ಶ್ರೀನಿವಾಸಪುರ:ತಾಲೂಕಿನಲ್ಲಿ ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರು ಎಂದು ಖ್ಯಾತರಾಗಿರುವ ಉತ್ತನೂರು ಪ್ರೌಡಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ವೆಂಕಟರೆಡ್ಡಿ ಅವರನ್ನು ಆಂಧ್ರದ ತಿರುಪತಿಯಲ್ಲಿ ಅವರ ಹಳೇಯ ವಿಧ್ಯಾರ್ಥಿಗಳು ವರ್ಣರಂಜಿತ ಸಮಾರಂಭದಲ್ಲಿ ಸನ್ಮಾನಿಸಿದ್ದಾರೆ.
ವೆಂಕಟರೆಡ್ಡಿ ಮೇಷ್ಟ್ರು ಈ ಹಿಂದೆ ಮುಳಬಾಗಿಲಿನ ರಾಮಪ್ರಿಯ ಟೀಚರ್ ಟ್ರೈನಿಂಗ್ ಕಾಲೇಜಿನ( ರಾಮಪ್ರಿಯ ಟಿಸಿಹೆಚ್ ಕಾಲೇಜು) ಪ್ರಿನ್ಸಿಪಾಲರಾಗಿದ್ದರು ಈ ಸಂದರ್ಬದಲ್ಲಿ 1989-90 ಸಾಲಿನ ವಿಧ್ಯಾರ್ಥಿಗಳಲ್ಲಿ ಬಹುತೇಕರು ಆಂಧ್ರದವರೆ ಎನ್ನುವುದು ವಿಶೇಷ ಆ ಸಾಲಿನಲ್ಲಿ ಓದಿದಂತ ಆಂಧ್ರದ ವಿವಿಧ ಜಿಲ್ಲೆಗಳ ವಿಧ್ಯಾರ್ಥಿಗಳು ತಮ್ಮ 36 ವರ್ಷದ ಹಳೆಯ ನೆನಪುಗಳನ್ನು ಮೆಲಕು ಹಾಕಿಕೊಳ್ಳಲು ಒಂದು ಜಾಗದಲ್ಲಿ ಒಗ್ಗೂಡಲು ನಿರ್ಧರಿಸಿದ್ದು ಅವರೊಂದಿಗೆ ತಮಗೆ ಪಾಠ ಮಾಡಿದ ಮೇಷ್ಟ್ರುಗಳನ್ನು ಉಪನ್ಯಾಸಕರನ್ನು ಕರೆಸಿಕೊಂಡಿದ್ದ ವಿದ್ಯಾರ್ಥಿಗಳು ತಿರುಪತಿ ನಗರ ಪಾಲಿಕೆ ಪ್ರಾಥಮಿಕ ಪಾಠಾಶಾಲೆ ಮುಖ್ಯೋಪಾದಾಯ ಮುನಿಕೃಷ್ಣ ನೇತೃತ್ವದಲ್ಲಿ ತಿರುಪತಿಯ ಬಾಲಾಜಿ ಕಾಲೋನಿಯ ಖಾಸಗಿ ಶಾಲೆಯಲ್ಲಿ ಆಯೋಜಿಸಿದ್ದ ಸ್ನೇಹಬಂಧಮ್ ಕಾರ್ಯಕ್ರಮದಲ್ಲಿ ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟರೆಡ್ಡಿ ಮೂರು ದಶಕಗಳ ಹಿಂದೆ ವಿದ್ಯಾರ್ಥಿಗಳಾಗಿದ್ದವರು ಇಂದು ಶಿಕ್ಷಕರಾಗಿ ಖಾಸಗಿ ಶಾಲೆ ಸರ್ಕಾರಿ ಶಾಲೆಗಳಲ್ಲಿ 90 ರಷ್ಟು ಜನ ಸೇವೆಯಲ್ಲಿ ವಿದ್ಯಾಬೋಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ನೀವು ನಿಮ್ಮಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಿಕೆ ಮುಂದುವರಿಯಲಿ ಎಂದು ಆಶಿಸಿದ ಅವರು ವಯಸ್ಸಿನಲ್ಲಿ ಅರ್ದಶತಕ ದಾಟಿದವರು ಅದರ ಹತ್ತಿರಕ್ಕೆ ಬಂದಿರುವಂತವರು ಇದ್ದೀರಾ ಆದರೂ ಹಳೆಯ ಸ್ನೇಹದ ಮೆಲಕು ಹಾಕಲು ಒಂದಡೆ ಸೇರಿದ ನಿಮ್ಮ ಪ್ರಜ್ಞಾವಂತಿಕೆ ಮೆಚ್ಚುವಂತಹದು ಎಂದರು.

ಕಳೆದ ಮೂರು ತಿಂಗಳಿನಿಂದ ಕಾರ್ಯಕ್ರಮ ನಡೆಸಲು ತಾಲಿಮೂ ನಡೆಸಿದ ವಿದ್ಯಾರ್ಥಿಗಳು ತಮ್ಮೊಂದಿಗೆ ಓದಿದ ಹಾಗೆ ತಮಗೆ ಪಾಠ ಮಾಡಿದ ಶಿಕ್ಷಕರ ಮೊಬೈಲ್ ಸಂಖ್ಯೆಗಳನ್ನು ಕ್ರೂಡಿಕರಿಸಿ ಕಾರ್ಯಕ್ರಮ ಯಶಸ್ವಿಯಾಗಲು ಪರಸ್ಪರ ಸಹಕಾರ ನೀಡಿದಂತವರಿಗೆ ಕೃತಜ್ಞತೆ ಸಲ್ಲಿದರು.
ಈ ಸಂದರ್ಭದಲ್ಲಿ ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರು ಸೇರಿದಂತೆ ಅವರೊಂದಿಗೆ ಸಹುದ್ಯೋಗಳಾಗಿದ್ದ ರಾಮಪ್ರಿಯಾ ಟಿಸಿಹೆಚ್ ಕಾಲೇಜು ಹಳೆ ಉಪಾಧ್ಯಾಯರನ್ನು ಸನ್ಮಾನಿಸಲಾಯಿತು.