ಶ್ರೀನಿವಾಸಪುರ:ತಾಲೂಕಿನಲ್ಲಿರುವ ವೈಷ್ಣವ ದೇವಾಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು ಮುಂಜಾನೆಯಿಂದಲೇ ಭಕ್ತರ ದಂಡು ಶ್ರೀನಿವಾಸ ಹಾಗು ವೆಂಕಟೇಶ್ವರ ದೇವಾಲಯಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಉತ್ತರ ಬಾಗಿಲು ದರ್ಶನ ಪಡೆದು ಪುನಿತರಾದರು.
ತಾಲೂಕಿನ ಪ್ರಖ್ಯಾತ ಪ್ರಮುಖ ವೈಷ್ಣವ ಪುಣ್ಯಕ್ಷೇತ್ರಗಳಾದ ರೋಣೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಹಾಗು ರಾಯಲ್ಪಾಡು ಹೋಬಳಿ ಗನಿಬಂಡೆ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ನಸುಕಿನಲ್ಲಿ ಸುಪ್ರಭಾತ ಸೇವೆ, ಪಟ್ಟು ಪೀತಾಂಬರ ವಸ್ತ್ರಾಲಂಕಾರ, ತೋಮಾಲೆ ಸೇವೆ, ಪುಷ್ಪಾಲಂಕಾರ,ಅಷ್ಟಾಕ್ಷರಿ ಹೋಮ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಿತು ದೊಡ್ದ ಸಂಖ್ಯೆಯಲ್ಲಿ ಭಕ್ತರ ದಂಡು ಗೋವಿಂದ ಗೋವಿಂದ ಎಂದು ನಾಮ ಸ್ಮರಣೆ ಮಾಡುತ್ತ ಹರಿದು ಬಂದಿದ್ದು ವಿಶೇಷ,ಯಲ್ದೂರಿನ ಶ್ರೀ ಕೋದಂಡರಾಮಸ್ವಾಮಿ ದೇವಾಸ್ಥಾನದಲ್ಲಿ ಆಯೋಜಿಸಿದ್ದ ವೈಯುಕುಂಠ ಏಕಾದಶಿ ಪೂಜೆಯಲ್ಲಿ ಭಕ್ತರು ಗೋವಿಂದಾ ನಾಮ ಸ್ಮರಣೆಯೊಂದಿಗೆ ಅಗಮಿಸಿ ದರ್ಶನ ಪಡೆದುಕೊಂಡರು.
ಇನ್ನು ತಾಲೂಕಿನ ಅರಕೇರಿ ಶ್ರೀ ಕೋದಂದರಾಮ ದೇವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ಬೆಣ್ಣೆ ಅಲಂಕಾರ ಮಾಡಲಾಗಿ ರಾಮತಾರಕ ಹೋಮ ಮಾಡಲಾಯಿತು ಸಿ.ಹೋಸೂರಿನ ಶ್ರೀನಿವಾಸ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣ,ಪಟ್ಟಣದ ವಲ್ಲಭಾಯಿ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯ, ದೇವಾಲಯಗಳಲ್ಲಿ ಮಾಡಿದ್ದ ವಿಶೇಷ ಅಲಂಕಾರ ಜನರನ್ನು ಅಕರ್ಷಿಸಿತ್ತು.ವಲ್ಲಭಾಯಿ ರಸ್ತೆಯಲ್ಲಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿತ್ತು ದೇವಸ್ಥಾನದ ಸುತ್ತಲೂ ಚಪ್ಪರ ಹಾಕಿ ಹೂವಿನ ಅಲಂಕಾರದ ಉತ್ತರ ದ್ವಾರದ ಮೂಲಕ ದರ್ಶನ ಭಾಗ್ಯ ಆಯೋಜಿಸಿದ್ದು ಮುಂಜಾನೆ ನಸುಕಿನಲ್ಲೆ ಭಕ್ತರು ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದರು.
ಬಳೆ ಅಂಜನೇಯ ಸ್ವಾಮಿ ಬೃಹತ್ ಕೇಸರಿ ಮಂಟಪ
ಶಂಕರಮಠ ವೃತ್ತದಲ್ಲಿರುವ ಬಳೆ ಅಂಜನೇಯ ಸ್ವಾಮಿ ಸಮೇತ ಶ್ರೀ ಲಕ್ಷ್ಮೀನಾರಯಣ ದೇವಾಲಯದ ಆವರಣದಲ್ಲಿ ಬೃಹತ್ ಗಾತ್ರದ ಕೆಸರಿ ಮಂಟಪ ಸ್ಥಾಪಿಸಿ ಅದರಲ್ಲಿ ವಿಶೇಷವಾಗಿ ಶ್ರೀದೇವಿ ಭೂದೇವಿ ಸಮೇತ ಶ್ರೀವೆಂಕಟೇಶ್ವರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿ ವಿದ್ಯತ್ ದೀಪಾಲಂಕಾರ ಮಾಡುವ ಮೂಲಕ ವೈಕುಂಠವೆ ಧರೆಗಿಳಿದಂತೆ ಸಿನಿಮಾ ಸೆಟ್ ನಂತೆ ಸೃಷ್ಟಿಸಲಾಗಿತ್ತು ಇದು ಭಕ್ತರನ್ನು ವಿಶೇಷವಾಗಿ ಅಕರ್ಷಿಸಿತ್ತು.
ಪಟ್ಟಣದ ಶ್ರೀ ರಾಘವೇಂದ್ರ ಮಠ,ಹಳೇಪೇಟೆಯ ಶ್ರೀ ಉಗ್ರನರಸಿಂಹ ದೇವಾಲಯ,ದಿಂಬಾಲದ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ವೈಕುಂಠ ದ್ವಾರ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು.ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.