ಶ್ರೀನಿವಾಸಪುರ: ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರದಲ್ಲಿ ದಾಖಲೆ ಪ್ರಾಮಾಣದ ಧರದಲ್ಲಿ ತೋತಾಪುರಿ ಮಾವಿನಕಾಯಿ ಮಾರಾಟವಾಗಿದೆ.ಇದೊಂದು ಐತಿಹಾಸಿಕ ದಾಖಲೆ ಎನ್ನುತ್ತಾರೆ ಇಲ್ಲಿನ ಮಾವಿನ ಮಂಡಿ ವ್ಯಾಪರಸ್ಥರು. ಕೆಜಿಗೆ 47/-ಧರದಲ್ಲಿ ದಾಖಲೆ ಪ್ರಮಾಣಕ್ಕೆ ಮಾರಾಟವಾಗಿರುವ ಬಗ್ಗೆ ಮಾವು ಬೆಳೆಗಾರರೇ ಆಶ್ಚರ್ಯ ಭರಿತರಾಗಿದ್ದಾರೆ. ಮಾವಿನ ಸುಗ್ಗಿ ಬಹುತೇಕ ಮುಗಿಯುತ್ತ ಬಂದಿದೆ ಈ ಸಮಯದಲ್ಲಿ ಅಳಿದುಳಿದ ತೋತಾಪುರಿ ಮಾವಿನ ಕಾಯಿ ಒಂದು ಟನ್ ಇದ್ದರೆ ಅರ್ದಲಕ್ಷಕ್ಕೆ ಮಾರಬಹುದಾಗಿದೆ!
ತೋತಾಪುರಿ(ಬೆಂಗಳೂರ ಕಾಯಿ) ಕೇವಲ ಮಾವಿನ ತಿರಳು(ಜ್ಯೂಸ್) ತಗೆಯಲು ಹಣ್ಣು ಸಂಸ್ಕರಣ ಘಟಕ ಜ್ಯೂಸ್ ಫ್ಯಾಕ್ಟರಿಗೆ ಮಾತ್ರ ಬಳಕೆಯಾಗುವ ತಳಿ ಇದನ್ನು ತಿನ್ನಲು ಯಾರು ಮುಂದಾಗುವುದಿಲ್ಲ ಖರಿದಿ ಮಾಡುವುದು ಕಡಿಮೆ ಪ್ರಮಾಣ ಅಂತಹ ಕಾಯಿ ಆರಂಭದಲ್ಲಿ ಕೆಜಿಗೆ ಧರ 10 ರಿಂದ 12 ರೂಪಾಯಿ ಮಾತ್ರ ಇತ್ತು ನಂತರದಲ್ಲಿ ಪ್ರತಿದಿನ ಕೆಜಿಗೆ 1 ರಿಂದ 2 ರೂಪಾಯಿಗೆ ಏರಿಕೆಯಾಗುತ್ತ ಬಂದಿತು ಆರಂಭದಲ್ಲಿ ತೋಟಗಳ ವ್ಯಾಪಾರಸ್ಥರು 10 ರಿಂದ 12 ಧರಕ್ಕೆ ಮಾರಾಟವಾಗುತ್ತಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದರು ನಂತರ ಏರಿಕೆಯಾಗುತ್ತಿದ್ದಂತೆ ಶಾಕ್ ತಿಂದಿದ್ದ ತೋಟಗಳ ವ್ಯಾಪಾರಸ್ಥರು ಚೆತರಿಸಿಕೊಂಡರು ಕಳೆದ ವಾರ 25 ರಿಂದ 30 ರೂಪಾಯಿಗಳ ಧರ ಕಂಡಿತ್ತಾದರೂ ತೋತಾಪುರಿ ಕಾಯಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗುತ್ತಿದ್ದಂತೆ ಇತ್ತ ಧರ ಏರುತ್ತ ಹೋಗುತ್ತಿದೆ.
ಧರ ಏರಿಕೆಗೆ ಕಾರಣ?
ಈ ಬಾರಿ ಮಾವಿನ ಫಸಲಿನ ಇಳುವರಿ ತೀರಾ ಕಡಿಮೆ ಇರುವುದೆ ಧರ ಏರಿಗೆ ಕಾರಣ ಎನ್ನುತ್ತಾರೆ ಮಾವಿನ ಮಂಡಿ ಮಾಲಿಕ ಹಾಗು ಬೆಳೆಗಾರ ಪುರಸಭೆ ಮಾಜಿ ಸದಸ್ಯ ಕೆ.ವಿ.ಮಂಜುನಾಥ್.
ಮಾವು ಬೆಳೆಗಾರ ಉತ್ಪಾದಕರ ಸಂಸ್ಥೆ ಕಾರ್ಯನಿರ್ಹಣಾಧಿಕಾರಿ ಶಿವಕುಮಾರ್ ಹೇಳುವಂತೆ ಶ್ರೀನಿವಾಸಪುರ ಕೇಂದ್ರಿಕೃತವಾಗಿ ಸುಮಾರು 8 ಲಕ್ಷ ಹೆಕ್ಟೆರ್ ನಲ್ಲಿ ಬರುತ್ತಿದ್ದ ಮಾವು ಫಸಲು ಕಳೆದ ವರ್ಷ ಬಿದ್ದ ಬಾರಿ ಮಳೆಯಿಂದಾಗಿ ಮಾವಿನ ತೋಟಗಳಲ್ಲಿ ಅಂತರ್ಜಲ ಹೆಚ್ಚಾಗಿ ಬಹುತೇಕ ಮಾವಿನ ಗಿಡಗಳ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು ಈ ಹಿನ್ನಲೆಯಲ್ಲಿ ಮಾವಿನ ಗಿಡಗಳು ಚಿಗರು ಬಂದ ಕಾರಣ ಇಳುವರಿ ಕಡಿಮೆಯಾಗಿ ಫಸಲೆ ಇಲ್ಲದೆ ಧರ ಏರಿಕೆ ಕಂಡಿದೆ ಹವಮಾನ ವೈಪರಿತ್ಯದಿಂದ ಮಾವು ಬೆಳೆಗಾರರಿಗೆ ಅಪರೂಪಕ್ಕೆ ಸಿಕ್ಕಂತ ಅವಕಾಶ ಇದು ಎನ್ನುತ್ತಾರೆ.
ಕೊಹಿನೂರ್ ಮಾವು ಮಂಡಿ ಮಾಲಿಕ ನಾಸೀರ್ ಹೇಳುವಂತೆ ರೋಣೂರು ಹೋಬಳಿಯ ಸಾಮನ್ಯ ರೈತನೊಬ್ಬ ದಾಖಲೆ ಎನ್ನುವಂತೆ 20 ಟನ್ ಮಾವು ತಂದಿದ್ದು ದಾಖಲೆ ಧರಕ್ಕೆ ಮಾರಟವಾಗಿದ ಬಗ್ಗೆ ಹೇಳುತ್ತಾರೆ.
ಮಾವಿಗೆ ದಾಖಲೆ ಧರ ಸಿಕ್ಕಿರುವುದು ಖುಷಿಯ ವಿಚಾರ ಎನ್ನುವ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಕಳೆದ ವರ್ಷದ ಮಳೆ ಎಫೆಕ್ಟ್ ಈ ಬಾರಿ ಫಸಲು ಕಡಿಮೆಯಾಗಲು ಕಾರಣ ಇದು ದೊಡ್ದ ಮಟ್ಟದ ನಷ್ಟಕ್ಕೆ ಮಾವು ಬೆಳೆಗಾರರು ಒಳಗಾಗಿದ್ದು ನಂತರ ಈ ಬಾರಿ ಹವಮಾನ ವೈಪರಿತ್ಯದಿಂದ ಬಿರುಗಾಳಿ ಮಳೆಗೆ ದೊಡ್ದ ಪ್ರಮಾಣದಲ್ಲಿ ಕೊಯ್ಲಿಗೆ ಬಂದಿದ್ದ ಫಸಲು ನೆಲದ ಪಾಲಾಗಿದ್ದು ವಿಷಾದನೀಯ,ಹೇಗೊ ಕೊನೆಯವರಿಗೆ ಕಾದ ಕೆಲ ಮಾವು ಬೆಳೆಗಾರರಿಗೆ ಬೆಲ್ಲದ ಸಿಹಿ ಉಣ್ಣುವಂತಾಗಿದೆ ಎನ್ನುತ್ತಾರೆ.