ಶ್ರೀನಿವಾಸಪುರ:ಪಟ್ಟಣದ ತಾಲೂಕು ಕಚೇರಿ ಮುಂಬಾಗದಿಂದ ಆರಂಭವಾದ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು,ಮೇಳ, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ವಾಲ್ಮೀಕಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪ್ರತಿ ಹಳ್ಳಿಯಿಂದಲೂ ವಾಲ್ಮೀಕಿ ಭಾವಚಿತ್ರ ಇರುವ ಪಲ್ಲಕ್ಕಿಗಳು ಹಾಗು ಯುವಕ ಸಂಘದ ಪದಾಧಿಕಾರಿಗಳು ಪ್ಲೆಕ್ಸ್ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಗೆ ಮೆರಗು ಹೆಚ್ಚಿಸಿದರು.ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಸದ್ದು ಮಾಡಿದರೆ ಯುವಕರು ಒಗ್ಗೂಡಿ ಹೆಜ್ಜೆಹಾಕುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಮೆರವಣಿಗೆ ನಂತರ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
