ನ್ಯೂಜ್ ಡೆಸ್ಕ್:ತುಳಸಿ ಗಬ್ಬಾರ್ಡ್ ಸದ್ಯ ವಿಶ್ವಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಹಾಗು ಸರ್ಚ್ ಇಂಜಿನಲ್ಲಿ ಹುಡುಕಲಾಗುತ್ತಿರುವ ಹೆಸರು ಈಕೆ ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿ ಈಕೆ ಮೂಲ ಭಾರತ ಅಲ್ಲ ಭಾರತದಲ್ಲಿ ಯಾವುದೆ ಸಂಪರ್ಕವೂ ಇಲ್ಲ ಸಂಬಂಧವೂ ಇಲ್ಲ ಆದರೆ ಈಕೆ ಹಿಂದು.ಅಮೆರಿಕದ ಮೊದಲ ಹಿಂದೂ ಸಂಸದೆ ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದು 2022 ರಲ್ಲಿ ರಿಪಬ್ಲಿಕನ್ ಪಕ್ಷ ಸೇರಿದ ಇವರು ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.
ಹೇಗೆ ಈಕೆ ಹಿಂದು
ತುಲಸಿ ಗಬ್ಬಾರ್ಡ್ ಗೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎನ್ನುವುದಾದರೆ,43 ವರ್ಷದ ತುಳಸಿ ಅಮೆರಿಕಾದ ಸಮೋವಾ ಎನ್ನುವ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗಳಿಗೆ ನಾಲ್ಕನೇ ಮಗಳಾಗಿ ಜನಿಸಿದರು ಅವರಿಗೆ ಎರಡು ವರ್ಷ ವಯಸ್ಸು ಇದ್ದಾಗ ತುಳಸಿ ಕುಟುಂಬ ಸಮೋವಾದಿಂದ ಹವಾಯಿ ದ್ವೀಪ ಸಮೂಹಕ್ಕೆ ವಲಸೆ ಹೋಗುತ್ತಾರೆ. ಇವರ ತಂದೆ ಕ್ರಿಶ್ಚಿಯನ್ ಆದರೂ,ಹಿಂದೂವಾಗಿ ಮತಾಂತರಗೊಂಡರು. ಅಷ್ಟೇ ಅಲ್ಲದೇ, ತಮ್ಮ ಎಲ್ಲಾ ಮಕ್ಕಳಿಗೂ ಹಿಂದೂ ಹೆಸರುಗಳನ್ನೇ ನಾಮಕರಣ ಮಾಡುತ್ತಾರೆ ಮನೆಯಲ್ಲಿ ಹಿಂದೂ ಧರ್ಮವನ್ನೇ ಪಾಲಿಸಿಕೊಂಡು ಬರುತ್ತಾರೆ ಇದು ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿತು. ಭಾರತದ ಬೇರು ಅಲ್ಲದಿದ್ದರೂ ಹಿಂದೂ ಧರ್ಮವನ್ನು ಪಾಲಿಸುತ್ತದೆ ಇವರ ಕುಟುಂಬ. ಈ ಹಿನ್ನೆಲೆಯಲ್ಲಿ,ತುಳಸಿ ಗಬ್ಬಾರ್ಡ್ ಅವರು ಹಿಂದೂ ಎಂದು ಗುರುತಿಸಿಕೊಳ್ಳುತ್ತಾರೆ ಮಂತ್ರಪಠಣ, ಧ್ಯಾನ ಮುಂತಾದವುಗಳಲ್ಲಿ ಭಾರೀ ಆಸಕ್ತಿಯನ್ನು ಹೊಂದಿದ್ದರಂತೆ.ಹಿಂದೂ ಮತದ ಅನುಯಾಯಿ ಎನ್ನುವ ತುಳಸಿ ಸಮರ ಕಲೆಯ ಮೇಲೆ ವಿಶೇಷ ಆಸಕ್ತಿ,ಅಪ್ಪಟ ಸಸ್ಯಾಹಾರಿಯಾದ ಇವರಿಗೆ ಐದು ಜನ ಮಕ್ಕಳು. ಅವರ ಹೆಸರನ್ನು ಕ್ರಮವಾಗಿ, ಭಕ್ತಿ, ಜೈ, ಆರ್ಯನ್, ತುಳಸಿ, ವೃಂದಾವನ್ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದ್ದು ಭಗವದ್ಗೀತೆಯ ಮೇಲೆ ಕೈ ಇಟ್ಟು ಕಾಂಗ್ರೆಸ್ ಸದಸ್ಯೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದ ತುಳಸಿ ಹವಾಯಿ ಆರ್ಮಿ ನ್ಯಾಷನಲ್ ಗಾರ್ಡ್ನೊಂದಿಗೆ 17 ವರ್ಷಗಳ ಸೇವೆಯ ನಂತರ US ಆರ್ಮಿ ರಿಸರ್ವ್ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿದ್ದು ಸೇನಾ ಹಿನ್ನಲೆಯ ಇಬ್ಬರಲ್ಲಿ ಒಬ್ಬರು ಎನ್ನುವ ಹಿನ್ನಲೆಯ ತುಳಸಿ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದಿಂದ ಗೆದ್ದವರು. ಈ ಹಿಂದೆ ಮೋದಿ ಪ್ರಧಾನಿಯಾಗುವ ಮುನ್ನ, ಅಮೆರಿಕಾ ವೀಸಾ ನಿರಾಕರಿಸಿದ್ದನ್ನು ವಿರೋಧಿಸಿದವರಲ್ಲಿ ತುಳಸಿ ಕೂಡಾ ಒಬ್ಬರು.
ಅಂದಹಾಗೆ ತುಳಸಿ ಅವರು,ನಾಲ್ಕು ಬಾರಿ ಸಂಸದರಾಗಿದ್ದಾರೆ. 2020ರಲ್ಲಿ ಅಧ್ಯಕ್ಷೀಯ ಆಕಾಂಕ್ಷಿಯೂ ಆಗಿದ್ದರು. ಅವರು ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷವನ್ನು ತೊರೆದು ರಿಪಬ್ಲಿಕನ್ ಪಕ್ಷಕ್ಕೆ ಸೇರಿದರು. ಇವರ ಹಿನ್ನೆಲೆಯೂ ಕುತೂಹಲವಾಗಿದೆ. ಇವರು ಭಾರತೀಯರಲ್ಲದಿದ್ದರೂ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸುತ್ತಲೇ ಬಂದಿದ್ದಾರೆ. 2021 ರಲ್ಲಿ, ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರ ರಕ್ಷಣೆಗಾಗಿ ಯುಎಸ್ ಕಾಂಗ್ರೆಸ್ನಲ್ಲಿ ನಿರ್ಣಯವನ್ನು ಮಂಡಿಸಿದ್ದವರು ಇದೇ ತುಳಸಿ. 50 ವರ್ಷಗಳ ಹಿಂದೆ ಪಾಕಿಸ್ತಾನಿ ಸೇನೆ ಬಾಂಗ್ಲಾದೇಶದಲ್ಲಿರುವ ಸಾವಿರಾರು ಬಂಗಾಳಿ ಹಿಂದೂಗಳ ಮೇಲೆ ಎಸಗಿದ್ದ ದೌರ್ಜನ್ಯದ ಕುರಿತು ಅವರು ತಮ್ಮ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದರು. ಪಾಕಿಸ್ತಾನದ ಭೂಮಿಯನ್ನು ಭಯೋತ್ಪಾದಕರು ಬಳಸುತ್ತಿರುವ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದ್ದರು.
ಸಿಐಎ ನಿರ್ದೇಶಕರಾಗಿ ನಿಯೋಜಿತಗೊಂಡಿರುವ ಜಾನ್ ರ್ಯಾಟ್ ಕ್ಲಿಫ್ ಜೊತೆಗೆ ತುಳಸಿ ಗಬ್ಬಾರ್ಡ್ ಹೊಸ ಕೆಲಸವನ್ನು ನಿರ್ವಹಿಸಲಿದ್ದಾರೆ. ಹದಿನೆಂಟು ಗುಪ್ತಚರ ಸಂಸ್ಥೆಯ ಉಸ್ತುವಾರಿಯನ್ನು ಇವರು ನೋಡಿಕೊಳ್ಳಲಿದ್ದಾರೆ. ಇದರ ಜೊತೆಗೆ, ಡೊನಾಲ್ಡ್ ಟ್ರಂಪ್ ಅವರಿಗೆ ದೈನಂದಿನ ಸಂಕ್ಷಿಪ್ತ ಇನ್ಪುಟ್ ನೀಡುವ ಜವಾಬ್ದಾರಿ ಕೂಡಾ ಇವರ ಮೇಲಿದೆ ಎನ್ನುತ್ತಾರೆ.
ಇನ್ನು ಇವರು ನೇಮಕಗೊಂಡಿರುವ ಗುಪ್ತಚರ ಇಲಾಖೆ ಕುರಿತು ಹೇಳುವುದಾದರೆ, ನ್ಯೂಯಾರ್ಕ್ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11 ರಂದು ದಾಳಿ ನಡೆದಿತ್ತು. ಆ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ. ಇದಕ್ಕೆ ಈಗ ಮೊದಲ ಹಿಂದೂ ಮಹಿಳೆ ನಿರ್ದೇಶಕಿಯಾಗಿದ್ದಾರೆ.