ಮುಳಬಾಗಿಲು:ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ವ್ಯಕ್ತಿಯೊಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಸೋಮವಾರ ಸಂಜೆ ಉತ್ತನೂರುರಾಮಣ್ಣ(72) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು ಅವರ ಮಹದಾಸೆಯಂತೆ ಕಣ್ಣುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾನ ಮಾಡಿ ಮಾನವೀಯತೆ ಮೆರೆದು ಅಂದರೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.
ವೃತ್ತಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಉದ್ಯೋಗಿಯಾಗಿದ್ದ ಉತ್ತನೂರು ವರದಪ್ಪನವ ಮಗ ರಾಮನ್ ಅವರು ಉತ್ತನೂರುರಾಮಣ್ಣ ಎಂದೆ ಖ್ಯಾತರಾಗಿದ್ದರು.ಮುಳಬಾಗಿಲು ತಾಲೂಕಿನ ಖ್ಯಾತ ರಾಜಕಾರಣಿ ಉತ್ತನೂರುಶ್ರೀನಿವಾಸ್ ಅವರ ಕಿರಿಯ ಸಹೋದರರಾಗಿ ಪ್ರತಿಷ್ಟಿತ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದ ಅವರು ಅವರು ಕೃಷಿಯಲ್ಲಿ ಆಸಕ್ತಿ ವಹಿಸಿ ಉತ್ತಮ ಸಾಧನೆ ಮಾಡಿದ್ದರು.
ಮರಣದ ನಂತರ ಕಣ್ಣುಗಳು ಪ್ರಪಂಚವನ್ನು ನೋಡಬೇಕು ಎಂಬ ಮಹದಾಸೆ ಹೊಂದಿದ್ದು ಇದಕ್ಕಾಗಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಕೋಲಾರದ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ನೊಂದಣೆ ಮಾಡಿಸಿದ್ದರು ಅದರಂತೆ ಅವರ ಪತ್ನಿ ಹಾಗು ಮಕ್ಕಳಾದ ಅರುಣ್ ಕುಮಾರ್ ಮತ್ತು ಅರ್ಜುನ್ ಅವರು ಉತ್ತನೂರುರಾಮಣ್ಣನವರ ನೇತ್ರಗಳನ್ನು ಜಾಲಪ್ಪ ಆಸ್ಪತ್ರೆಗೆ ದಾನ ಮಾಡಿದರು.