ನ್ಯೂಜ್ ಡೆಸ್ಕ್: ಬೆಳಕಿನ ಹಬ್ಬ “ದೀಪಾವಳಿ” ಹೆಸರಿನಲ್ಲಿ ಆಂಧ್ರಪ್ರದೇಶದಲ್ಲಿ ಎರಡು ಗ್ರಾಮಗಳಿವೆ ಒಂದು ಗ್ರಾಮದಲ್ಲಿ ಸುಮಾರು 300 ಮನೆಗಳು ಒಂದು ಸಾವಿರ ಜನಸಂಖ್ಯೆ ಇದ್ದರೆ ಮತ್ತೊಂದು ಗ್ರಾಮದಲ್ಲಿ ಸುಮಾರು 50 ಕುಟುಂಬಗಳ ಸಣ್ಣ ಗ್ರಾಮವಾಗಿದೆ ಈ ಎರಡು ಗ್ರಾಮಗಳ ಹೆಸರು ದೀಪಾವಳಿ
ಎಂಬುದೆ ವಿಶೇಷ.
ಆಂಧ್ರದ ಶ್ರೀಕಾಕುಲಂ ಜಿಲ್ಲೆಯಲ್ಲಿಯೇ ಎರಡು ದೀಪಾವಳಿ ಗ್ರಾಮಗಳು ಇದೆ ತೆಕ್ಕಲಿ ಮಂಡಲ ವ್ಯಾಪ್ತಿಯ ಅಯೋಧ್ಯಾಪುರ ಪಂಚಾಯಿತಿಯಲ್ಲಿ “ದೀಪಾವಳಿಪೇಟ” ಎಂಬ 50 ಕುಟುಂಬಗಳ ಸಣ್ಣ ಗ್ರಾಮವಾಗಿದ್ದರೆ, ಗಾರ ಮಂಡಲ ವ್ಯಾಪ್ತಿಯಲ್ಲಿ ಸುಮಾರು 300 ಮನೆಗಳು ಮತ್ತು ಒಂದು ಸಾವಿರ ಜನಸಂಖ್ಯೆಯ ದೀಪಾವಳಿ ಎಂಬ ಗ್ರಾಮವಿದೆ.
ದೀಪಾವಳಿ ಹೆಸರಿಗೆ ಕಥೆಯೊಂದು ಇದೆ.
ಗ್ರಾಮಕ್ಕೆ ದೀಪಾವಳಿ ಹೆಸರನ್ನು ಇಡುವ ಬಗ್ಗೆ ಜನಪ್ರಿಯ ಕಥೆಯಿದೆ ದಶಕಗಳ ಹಿಂದೆ ಆ ಪ್ರದೇಶವನ್ನು ಆಳುತ್ತಿದ್ದ ರಾಜ ತನ್ನ ಪರಿವಾರದೊಂದಿಗೆ ಕುದುರೆಯ ಮೇಲೆ ಕಳಿಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಸೂರ್ಯನ ತಾಪ ತಾಳಲಾರದೆ ಗ್ರಾಮದಲ್ಲಿ ಬಿದ್ದು ಮೂರ್ಛೆ ಹೋದನಂತೆ ಈ ಸಮಯದಲ್ಲಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದ ಕೂಲಿಕಾರರು ಹಾಗು ಜನತೆ ಬಂದು ರಾಜನನ್ನು ಭೇಟಿ ಮಾಡಿ ಉಪಚಾರ ಮಾಡಿದ ನಂತರ ರಾಜ ಚೇತರಿಸಿಕೊಂಡು ಉಪಚರಿಸಿದವರಿಗೆ ಧನ್ಯವಾದ ಹೇಳಿದನಂತೆ ಅದೇ ದಿನ ದೀಪಾವಳಿ ಆಗಿದ್ದರಿಂದ ಅದನ್ನು ನೆನಪಿಸಿಕೊಂಡು ರಾಜನು ಗ್ರಾಮಕ್ಕೆ ದೀಪಾವಳಿ ಎಂದು ನಾಮಕರಣ ಮಾಡಿದನೆಂಬ ಕಥೆಯೂ ಪ್ರಚಲಿತದಲ್ಲಿದೆ. ಹಾಗಾಗಿ ಗ್ರಾಮಸ್ಥರು ಬೆಳಕಿನ ಹಬ್ಬ ದೀಪಾವಳಿಯನ್ನು ಹತ್ತು ದಿನಗಳ ಕಾಲ ಆಚರಿಸುವುದು ವಾಡಿಕೆ.
ದೀಪಾವಳಿ ಪೇಟ ಹೇಗೆ
1928-30 ರ ನಡುವೆ ಗ್ರಾಮದಲ್ಲಿನ ಗುಡಿಸಲುಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಒಂದು ದಿನ ಮನೆಯಲ್ಲಿದ್ದ ದೀಪವನ್ನು ಇಲಿ ಒಯ್ದು ಗುಡಿಸಲೊಂದರ ಮೇಲೆ ಇಟ್ಟಿದ್ದರಿಂದ ಊರಿನ ಎಲ್ಲಾ ಗುಡಿಸಲುಗಳು ಸುಟ್ಟು ಕರಕಲಾದವೆಂದು ಅಂದಿನಿಂದ ಈ ಪಟ್ಟಣವನ್ನು ದೀಪಾಲಪೇಟ ಎಂದು ಕರೆಯಲಾಯಿತೆಂದು ಕಾಲಕ್ರಮೇಣ ದೀಪಾವಳಿಪೇಟ ಎಂಬ ಹೆಸರು ಬದಲಾಯಿತು ಎಂದು ಪೂರ್ವಜರು ಹೇಳುತ್ತಿದ್ದರು ಎನ್ನುತ್ತಾರೆ ಗ್ರಾಮಸ್ಥರು.