ನ್ಯೂಜ್ ಡೆಸ್ಕ್: ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ತಿರುಮಲ-ತಿರುಪತಿ ದೇವಾಲಯದ ವೆಬ್ ಪುಟದಲ್ಲಿ ಬಿಡುಗಡೆಯಾದ 40 ನಿಮಿಷದಲ್ಲಿ ಸಂಪೂರ್ಣವಾಗಿ ಕಾಲಿಯಾಗಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರಕ್ಕೆ ಭೇಟಿ ನೀಡಲು ಭಕ್ತರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬರುತ್ತಿದ್ದ ಹಿನ್ನಲೆಯಲ್ಲಿ 10 ದಿನಗಳ ವೈಕುಂಠ ದ್ವಾರ 300 ರೂಗಳ 2 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್ಗಳನ್ನು TTD ‘Tirupathibalaji.ap.govv.in’ ವೆಬ್ ಸೈಟ್ ಮೂಲಕ ಇಂದು ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬಿಡುಗಡೆ ಮಾಡಿದ್ದು ಕೆವಲ 40 ನಿಮಿಷಗಳಲ್ಲಿ ಟಿಕೆಟ್ಗಳು ಮಾರಾಟವಾಗಿದೆ.
ಟಿಕೆಟ್ಗಳು ಮಾರಟವಾಗಿರುವುದು ತಿಳಿಯದ ಭಕ್ತರು ಇನ್ನೂ ವೆಬ್ ಸೈಟ್ನಲ್ಲಿ ಟಿಕೆಟ್ಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ಮತ್ತೊಂದೆಡೆ, ಸರ್ವ ದರ್ಶನಂ ಜನವರಿ 1 ರಂದು ತಿರುಪತಿಯಲ್ಲಿ ಭಕ್ತರಿಗೆ ಆಫ್ಲೈನ್ ಮೋಡ್ ಮೂಲಕ ಟಿಟಿಡಿ ಟೋಕನ್ಗಳನ್ನು ಹಂಚಿಕೆ ಮಾಡುತ್ತಿದೆ. ತಿರುಪತಿಯ 9 ಕೇಂದ್ರಗಳ ಮೂಲಕ ದಿನಕ್ಕೆ 50 ಸಾವಿರದಂತೆ 5 ಲಕ್ಷ ಟಿಕೆಟ್ಗಳನ್ನು ಟಿಟಿಡಿ ಬಿಡುಗಡೆ ಮಾಡಲಿದೆ.
ನೂತನ ವರ್ಷ 2023 ಕ್ಯಾಲೆಂಡರ್ ಬಿಡುಗಡೆ
TTD ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಶುಕ್ರವಾರದಂದು ಟಿಟಿಡಿಯ ಆರು ಹಾಳೆಗಳ ನೂತನ ವರ್ಷ 2023 ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದಾರೆ. ತಿರುಮಲ ಬೆಟ್ಟದಲ್ಲಿರುವ ಅಧ್ಯಕ್ಷರ ಕ್ಯಾಂಪ್ ಆಫಿಸ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು ಈ ಸಂದರ್ಬದಲ್ಲಿ TTD ಜೆಇಒ ಸದಾಭಾರ್ಗವಿ, ಪಿಆರ್ಒ ರವಿ, ಅಧಿಕಾರಿ ರಾಮರಾಜು ಭಾಗವಹಿಸಿದ್ದರು.
ಶುಕ್ರವಾರ ಮಧ್ಯಾಹ್ನದಿಂದ ಈ ಕ್ಯಾಲೆಂಡರ್ಗಳು ತಿರುಮಲ ಮತ್ತು ತಿರುಪತಿಯಲ್ಲಿ ಭಕ್ತರಿಗೆ ಸಿದಲಿದೆ ಉಳಿದಂತೆ ಎರಡು ದಿನಗಳಲ್ಲಿ ಚೆನ್ನೈ,ಹೈದರಾಬಾದ್,ದೆಹಲಿ ಹಾಗು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ವೈಯಾಲಿಕಾವಲ್ ತಿರುಮಲ-ತಿರುಪತಿ ದೇವಾಲಯದ ಕಚೇರಿಯಲ್ಲಿ ಮತ್ತು ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದಿಯಂತೆ.
ಟಿಟಿಡಿ ನೂತನ ಇಒ ಅಧಿಕಾರ ಸ್ವೀಕಾರ
ಆಂಧ್ರಪ್ರದೇಶದ ಕಂದಾಯ ಮತ್ತು ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಕುಮಾರ್ ಸಿಂಘಾಲ್ ಅವರು ತಿರುಮಲ ದೇವಸ್ಥಾನದಲ್ಲಿ ಟಿಟಿಡಿ (ಎಫ್ಎಸಿ) EO ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದೇವಾಲಯದ ಆವರಣದಲ್ಲಿ ರಂಗನಾಯಕುಲ ಮಂಟಪದ ಬಳಿ ಬಂಗಾರ ಬಾಗಿಲು ಶ್ರೀವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಹೆಚ್ಚುವರಿ ಇಒ (ಎಫ್ಎಸಿ) ವೀರಬ್ರಹ್ಮ ಪ್ರಮಾಣ ವಚನ ಬೋಧಿಸಿದರು. ನಂತರ ರಂಗನಾಯಕುಲ ಮಂಟಪದಲ್ಲಿ ನೂತನ ಇಒ ಅವರಿಗೆ ವೇದ ಪಂಡಿತರಿಂದ ವೇದಾಶೀರ್ವಾದವನ್ನು ಸಲ್ಲಿಸಿದರು.