ಶ್ರೀನಿವಾಸಪುರ:ಹಳ್ಳಿಯಾದರೇನು ಚಿಕ್ಕಊರಾದರೇನು ಅಂತಹ ಊರುಗಳಲ್ಲೂ LUXURY ವಸ್ತುಗಳ ಶಾಪಿಂಗ್ ಭರ್ಜರಿ ಆಗಿ ನಡೆಯುತ್ತಿವೆ.
ಇವೆಲ್ಲವೂ ಬೆರಳ ತುದಿಯಲ್ಲಿ ನಡೆಸಬಹುದಾದ ಇ-ಕಾಮರ್ಸ್ busness ಮೂಲಕ ಭಾರತದ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವ ವ್ಯವಸ್ಥೆ ಆವರಿಸಿಕೊಂಡು ವಸ್ತುಗಳನ್ನು ಕೊಳ್ಳುವರ ಸಂಖ್ಯೆ ಹೆಚ್ಚುತ್ತಿದೆ.
ಒಂದು ಕಾಲದಲ್ಲಿ ಐಷಾರಾಮಿ ಶಾಪಿಂಗ್ ಮಾಡಲು ಭಾರತದ ಪ್ರಖ್ಯಾತ ಪ್ರಮುಖ ನಗರಗಳಿಗೆ ಹೋದರೆ ಮಾತ್ರ ಸಾಧ್ಯವಾಗುತಿತ್ತು ಈಗ ಕಾಲ ಬದಲಾಗಿದೆ ಸಣ್ಣ ಗ್ರಾಮಗಳಲ್ಲೂ Online shopping ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಂಗ್ಯಯಲ್ಲಿರುವ ಮೊಬೈಲ್ ನಲ್ಲಿ ಬೆರಳ ತುದಿಯಲ್ಲಿ ಗ್ರಾಹಕರಿಗೆ LUXURY ವಸ್ತುಗಳ ಬೆಲೆ ಗುಣಮಟ್ಟದ ಮಾಹಿತಿ ತಲುಪಿಸುತ್ತಿವೆ.ಖರೀದಿ ಮಾಡಲು ಆಸಕ್ತ ಗ್ರಾಹಕರಿಗೆ ಸಹಾಯ ಮಾಡುತ್ತಿವೆ.
ಮೈ ಟೌನ್ನಲ್ಲಿ ಆನ್ಲೈನ್ ಶಾಪಿಂಗ್ TIL ಕ್ರಿಯೇಟಿವ್ಸ್ ಆನ್ಲೈನ್ ಪ್ಲಾಟ್ಫಾರ್ಮ್ಗಳು ಒದಗಿಸಿದ ಪರಿಣಾಮ ಭಾರತದ ಸಣ್ಣ ನಗರಗಳು ಐಷಾರಾಮಿ ಶಾಪಿಂಗ್ನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸುತ್ತಿವೆ. ಟಾಟಾ ಕ್ಲಿಕ್ ಲಕ್ಸರಿ ವರದಿಯ ಪ್ರಕಾರ ಭಾರತದ ಸಣ್ಣ ಪಟ್ಟಣಗಳಲ್ಲಿ ಉನ್ನತ-ಮಟ್ಟದ ಪಾದರಕ್ಷೆಗಳು, ಕೈಗಡಿಯಾರಗಳು, ಬಟ್ಟೆ ಮತ್ತು ಪರಿಕರಗಳ ಖರೀದಿಯಲ್ಲಿ ದೊಡ್ದ ಮಟ್ಟದ ವ್ಯವಹಾರ ಹೆಚ್ಚಳವನ್ನು ಕಾಣುತ್ತಿವೆ.
LUXURY ವಸ್ತುಗಳನ್ನು ಬಳಸುವಂತ ಸಾಂಪ್ರದಾಯಿಕ ಐಷಾರಾಮಿ ಖರೀದಿದಾರರಿಗಿಂತ ಭಿನ್ನವಾಗಿ, ಹೊಸ ಗ್ರಾಹಕರು LUXURY ವಸ್ತುಗಳ ಕೊಳ್ಳುವ ಮೊದಲು ಹೆಚ್ಚು ಸಂಶೋಧನೆ ನಡೆಸುತ್ತಾರೆ ಡಿಜಿಟಲ್ ಯುಗದಲ್ಲಿ, ಅವರು ಬ್ರ್ಯಾಂಡ್ ಕುರಿತಾಗಿ ಮತ್ತು ಅದಕ್ಕೆ ಸಿಗಬಹುದಾದ ಕೊಡುಗೆಗಳ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮ, ವೆಬ್ಸೈಟ್ಗಳು ಬಳಸಿಕೊಳ್ಳುವ ಗ್ರಾಹಕರು ಉತ್ಪನ್ನದ ಬಳಕೆದಾರರ ವಿಮರ್ಶೆಗಳನ್ನು ಪರಿಗಣಿಸಿ ತಮ್ಮ ಬುದ್ದಿಯನ್ನು ಉಪಯೋಗಿಸಿ ನಂತರ ಖರೀದಿ ಮಾಡುತ್ತಾರೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ,ಇಷ್ಟೆ ಅಲ್ಲದೆ ಗ್ರಾಹಕ ತಾನು ಕೊಳ್ಳುವ ವಸ್ತು ಖರೀದಿಗೆ ಮೊದಲು ಅದನ್ನು ಆರರಿಂದ ಏಳು ಬ್ರ್ಯಾಂಡ್ಗಳೊಂದಿಗೆ ತುಲನೆ(Comparison)ಮಾಡುತ್ತಾನೆ ಎಂಬುದು ಪ್ರಖ್ಯಾತ ಇ-ಕಾಮರ್ಸ್ ಸಂಸ್ಥೆಗಳ ವರದಿ ಹೇಳುತ್ತದೆ.
ಬೆಂಗಳೂರಿನಂತಹ ಮಹಾನಗರಕ್ಕೆ ಹೋಗಿ ಐಷಾರಾಮಿ ಶಾಪಿಂಗ್ ಮಾಡುವಂತ ಸಾಂಪ್ರದಾಯಿಕ ವ್ಯವಸ್ಥೆಗೆ ಗುಡ್ ಬೈ ಹೇಳುವ ದಿನಗಳು ದೂರವಿಲ್ಲ ಎಂಬ ಸಂದೇಶವನ್ನು ಸೂಚಿಸುತ್ತದೆ.