- ನಾಗಮಂಗಲ ಗಣೇಶ ವಿಸರ್ಜನೆ
- ಗಲಭೆಯಲ್ಲಿ ಕೆರಳದ ಇಬ್ಬರು
- ಪಿಎಫ್ಐ ಕಾರ್ಯಕರ್ತರು!
ನ್ಯೂಜ್ ಡೆಸ್ಕ್:ನಾಗಮಂಗಲ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದಂತ ಗಲಭೆಗೆ ಸಂಬಂಧಿಸಿದಂತೆ ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಚಿವ ಚೆಲುವರಾಯ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾಗಮಂಗಲ ಗಲಭೆ ಸಂಬಂಧ ಅಲ್ಲೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೇರಳ ಮೂಲದವರನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿಸಲಾಗಿದೆ.
ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ ಇರೋದು ಕಂಡುಬರುತ್ತಿದೆ, ಅಲ್ಲದೇ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ ಎನ್ನಲಾಗಿದ್ದು ಕೃತ್ಯಕ್ಕೆ ಮೊದಲೇ ಪ್ಲಾನ್ ಮಾಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ.
FIRನಲ್ಲಿ ಆರೋಪಿಗಳ ಪೈಕಿ ಇಬ್ಬರು ಕೇರಳದವರು
ಇದಕ್ಕೆ ಪೂರಕ ಎನ್ನುವಂತೆ FIR ನಲ್ಲಿ ಉಲ್ಲೇಖವಾಗಿರುವ ಆ ಎರಡು ಹೆಸರುಗಳು ಕಾರಣವಾಗಿದೆ. FIR ನಲ್ಲಿರುವ 74 ಆರೋಪಿಗಳ ಪೈಕಿ ಕೇರಳದ ಇಬ್ಬರು ಪ್ರಕರಣದ 44ನೇ ಆರೋಪಿ ಯೂಸೂಫ್, ಹಾಗು 61ನೇ ಆರೋಪಿ ನಾಸೀರ್ ಎಂದು ನಮೂದಿಸಲಾಗಿದ್ದು ಇಬ್ಬರೂ ಕೇರಳದ ಮಲ್ಲಪುರಂ ನಿವಾಸಿಗಳು ಎಂದು ಗುರುತಿಸಲಾಗಿದಿಯಂತೆ.
ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಂತಿ ಸಭೆ
ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ ಈಗ ಸಹಜ ಸ್ಥಿತಿಗೆ ಮರಳುತ್ತಿದೆ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದ್ದು ಭಾನುವಾರ ನಿಷೇಧಾಜ್ಞೆ ತೆರವಾಗಿದೆ.ಎರಡೂ ಕೋಮಿನವರು ಕೂಡಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಂಡಿದ್ದಾಗಿ ಹೇಳಲಾಗಿದೆ.
ಹಿಂದು ಸಂಘಟನೆಗಳ ಆರೋಪ
ಬಂಧಿತ ಕೆರಳದವರು ಇಬ್ಬರು ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆ ನಡೆಸಲು ಪೂರ್ವ ತಯಾರಿ ಮಾಡಿಕೊಂಡಿದ್ದು ಗಲಾಟೆ ನಡೆದ ದಿನ ಸ್ಥಳೀಯ ಮೆಡಿಕಲ್ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದ್ದು ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದ್ದಿರಬಹುದು ಎನ್ನಲಾಗಿದೆ ಈ ಪ್ರಕರಣದ ತನಿಖೆಯನ್ನ NIA ನಡೆಸಬೇಕು ಎಂದು ವಿಹೆಚ್ಪಿ ಒತ್ತಾಯಿಸಿದೆ.