- ರೋಣೂರಿನಲ್ಲಿ ಮನೆ ಕುಸಿದು ವೃದ್ದ ಸಾವು.
- ರೈಲು ಡಿಕ್ಕಿ ಹೊಡೆದು ಒರ್ವವ್ಯಕ್ತಿ ನಿಧನ.
ಶ್ರೀನಿವಾಸಪುರ:ಇತ್ತಿಚಿಗೆ ಸುರಿದ ಧಾರಕಾರ ಮಳೆಯಿಂದ ರೋಣೂರಿನಲ್ಲಿ ಮನೆ ಬಿದ್ದು ವೃದ್ದರೊಬ್ಬರು ಮೃತ ಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿರುತ್ತದೆ.
ಮೃತರನ್ನು ರೋಣೂರು ಗ್ರಾಮದ ಶ್ಯಾಮಾಚಾರಿ(64) ಎಂದು ಗುರುತಿಸಲಾಗಿದ್ದು ಮೃತ ವ್ಯಕ್ತಿ ಪತ್ನಿಯೊಂದಿಗೆ ವಾಸವಾಗಿದ್ದು ಇಂದು ಸಂಜೆ ಪತ್ನಿ ದನಕರುಗಳಿಗೆ ಹುಲ್ಲುತರಲು ಹೋಗಿದ್ದ ಸಂದರ್ಭದಲ್ಲಿ ಶ್ಯಾಮಚಾರಿ ಮನೆಯ ಮುಂಬಾಗ ಹೆಂಚಿನ ಒಪ್ಪಾರದಲ್ಲಿ ನಿಂತಿದ್ದಾಗ ಒಪ್ಪಾರ ಕುಸಿದು ಅಸರೆಯಾಗಿ ನಿಲ್ಲಿಸಿದ್ದ ಕಲ್ಲುಚಪ್ಪಡಿ ಆತನ ಮೆಲೆ ಬಿದ್ದು ಸ್ಥಳದಲ್ಲಿಯೇ ಪ್ರಾಣಬಿಟ್ಟಿರುತ್ತಾರೆ.
ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್ ತಾಲ್ಲೂಕು ಪಂಚಾಯಿತಿ ಇವೊ ಆನಂದ್,ಪೋಲಿಸ್ ಇನ್ಸೆಪೆಕ್ಟರ್ ರವಿಕುಮಾರ್, ರೆವಿನ್ಯೂ ಅಧಿಕಾರಿ ಜನಾರ್ದನ್,ಪಿ.ಡಿ.ಒ ರಮೇಶ್ ಕುಮಾರ್ ಭೇಟಿ ನೀಡಿದ್ದು ತಾತ್ಕಲಿಕ ಪರಿಹಾರವಾಗಿ 5 ಸಾವಿರ ಹಣ ನೀಡಿರುತ್ತಾರೆ.
ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತ ಸಾವು
ಗುರುವಾರ ಮಧ್ಯನಾಃ ರೈಲು ಡಿಕ್ಕಿಯಾಗಿ ಕುರಿಗಾಹಿ ಸಾವನಪ್ಪಿರುತ್ತಾನೆ ಮೃತನನ್ನು ಪಟ್ಟಣದ ಸಂತೇಮೈದಾನದ ನಿವಾಸಿ ರಾಮಪ್ಪ(60) ಎಂದು ಗುರುತಿಸಲಾಗಿದ್ದು ಮೃತನು ಕುರಿಗಳನ್ನು ಮೆಯಿಸಿಕೊಂಡು ರೈಲ್ವೆ ಹಳಿ ದಾಟುತ್ತಿರುವಾಗ ರೈಲ್ವೆ ನಿಲ್ದಾಣ ಮತ್ತು ರೈಲ್ವೆ ಬ್ರಿಡ್ಜ್ ನಡುವೆ ಅಪಘಾತ ನಡೆದಿರುತ್ತದೆ.