ಶ್ರೀನಿವಾಸಪುರ:ವೈಕುಂಠ ಏಕಾದಶಿ ಅಂಗವಾಗಿ ತಾಲೂಕಿನ ಬಹುತೇಕ ವೈಷ್ಣವ ದೇವಾಲಯಗಳಲ್ಲಿ ವೈಕುಂಠವಾಸ ಶ್ರೀನಿವಾಸನ ನಾಮಸ್ಮರಣೆ ಭಜನೆ ನಿರಂತರವಾಗಿ ನಡೆಯಿತು.
ತಾಲೂಕಿನ ಪುರಾಣ ಪ್ರಸಿದ್ಧ ಗನಿಬಂಡೆ ಶ್ರೀನಿವಾಸ ದೇವಾಲಯ,ರೊಣೂರು ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯ,ಯಲ್ದೂರಿನ ಶ್ರೀ ಕೋದಂಡರಾಮ ದೇವಾಲಯ,ಅರಿಕೇರೆಯ ಶ್ರೀ ಕೋದಂಡರಾಮ ದೇವಾಲಯ, ಶ್ರೀನಿವಾಸಪುರ ಪಟ್ಟಣದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ,ಬಳೆ ಅಂಜನೇಯನ ದೇವಾಲಯದ ಶ್ರೀ ಲಕ್ಷ್ಮಿನಾರಯಣ ದೇವಾಲಯ,ಹಳೇಪೇಟೆಯ ಶ್ರೀ ಲಕ್ಷ್ಮೀ ನಾರಸಿಂಹ ದೇವಾಲಯ,ಚೀರುವನ ಹಳ್ಳಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಸಿ.ಹೊಸೂರು ಶ್ರೀ ವೇಂಕಟೇಶ್ವರ ದೇವಾಲಯ ದ್ವಾರಸಂದ್ರ ಶ್ರೀ ಲಕ್ಷ್ಮೀನಾರಸಿಂಹ ದೇವಾಲಯ. ತಾಡಿಗೋಳ್ ಶ್ರೀ ನಾರಸಿಂಹ ದೆವಾಲಯದಲ್ಲಿ ವಿಶೇಷ ಪೂಜೆ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು




