ಶ್ರೀನಿವಾಸಪುರ: ತಾಲೂಕಿನ ಪಾತ ನೆಲವಂಕಿ ಗ್ರಾಮದಲ್ಲಿ ಜಿಲ್ಲಾಡಿತದ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯದಿಂದ ಅಂತರ ಕಾಪಾಡಿಕೊಂಡಂತೆ ಇತ್ತೆ ಇತ್ತು .
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಎನ್ನುತ್ತಾರೆ ಇಲ್ಲಿನೋಡಿದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳೆ ಬಾಗವಹಿಸದೆ ಹೋದರೆ ಕಾರ್ಯಕ್ರಮ ನಡೆಯುವುದಾದರೂ ಯಾರಿಗಾಗಿ ಎನ್ನುತ್ತಾರೆ ಜನತೆ.
ತಾಲ್ಲೂಕಿನ ನೆಲವಂಕಿ ಹೋಬಳಿಯ ಪಾತ ನೆಲವಂಕಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತಹಶೀಲ್ದಾರ್ ಶೀರಿನ್ ತಾಜ್ ಉದ್ಘಾಟಿಸಿದರಾದರೂ ಕಾರ್ಯಕ್ರಮದಲ್ಲಿ ಅಧಿಕಾರಿಗಳೆ ಇರಲಿಲ್ಲ,ದೂರು ದುಮ್ಮಾನಗಳೊಂದಿಗೆ ಬಂದಿದ್ದ ಸಾರ್ವಜನಿಕರು ಯಾರಿಗೆ ಹೇಳಿಕೊಳ್ಳಬೇಕು
ಸಮಾಜಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಬಿ.ಇ.ಒ. ಎ.ಪಿ.ಎಂ.ಸಿ. ಸಾಮಾಜಿಕ ಅರಣ್ಯ ಮತ್ತು ವಲಯ ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಬಿ.ಸಿ.ಎಂ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್, ಸ್ಥಳಿಯ ಸಹಕಾರ ಸಂಘ ,ತಾಲ್ಲೂಕು ಆರೋಗ್ಯಾಧಿಕಾರಿ,ಮೀನಿಗಾರಿಕೆಇಲಾಖೆ, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಸುಳಿವು ಇಲ್ಲದಾಗಿತ್ತು ರಾಜ್ಯ ಬಿಜೆಪಿ ಸರ್ಕಾರದ ಮಹತ್ತರ ಎನ್ನುವಂತ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹಲವಾರು ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.
ಪ್ರಮುಖವಾದ ಇಲಾಖೆ ಅಧಿಕಾರಿಗಳು ಇಲ್ಲ ಎಂದಾದರೆ ಸಾರ್ವಜನಿಕರು ತಮ್ಮ ದೂರನ್ನು ಯಾರಿಗೆ ಸಲ್ಲಿಸಬೇಕು ಎಂಬುದು ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕ ಆರೋಪವಾಗಿತ್ತು.
6 ತಿಂಗಳ ಹಿಂದೆ ತಾಲ್ಲೂಕಿನ ನೆರ್ನಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಧಿಕಾರಿಗಳೆ ಖುದ್ದು ಹಾಜರಾಗಿದ್ದರು ತಾಲ್ಲೂಕು ಮಟ್ಟದ ಬಹುತೇಕ ಇಲಾಖೆ ಅಧಿಕಾರಿಗಳು ಪಾಲ್ಗೋಂಡಿದ್ದರು ಸಾರ್ವಜನಿಕರ ಬಹಳಷ್ಟು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಹ ಸಿಕ್ಕಿತ್ತು ನೆಲವಂಕಿ ಗ್ರಾಮ ವಾಸ್ತವ್ಯ ಅವ್ಯವಸ್ಥೆ ತಾಲೂಕು ಆಡಳಿತಕ್ಕೆ ಕನ್ನಡಿ ಹಿಡಿದಾಗಿತ್ತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ತಂಡ ಗ್ರಾಮದ ದೇವಸ್ಥಾನ, ಅಂಗನವಾಡಿ ಕೇಂದ್ರ ಭೇಟಿ ನೀಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡಿ, ಕಾಟಚಾರ ಎನ್ನುವಂತೆ ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿ, 48 ಅರ್ಜಿಗಳನ್ನು ಸ್ವೀಕರಿಸಿ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಜನತೆಗೆ ಭರವಸೆಯ ಮಾತುಗಳನ್ನಾಡಿದ್ದೆ ದೊಡ್ಡ ಸಾಧನೆಯಂತಿತ್ತು.
3 ನೇ ಶನಿವಾರ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಮಹತ್ವ ಕಳೆದುಕೊಂಡ0ತಾಗಿದೆ. ಕಾರ್ಯಕ್ರಮದಲ್ಲಿ ಜನ ಕುಳಿತುಕೊಳ್ಳಲು ಹಾಕಲಾಗಿದ್ದ ಕುರ್ಚಿಗಳು ಖಾಲಿಯಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಅಲುಮೇಲಮ್ಮ, ಸದಸ್ಯ ಪಾತೂರು ಬಾಬು ರೆಡ್ಡಿ, ಅಭಿವೃದ್ಧಿ ಅಧಿಕಾರಿ ಮೊಹಮ್ಮದ್ಗೌಸ್, ರಘುನಾಥರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ಅಧಿಕಾರಿ ಸುದರ್ಶನ್, ರಮಣರೆಡ್ಡಿ, ಮಮತ, ರಮೇಶ್, ರಘು, ಡಿ.ಟಿ ಹಬೀಬ್, ಗ್ರಾಮ ಲೆಕ್ಕಾಧಿಕಾರಿ ಮೇಗ ನಾಯಕ್ ಮತ್ತು ಮುಂತಾದವರು ಭಾಗವಹಿಸಿದ್ದರು.
