ನ್ಯೂಜ್ ಡೆಸ್ಕ್: ವಯಸ್ಸಿನ ಅಂತರ ಇಲ್ಲದೆ ಯಾರಿಗೆ ಬೇಕಾದರೂ ಕ್ಯಾನ್ಸರ್ ಬರಬಹುದು ಕ್ಯಾನ್ಸರ್ ಬಂದರೆ ಸಾವು ತಪ್ಪದು ಎಂಬ ಭಯ ಬೇಡ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಗೌತಮಿ ಹೇಳಿದರು ಅವರು ತಿರುಪತಿ-ತಿರುಮಲ ದೇವಾಯಲದ ಮಹಿಳಾ ಉದ್ಯೋಗಿಗಳಿಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಸ್ವತಃ ಕ್ಯಾನ್ಸರ್ ಪೀಡಿತೆಯಾಗಿ ಅದನ್ನು ಗುಣಪಡಿಸಲು ತಾವು ಅಳವಡಿಸಿಕೊಂಡ ಅಹಾರ ಹಾಗು ಜೀವನ ಪದ್ದತಿ ಕುರಿತಾಗಿ ನಂತರ ಅದು ಗುಣಮುಖವಾದ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸಿದರು.
ತಿರುಪತಿ-ತಿರುಮಲ ದೇವಾಯಲದ ಇಒ ಧರ್ಮಾರೆಡ್ಡಿ ಮಾತನಾಡಿ ಯೋಗ,ಧ್ಯಾನದ ಜೊತೆಗೆ ಗೋ ಆಧಾರಿತ ಉತ್ಪನ್ನಗಳನ್ನು ಆಹಾರವಾಗಿ ಸೇವಿಸುವುದರಿಂದ ಕ್ಯಾನ್ಸರ್ ಸಮರ್ಥವಾಗಿ ಜಯಿಸುವ ಮೂಲಕ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಮಹಿಳೆಯರು ಕ್ಯಾನ್ಸರ್ ಬಗ್ಗೆ ಜಾಗೃತರಾದರೆ ಆರಂಭಿಕ ಹಂತದಲ್ಲೇ ಅದನ್ನು ಪತ್ತೆ ಹಚ್ಚಿ ತಡೆಗಟ್ಟಬಹುದು ಎಂದರು.ಮಾಂಸಾಹಾರ ಮತ್ತು ಪಾಶ್ಚಿಮಾತ್ಯ ಆಹಾರ ಪದ್ಧತಿಯೂ ಕ್ಯಾನ್ಸರ್ ಬರಲು ಕಾರಣವಾಗಿದ್ದು ಗೋ ಆಧಾರಿತ ಕೃಷಿ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಬಾಧಿಸದೇ ಇರುವ ಸಾಧ್ಯತೆಗಳು ಇದೆ ಎಂದರು. ಇದಕ್ಕಾಗಿ ದೇಶಿ ಗೋವು ಆಧಾರಿತ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ರೈತರಿಂದ 12 ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಪಾವತಿಸಿ ಖರೀದಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ ಎಂದು ವಿವರಿಸಿದರು.
ಜೆಇಒ ಸದಾಭಾರ್ಗವಿ,ಸ್ವಿಮ್ಸ್ ಅಸ್ಪತ್ರೆ ನಿರ್ದೇಶಕಿ ವೆಂಗಮ್ಮ, ಟಿಟಿಡಿ ದೆಹಲಿ ಸ್ಥಳೀಯ ಸಲಹಾ ಮಂಡಳಿ ಅಧ್ಯಕ್ಷ ವೇಮಿರೆಡ್ಡಿ ಪ್ರಶಾಂತಿ ಅವರು ಕ್ಯಾನ್ಸರ್ ಕಾರಣಗಳು ಮತ್ತು ಆರೋಗ್ಯಕರ ಅಭ್ಯಾಸಗಳ ಕುರಿತು ಮಾತನಾಡಿದರು. ಶ್ವೇತ ಆಡಿಟೋರಿಯಂ ನಿರ್ದೇಶಕಿ ಪ್ರಶಾಂತಿ ಮತ್ತಿತರರು ಭಾಗವಹಿಸಿದ್ದರು.