ಶ್ರೀನಿವಾಸಪುರ:ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ವಿತರಣೆಯ ಕಾರ್ಯಕ್ರಮದಿಂದ ರಾಜಕೀಯ ಲಾಭ ಪಡೆದುಕೊಳ್ಳಲಾಗಿತ್ತಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆರೋಪಿಸಿದರು ಅವರು ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬುಧವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಶಾಸಕ ರಮೇಶ್ ಕುಮಾರ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕಸಬಾ ಹೋಬಳಿಯ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಿದ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ ಅವರು ಸಾಲ ವಿತರಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಸಾಲ ನೀಡಿ ಅದನ್ನು ರಾಜಕೀಯವಾಗಿ ಬಳಸಿಕೊಳುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ಕೇಂದ್ರ ಸರ್ಕಾರದ ನಬಾರ್ಡ ಬ್ಯಾಂಕ್ ಹಣ ಅದನ್ನು ತಂದು ಸ್ವಂತ ಹಣ ಎನ್ನುವಂತೆ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯ ಭಾಷಣ ಮಾಡಿ ಜನರಿಗೆ ಮರಳು ಮಾತುಗಳನ್ನು ಹೇಳಿ ರಾಜಕೀಯ ಲಾಭಕ್ಕೆ ಮುಂದಾಗಿರುವುದನ್ನು ಖಂಡಿಸುತ್ತೇವೆ ಎಂದರು.
ಸೊಸೈಟಿಗಳಲ್ಲಿ ರಾಜಕೀಯ ಲೆಕ್ಕಾಚಾರದ ಅಕ್ರಮಗಳು
ತಾಲೂಕಿನ ಹಲವಾರು ಕೋ ಆಪರೇಟಿವ್ ಸೊಸೈಟಿಗಳಲ್ಲಿ ರಾಜಕೀಯ ಅಕ್ರಮಗಳ ಲೆಕ್ಕಾಚಾರ ನಡೆದು ಕೋಟ್ಯಾಂತರ ರೂಪಾಯಿಗಳು ಲೂಟಿಯಾಗಿದೆ ಕೆಲವೊಂದು ಸೊಸೈಟಿಗಳು ಸೂಪರ್ ಸೀಡ್ ಮಾಡಬೇಕಾದ ಅನಿವಾರ್ಯತೆ ಇದ್ದು ಮುಚ್ಚುವ ಪರಿಸ್ಥಿತಿ ಬಂದಿದೆ ಎಂದರು.
ಯರ್ರಗೋಳ್ ಕುಮಾರಸ್ವಾಮಿ ಯೋಜನೆ
ಕೋಲಾರ ಜಿಲ್ಲೆಯ ಮಹತ್ತರ ನೀರಾವರಿ ಯೋಜನೆಯಾದ ಯರ್ರಗೊಳ್ ಯೋಜನೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದು, ಈ ಯೋಜನೆ ಜಾರಿಗೆ ತಂದ ಬಗ್ಗೆ ಕೆಲವರು ತಕರಾರು ತಗೆದು ಅನಗತ್ಯವಾಗಿ ಕುಮಾರಸ್ವಾಮಿ ವಿರುದ್ದ ಮಾತನಾಡುತ್ತಾರೆ ಅಂತಹವರು ಆತ್ಮಾವಲೋಕ ಮಾಡಿಕೊಳ್ಳಲಿ ಕುಮಾರಸ್ವಾಮಿ ವಿರುದ್ದ ಆರೋಪ ಮಾಡಿದ ಮುಖಂಡರು ತಾವು ತಂದ ನೀರಾವರಿ ಯೋಜನೆಯಲ್ಲಿ ಎಷ್ಟು ಗಂಟುಮಾಡಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದು ಎಂದು ಶಾಸಕ ರಮೇಶ್ ಕುಮಾರ್ ಅವರನ್ನು ಪರೋಕ್ಷವಾಗಿ ಕುಟಕಿದರು.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಯರ್ರಗೊಳ್ ಯೋಜನೆ ರೂಪಿಸಿದ್ದು ಜಿಲ್ಲೆಯ ಜನರ ನೀರಾವರಿ ಬವಣೆ ತೀರಿಸಲು ಎಂದರು.
ದಲಿತರಿಗೆ ನಿಮ್ಮ ಕೊಡುಗೆ ಏನು?
ವೇದಿಕೆ ಸಿಕ್ಕರೆ ಸಾಕು ದಲಿತ ಹಿಂದುಳಿದ ಹಾಗು ಅಲ್ಪಸಂಖ್ಯಾತರನ್ನು ನೆನೆದು ಕಣ್ಣೀರು ಹಾಕುವುದು ಅವರ ಅಭಿವೃದ್ದಿ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ನಿಮ್ಮ ಚಾಳಿ ಎಂದ ಅವರು ಸರ್ಕಾರದ ಅನುದಾನಗಳು ಬಳಕೆಯಾಗದೆ ವಾಪಸ್ಸು ಸರ್ಕಾರಕ್ಕೆ ಹೋಗಿರುವುದು ನಿಮಗೆ ದಲಿತರು ಹಿಂದುಳಿದವರು ಹಾಗು ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆ ಎಂಬುದು ಸಾಬಿತಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಮುಖಂಡರಾದ ಕಿಸಾನ್ ಏಜಾಜ್,ಬಸ್ ಏಜು, ಹಿರಿಯ ಮುಖಂಡ ಬಿ.ವಿ.ರೆಡ್ಡಿ, ಆರ್.ಕೆ.ಎಸ್ ಮಂಜು,ಮಂಜುನಾಥಗೌಡ ಮುಂತಾದವರು ಇದ್ದರು.