್ ಸ್ಟೇಷನ್ ಪಕ್ಕದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ ಫುಡ್ ಹೋಟೆಲ್ಗೆ ನುಗ್ಗಿದೆ, ನುಗ್ಗಿದ ರಭಸಕ್ಕೆ ಹೋಟೆಲ್ನ ಕ್ಯಾಷ್ ಮೇಲೆ ಕುಳಿತ್ತಿದ್ದ ಮಾಲೀಕ ಮತ್ತು ಅಲ್ಲಿಯೇ ತರಕಾರಿ ಹಚ್ಚುತ್ತಿದ್ದ ಭಟ್ಟರಿಗೆ ಡಿಕ್ಕಿ ಹೊಡೆದ ಲಾರಿ ಜಲ್ಲಿ ಲೋಡ್ ಸಮೇತ ಪಕ್ಕಕ್ಕೆ ಉರಳಿ ಬಿದ್ದಿರುತ್ತದೆ ಜಲ್ಲಿ ಕಲ್ಲುಗಳ ರಾಶಿ ಹೋಟೆಲ್ ಮಾಲೀಕ ಹಾಗು ಅಡುಗೆ ಭಟ್ಟನ ಮೇಲೆ ಬಿದ್ದಿರುತ್ತದೆ ಇದರಿಂದ ಜಲ್ಲಿ ರಾಶಿಯಲ್ಲಿ ಸಿಲುಕಿದ ಹೋಟೆಲ್ ಮಾಲೀಕ ಶಿವಾನಂದ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ತಲೆಗೆ ತೀವ್ರವಾದ ಪೆಟ್ಟಾಗಿದ್ದ ಅಡುಗೆಭಟ್ಟ ಕುಮಾರ್ ಹೆಚ್ಚಿನ ಚಿಕಿತ್ಸೆ ಕೋಡಿಸಲು ಕೋಲಾರಕ್ಕೆ ಸಾಗಿಸುತ್ತಿರುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ವಿನಾಯಕ ನಗರದ 50 ವರ್ಷದ ಶ್ರೀನಿವಾಸ ಬಾಬು ಕಾಲಿಗೆ ಪೆಟ್ಟು ಬಿದ್ದಿದ್ದು ಆತ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನೋಡಿ ಗಾಭರಿಯಾದ ಜನತೆ
ನೋಡು ನೋಡುತ್ತಿದ್ದಂತೆ ಜಲ್ಲಿತುಂಬಿದ ಟಿಪ್ಪರ್ ಹೋಟೆಲ್ ಒಳಕ್ಕೆ ನುಗ್ಗಿದ್ದನ್ನು ಪ್ರತ್ಯಕ್ಷವಾಗಿ ನೋಡಿದ ಜನತೆ ಗಾಭರಿಯಾಗಿದ್ದಾರೆ ಭರ್ತಿ ಜಲ್ಲಿಕಲ್ಲು ಹೋಟೆಲ್ ನಲ್ಲಿ ಹರಡಿದ್ದು ಜಲ್ಲಿ ಕಲ್ಲು ಅಡಿಯಲ್ಲಿ ಹೋಟೆಲ್ ಗೆ ಬಂದಿದ್ದ ಗ್ರಾಹಕರೆನಾದರು ಸಿಲಕಿರಬಹುದಾ ಎಂಬ ಶಂಕೆಯಿಂದ ಸ್ಥಳಕ್ಕೆ ಕ್ರೇನ್ ತರಿಸಿ ಟಿಪ್ಪರ್ ಲಾರಿಯನ್ನು ಪಕ್ಕಕ್ಕೆ ಜರುಗಿಸಿದಾಗ ಅಲ್ಲಿದ್ದ ಜನರೆ ಕೈಯಲ್ಲೆ ಜಲ್ಲಿಕಲ್ಲು ಎತ್ತಿ ಹಾಗಿದ್ದಾದರು ಜಲ್ಲಿ ಕಲ್ಲಿನ ಅಡಿಯಲ್ಲಿ ಯಾರು ಇರಲಿಲ್ಲ ಒಂದು ದ್ವಿಚಕ್ರ ವಾಹನ ಮಾತ್ರ ಸಿಕ್ಕಿದೆ ಅಪಘಾತ ಎಸಗಿದ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಚಾಲಕ ಮತ್ತು ವಾಹನ ಮಾಲೀಕರ ಪತ್ತೆಗೆ ಮುಂದಾಗಿದ್ದಾರೆ.
ಅಪಘಾತದ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಕೋಲಾರ ವೃತ್ತದಲ್ಲಿ ಜಮಾವಣೆಗೊಂಡ ಪರಿಣಾಮ ಕೋಲಾರ,ಶ್ರೀನಿವಾಸಪುರಕ್ಕೆ ಹೋಗುವ ವಾಹನಗಳು ಮತ್ತು ದ್ವಿಚಕರ ವಾಹನ ಸವಾರರು ಪರಿದಾಡ ಬೇಕಾಯಿತು ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ನಗರಠಾಣೆ ಪಿಎಸ್ಐ ಗಳಾದ ಷಾಬುದ್ದೀನ್, ಪ್ರಕಾಶ್, ನಾರಾಯಣಸ್ವಾಮಿ, ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್, ಚಿಕ್ಕಬಳ್ಳಾಪುರ ಎಎಸ್ಪಿ ರಜಾ ಇಮಾಮ್ ಖಾಸಿಮ್ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ್ ತಾಲ್ಲೂಕು ಅಗ್ನಿಶಾಮಕದಳದ ಅಧಿಕಾರಿ ಲೋಕೇಶ್ ಮತ್ತು ತಂಡವರು ಧಾವಿಸಿ ಬಂದಿದ್ದರು.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Friday, April 4