ಶ್ರೀನಿವಾಸಪುರ:-ಲಾಕ್ ಡೌನ್ ಆದರೆ ಎನು ಸಿಗುತ್ತದೋ ಎನು ಸಿಗಲ್ವೋ ಎಂದು ಜನ ಇಂದು ಮಾಂಸದಂಗಡಿಗಳ ಮುಂದೆ ತರಕಾರಿ ಹಾಗು ದಿನಸಿ ಅಂಗಡಿಗಳ ಮುಂದೆ ಕೊರೋನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಜಮಾವಣೆಯಾಗಿ ಬರ್ಜರಿ ವ್ಯಾಪಾರ ಮಾಡಿದರು.
ಪೋಲಿಸರು ಇಲ್ಲ ತಾಲೂಕು ಅಧಿಕಾರಿಗಳು ಪತ್ತೇ ಇಲ್ಲ.
ಪಟ್ಟಣದಲ್ಲಿ ಭಾನುವಾರದ ದಿನದಂದು ಜನ ಮರಳೊ ಜಾತ್ರೆ ಮರಳೊ ಎಂಬಂತೆ ಜನತೆ ಬರುತ್ತಾರೆ ಎಂಬ ಮಾಹಿತಿ ಇದ್ದರು ಇದನ್ನು ತಡೆಯಲು ಪೋಲಿಸರೇ ಪತ್ತೇ ಇಲ್ಲ. ಎಂ.ಜಿ.ರಸ್ತೆ, ಹಳೇ ಆಸ್ಪತ್ರೆ ಮಾರುಕಟ್ಟೆ, ಮಾಂಸದಂಗಡಿಗಳು ಇರುವ ಆಜಾದ್ ರಸ್ತೆ, ಕಟ್ಟೆಕೆಳಗಿನ ಪಾಳ್ಯ,ಪೋಸ್ಟಾಪಿಸ್ ರಸ್ತೆಯಲ್ಲಿ ಜನವೊ ಜನ ಒಬ್ಬರ ಮೇಲೊಬ್ಬರು ಬಿದ್ದು ಸರಕು ಸರಂಜಾಮುಗಳನ್ನು ಕೊಂಡು ಕೊಳ್ಳುತ್ತಿದ್ದರು.ಜನತಾ ಕರ್ಫೂನೂ ಇಲ್ಲ ಲಾಕ್ ಡೌನ್ ಇಲ್ಲವೇನು ಎಂದು ಜನ ಮುಗಿಬಿದ್ದು ಸರಕು ಕೊಳ್ಳುತ್ತಿದ್ದರು.
ಕೊರೋನಾ ಪೀಡಿತರ ಸಂಖ್ಯೆ ಏರುತ್ತಿದ್ದರು ಇತ್ತ ಜನರಲ್ಲಿ ಅದರ ಅರಿವೇ ಇಲ್ಲ ಎಂಬಂತೆ ಸರಕು ಕೊಳ್ಳಲು ಜಾತ್ರೆ ಸೇರಿದಂತೆ ಜನ ಜಮಾವಣೆ ಯಾಗಿದ್ದರು. ಹಿಂದೆಲ್ಲ ಜನರು ಒಂದೇಡೆ ಸೇರಬಾರದು ಎಂದು ಮಾರುಕಟ್ಟೆ ಸೇರಿದಂತೆ ಇತರೆ ವ್ಯಾಪಾರ ವಹಿವಾಟನ್ನು ಪಟ್ಟಣದ ದಟ್ಟಣಿಯಿಂದ ದೂರ ಇರಿಸಿ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರು ಆದರೆ ಈ ಬಾರಿ ಅಧಿಕಾರಿಗಳು ಈ ಬಗ್ಗೆ ಆಲೋಚಿಸದೆ ಇರುವುದು ದುರಂತವೆ ಸರಿ.
ರೋಣೂರಿನಲ್ಲಿ ಜನತಾಕರ್ಫೂ ಜಾರಿಯಾಗಿಲ್ಲ.
ಪಟ್ಟಣಕ್ಕೆ ತೀರಾ ಹತ್ತಿರ ಇರುವಂತ ಹೋಬಳಿ ಮುಖ್ಯಕೇಂದ್ರವಾಗಿರುವ ರೋಣೂರಿನಲ್ಲಿ ಜನತಾಕರ್ಫೂ ಜಾರಿಯಾಗೇ ಇಲ್ಲವಂತೆ.ಇಲ್ಲಿ ಯಾವುದೇ ನಿರ್ಭಂದ ಇಲ್ಲದೆ ಬೆಳಗಿನಿಂದ ಸಂಜೆಯವರಿಗೂ ವ್ಯಾಪಾರ ಹಾಗು ಜನಸಂಚಾರ ಎಂದಿನಂತೆ ಇರುತ್ತದೆ ಎನ್ನುತ್ತಾರೆ.ರೋಣುರು ಪಂಚಾಯಿತಿ ಮುಖ್ಯ ಕೇಂದ್ರ ಸೇರಿ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿತರು ಇರುವುರಾದರೂ ಇಲ್ಲಿ ಜನತಾಕರ್ಫೂ ಜಾರಿಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವ್ಯವಸ್ಥೆ ಹಿಡಿದ ಕನ್ನಡಿಯಾಗಿದೆ.
ಪಂಚಾಯಿತಿ ಅಧಿಕಾರಿ ಸ್ಪಷ್ಟನೆ
ಕೊರೋನಾ ತಡೆಗಟ್ಟುವ ಸಂಬಂದ ಇಲ್ಲಿನ ವ್ಯಾಪಾರಸ್ಥರಿಗೆ,ಜನತೆಗೆ ನಿರ್ಭಂದ ಹೇರಿದ್ದರು,ಕೋವಿಡ್ ನಿಭಂದನೆಗಳಿಗೆ ಸ್ಥಳಿಯರು ಸ್ಪಂದಿಸುತ್ತಿಲ್ಲ, ಸಹಕಾರ ನೀಡುತ್ತಿಲ್ಲ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಂಪತ್ ಅಸಾಹಿತಕತೆ ವ್ಯಕ್ತಪಡಿಸಿರುತ್ತಾರೆ.ಇಲ್ಲಿನ ಪರಿಸ್ಥಿತಿ ಕುರಿತಾಗಿ ಈಗಾಗಲೆ ಪೋಲಿಸರಿಗೆ ಮೌಕಿಕವಾಗಿ ತಿಳಿಸಲಾಗಿದೆ ಅವರಿಂದಲೂ ಸಹಕಾರ ದೊರೆತಿಲ್ಲ ಎಂದಿರುತ್ತಾರೆ.
- ಜನರ ಆರೋಗ್ಯಕ್ಕಾಗಿ vcsnewz.com ಸಮಾಜಿಕ ಕಳಕಳಿ
- ಮಾಸ್ಕ್ ದರಿಸಿ ಸಾಮಾಜಿಕ ಅಂತರ ಕಾಪಾಡಿ
- ಆದಷ್ಟು ಜನಸಂದಣಿ ಪ್ರದೇಶ,ಸಭೆ,ಸಮಾರಂಭಗಳಿಂದ ದೂರ ಉಳಿಯಿರಿ
- ಅವಶ್ಯಕತೆ ಇದ್ದರಷ್ಟೆ ಮಾತ್ರ ಜನಸಂದಣಿ ಪ್ರದೇಶಕ್ಕೆ ಹೋಗಿ.
- ಮನೆಯಲ್ಲೆ ಇದ್ದು ಆರೋಗ್ಯ ಕಾಪಾಡಿಕೊಳ್ಳಿ.