ಶ್ರೀನಿವಾಸಪುರ:ತಾಲೂಕಿನ ಯುವಜನತೆಯ ಭವಿಷ್ಯತ್ ದೃಷ್ಟಿಯಲ್ಲಿ ಇಟ್ಟುಕೊಂಡು ತಾಲ್ಲೂಕಿನಲ್ಲಿ ಕೈಗಾರಿಕಾ ವಲಯಗಳ ಸ್ಥಾಪನೆಗೆ ಮುಂದಾಗಿದ್ದು ಇದಕ್ಕೆ ಯದರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸಹಕರಿಸಬೇಕೆಂದು ಶಾಸಕ ಜಿ. ಕೆ. ವೆಂಕಟಶಿವಾರೆಡ್ಡಿ ಕರೆ ನೀಡಿದರು.
ಅವರು ತಾಲೂಕಿನ ಯದರೂರು ಗ್ರಾಮದಲ್ಲಿ ಯದರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಜೊತೆ ಸಭೆ ನಡೆಸಿ ಮಾತನಾಡಿ ನಮ್ಮ ತಾಲೂಕಿನ ಯುವಕರು ಉದ್ಯೋಗ ಆರಿಸಿ ಬೆಂಗಳೂರು ಇತರಡೆ ವಲಸೆ ಹೋಗುತ್ತಿರುವುದು ಮುಂದೆ ತಾಲೂಕಿನಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗುತ್ತದೋ ಗೊತ್ತಿಲ್ಲ ಅದನ್ನು ತಡೆದು ಯುವಕರು ತಮ್ಮ ಭವಿಷ್ಯತ್ ಇಲ್ಲೆ ರೂಪಿಸಿಕೊಳ್ಳಲಿ ಎಂಬ ಉದ್ದೇಶ ಇಟ್ಟುಕೊಂಡು ತಾಲೂಕಿನಲ್ಲಿ ಎರಡು ಕಡೆ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಇದಕ್ಕೆ ಕೆಲ ಪಟ್ಟಭದ್ರರು ವಿರೋಧ ವ್ಯಕ್ತಪಡಿಸುವ ಮಾತುಗಳನ್ನು ಆಡುತ್ತಿದ್ದು ಅಂತಹವರ ಮಾತುಗಳನ್ನು ನಂಬಬೇಡಿ ಅವರು ನಿಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು ಮೊನ್ನೆ ರೈತರ ಸಭೆ ಮಾಡಿದವರು ತಮ್ಮ ಜಮೀನುಗಳನ್ನು ಭದ್ರಮಾಡಿಕೊಳ್ಳಲು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇಂತಹ ನಯವಂಚಕರ ಮಾತಿಗೆ ಯಾರು ಮರುಳಾಗಬಾರದೆಂದು ವಿನಂತಿಸಿದರು.
ನಾನು ಯಾವಾಗಲೂ ರೈತನ ಪರ
ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ದೌರ್ಜನ್ಯ ಮಾಡುವುದಿಲ್ಲ ಈ ಭಾಗದ ರೈತರ ಅಭಿಪ್ರಾಯ ಪಡೆದುಕೊಂಡು ಅವರ ಇಚ್ಚೆಯಂತೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗುತ್ತಾರೆ ಹೊರತು ರೈತರನ್ನು ಯಾಮಾರಿಸುವ ಕೆಲಸ ಮಾಡುವುದಿಲ್ಲ ಮೊದಲ ಹಂತದಲ್ಲಿ ಸರ್ಕಾರಿ ಜಮೀನು ಮಾತ್ರ ಬಳಸಿಕೊಳ್ಳುತ್ತೇವೆ ಅವಶ್ಯಕತೆ ಬಿದ್ದಾಗ ರೈತರ ಜಮೀನನ್ನು ಅವರ ಒಪ್ಪಿಗೆ ಮೇರೆಗೆ ಸೂಕ್ತ ಪರಿಹಾರ ಕೊಟ್ಟು ಅವರ ಕುಟುಂಬಕ್ಕೆ ಉದ್ಯೋಗದ ಭರವಸೆ ಕೊಟ್ಟು ಪಡೆಯಲಾಗುತ್ತದೆ ಎಂದರು.ಒಂದು ವೇಳೆ ರೈತರಿಗೆ ತೊಂದರೆಯಾದರೆ ನಾನು ರೈತರ ಪರವಾಗಿ ನಿಲ್ಲುತ್ತೇನೆ ಹಾಗೆ ರೈತಾಪಿ ವಲಯಕ್ಕೆ ಅನಕೂಲ ಆಗುವಂತ ಕಾರ್ಖಾನೆಗಳನ್ನು ಹೆಚ್ಚಾಗಿ ಸ್ಥಾಪಿಸುವಂತ ಕೆಲಸ ಮಾಡುತ್ತೇನೆ ಇದರಲ್ಲೂ ಯಾರು ಅನುಮಾನ ಪಡುವುದು ಬೇಡ ಎಂದರು.
ಊರುಗಳು ಸಾಮಜಿಕವಾಗಿ ಅಭಿವೃದ್ಧಿಯಾಗುತ್ತದೆ
ವೇಮಗಲ್ ನರಸಾಪುರ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಅಲ್ಲಿನ ರೈತರು ಆರ್ಥಿಕವಾಗಿ ಸದೃಡರಾಗಿದ್ದಾರೆ ಊರುಗಳು ಸಹ ಅಭಿವೃದ್ಧಿಯಾಗಿದೆ ಅದೆ ರಿತಿ ಯದರೂರು ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಹೋಬಳಿ ಕೇಂದ್ರವಾದ ಯಲ್ದೂರು,ಹೋಳೂರು ಲಕ್ಷ್ಮೀಸಾಗರಗಳಲ್ಲಿ ಜನವಸತಿ ಟೌನ್ ಶೀಪ್ ಹೆಚ್ಚಾಗುತ್ತದೆ ಇದರಿಂದ ಊರುಗಳು ಸಾಮಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಲಿವೆ ಎಂದರು.
ಸಭೆಯಲ್ಲಿ ಮುಖಂಡ ಶೇಷಾಪುರ ಗೋಪಾಲ್, ಉಪ್ಪುಕುಂಟೆ ಚೆಂಗಪ್ಪ, ಕೊಳತೂರು ನಾರಾಯಣಗೌಡ, ಎಸ್.ಟಿ.ನಾರಾಯಣ ಸ್ವಾಮಿ, ಯಲ್ದೂರು ಮಣಿ, ಗ್ಯಾಸ ರಾಜ, ಯದರೂರು ಪಟೇಲ್ ಪುಟ್ಟುಸ್ವಾಮಿ,ರಮೇಶಗೌಡ ಲಕ್ಷ್ಮಿಸಾಗರ ಮಂಜುನಾಥ, ವಿನೋದ್, ಕೃಷ್ಣಪ್ಪ, ವೆಂಕಟೇಶ್ ಗೌಡ, ಚೌಡೇಗೌಡ ಸೇರಿದಂತೆ ಹಲವರು .ಭಾಗವಹಿಸಿದ್ದರು.