ದೇವೇಗೌಡರ ಕುಟುಂಬದ ಋಣದಲ್ಲಿ ಶ್ರೀನಿವಾಸಗೌಡ
ಯಾರನ್ನೊ ಮೆಚ್ಚಿಸಲು ಕುಮಾರಸ್ವಾಮಿ ವಿರುದ್ದ ಟೀಕೆ
ಜೆಡಿಎಸ್ ಚಿನ್ಹೆ ಮೇಲೆ ಗೆದ್ದಿರುವುದು ರಾಜಿನಾಮೆ ನೀಡಿ
ಕುಮಾರಸ್ವಾಮಿ ಆಡಳಿತ ದೇಶಕ್ಕೆ ಮಾದರಿ
ಶ್ರೀನಿವಾಸಪುರ:- ದೇವೇಗೌಡರ ಕುಟುಂಬ ಅಧಿಕಾರದಲ್ಲಿದ್ದಾಗ ಅವರಿಂದ ಸಾಕಷ್ಟು ಅನುಕೂಲಗಳನ್ನು ಪಡೆದುಕೊಂಡು ಇವತ್ತು ಯಾರದೋ ಮಾತು ಕೇಳಿ ಅವರ ವಿರುದ್ದವೇ ಮಾತನಾಡುವಷ್ಟು ನೀಚತನ ತೋರಿಸುತ್ತಿದ್ದಾರೆ ಎಂದು ಕೋಲಾರದ ಶಾಸಕ ಶ್ರೀನಿವಾಸಗೌಡ ವಿರುದ್ದ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಶ್ರೀನಿವಾಸಪುರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಉಂಡ ಮನೆಗೆ ದ್ರೋಹ ಬಗೆಯುವುದು ಅಂದರೆ ಇದೇ ಎಂದ ಅವರು, ಯಾರನ್ನೋ ಮೆಚ್ಚಿಸಲು ಕುಮಾರಸ್ವಾಮಿಯವರನ್ನು ಟಿಕಿಸುತ್ತಿದ್ದಿಯ ಎಂದು ತೀವ್ರ ಧಾಟಿಯಲ್ಲಿ ಶ್ರೀನಿವಾಸಗೌಡ ವಿರುದ್ದ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಆಡಳಿತದ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ ಮಾತಿನ ಮೇಲೆ ಹಿಡಿತ ಇರಲಿ ಅವರ ಅಧಿಕಾರವಧಿಯಲ್ಲಿ ದೇಶಕ್ಕೆ ಮಾದರಿ ಎನ್ನುವಂತೆ ದಾಖಲೆ ಮಟ್ಟದಲ್ಲಿ ರೈತರ ಸಾಲ ಮನ್ನಾ ಯೋಜನೆ ರೂಪಿಸಿ ಯಶಸ್ವಿಯಾಗಿ ಜಾರಿಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅಂತಹ ವ್ಯಕ್ತಿ ವಿರುದ್ದ ಮಾತನಾಡಲು ನಿನಗೆ ಮಾತು ಹೇಗೆ ತಿರುಗುತ್ತದೆ ಎಂದರು
ಕಾರ್ಯಕರ್ತನಿಗೆ ನಿಗದಿಯಾಗಿದ್ದ ಜೆಡಿಎಸ್ ಟಿಕೆಟ್ ಶ್ರೀನಿವಾಸಗೌಡಗೆ ಕೊಡಿಸಿದ್ದು ನಾನು
ಕೋಲಾರ ಕ್ಷೇತ್ರದ ಟಿಕೆಟ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ನಿಗದಿಯಾಗಿತ್ತು ಅವರಿಗೆ ತಪ್ಪಿಸಿ ಈ ದೊಡ್ಡಮನುಷ್ಯನಿಗೆ ನೀಡಲು ಕುಮಾರಸ್ವಾಮಿ ಅವರ ಬಳಿ ಶಿಫಾರಸ್ಸು ಮಾಡಿದವನು ನಾನೆ ನಂತರ ಶಾಸಕನಾಗಿ ಇವತ್ತು ಯಾರದೋ ಮಾತು ಕೇಳಿ ಪಕ್ಷಕ್ಕೆ ದ್ರೋಹ ಮಾಡ್ತಿದ್ದಿಯ ಜೆಡಿಎಸ್ ಚಿನ್ಹೆ ಮೇಲೆ ಗೆದ್ದು ಶಾಸಕನಾಗಿರುವ ನೀನು ಮೊದಲು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಯಾವ ಪಕ್ಷಕ್ಕೆ ಬೇಕಾದರೂ ಹೋಗು ಎಂದು ಅಗ್ರಹಿಸಿದರು.
ಕೆಸಿ ವ್ಯಾಲಿ ಕೆರೆಯಲ್ಲಿ ನೀರು ಕೆರೆಯಲ್ಲಿ ಕುಡಿಯಬೇಡ ಮನೆಗೆ ತಗೆದುಕೊಂಡು ಹೋಗಿ ಎಷ್ಟು ಬೇಕಾದರೂ ಕುಡಿ ಬೆಡ ಅಂದವರು ಯಾರು ಆದರೇ ಕುಮಾರಸ್ವಾಮಿ ಆಡಳಿತದ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಸದಸ್ಯ ಹಿರಿಯ ಮುಖಂಡ ಬಿ.ವಿ.ರೆಡ್ಡಿ, ರಾಜು,ಅನಂದಗೌಡ,ಪೂಲುಶಿವಾರೆಡ್ಡಿ, ಕಾರ್ ಬಾಬು ಮುಂತಾದವರು ಇದ್ದರು.