ಶ್ರೀನಿವಾಸಪುರ: ತಾಲೂಕಿನ ಖ್ಯಾತ ವಿದ್ಯಾಸಂಸ್ಥೆ ಪಿ.ಯು.ಸಿ ಪರಿಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ ದ್ವಿತೀಯ ಪಿ.ಯು.ಸಿ ಪರಿಕ್ಷೆಯಲ್ಲಿ ಶೇಕಡಾ 95 ರಷ್ಟು ಫಲಿತಾಂಶ ಬಂದಿದೆ ಎಂದು ವಿಷನ್ ಇಂಡಿಯಾ ಶಾಲೆ ಮುಖ್ಯಸ್ಥ ಖ್ಯಾತ ವೈದ್ಯ ಡಾ: ಕೆ.ಎನ್. ವೇಣುಗೋಪಾಲ್ ತಿಳಿಸಿದರು.ಅವರು ತಾಲ್ಲೂಕಿನ ರೋಣೂರು ಕ್ರಾಸ್ನಲ್ಲಿರುವ ವಿ.ಐ.ಪಿ. ಪಿ.ಯು.ಕಾಲೇಜಿನ ಆವರಣದಲ್ಲಿ ಪಿ.ಯು.ಸಿ ಪರಿಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 68 ವಿದ್ಯಾರ್ಥಿಗಳು, ಮತ್ತು ವಾಣಿಜ್ಯ ವಿಭಾಗದಲ್ಲಿ 43 ವಿದ್ಯಾರ್ಥಿಗಳು ಸೇರಿ ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆ ತಗೆದುಕೊಂಡಿದ್ದರು.ಅವರಲ್ಲಿ ವಿಜ್ಞಾನ ವಿಷಯದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 68 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ,ಅದರಲ್ಲಿ ಸಫಿಯಾ ಕೌಸರ್ 600 ಅಂಕಗಳಿಗೆ 578 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 43 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ಶ್ರುತಿ .ಆರ್. 600 ಅಂಕಗಳಿಗೆ 567 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಇದರಿಂದ ಕಾಲೇಜಿನ ಫಲಿತಾಂಶ ಶೇಕಡಾ 95 ಪದೆದಿದೆ ಇದು ಹೆಮ್ಮೆಯ ವಿಚಾರ ಎಂದರು.
ಸೆವೆನ್ ಹಿಲ್ಸ್ ಅಕಾಡೆಮಿಯೊಂದಿಗೆ ಒಡಂಬಡಿಕೆ
ಮುಂದಿನ ದಿನಗಳಲ್ಲಿ ವಿಐಪಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಸಂಯೋಜಿತ NEET ಮತ್ತು JEE ತರಬೇತಿ ಕಾರ್ಯಕ್ರಮಗಳನ್ನು ನೀಡಲು ಬದ್ಧರಾಗಿದ್ದೇವೆ ಇಂಟಿಗ್ರೇಟೆಡ್ ಕೋಚಿಂಗ್ ಅನ್ನು ನೀಡಲು ಅಗತ್ಯ ವಿಷಯ ತಜ್ಞರೊಂದಿಗೆ ಪ್ರೀಮಿಯಂ ಗುಣಮಟ್ಟದ ತರಬೇತಿಯನ್ನು ನೀಡಲು ಸೆವೆನ್ ಹಿಲ್ಸ್ ಅಕಾಡೆಮಿಯೊಂದಿಗೆ ವಿಐಪಿ ಕಾಲೇಜು ಒಡಂಬಡಿಕೆ ಮಾಡಿಕೊಂಡಿದೆ ಎಂದರು.


ಪಟ್ಟಣದಲ್ಲಿ ವಿಐಪಿ ಕಾಲೇಜು ಶಾಖೆ.
ಪವನ್ ಆಸ್ಪತ್ರೆ ಹಿಂಬಾಗದಲ್ಲಿ ವಿಐಪಿ ಕಾಲೇಜಿನ ಮತ್ತೊಂದು ಶಾಖೆ ಅರಂಭಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಜ್ ಕುಮಾರ್,ಗಗನ್ ಕುಮಾರ್,ಪ್ರೇಮ್ ಕುಮಾರ್, ನವೀನ್ ಕುಮಾರ್, ಜಯಂತ್ ಕುಮಾರ್, ಶ್ರೀನಿವಾಸ್, ಕೆ.ಪಿ. ರವಿ, ವೇಣುಗೋಪಾಲ್ ಕೆ.ಎಮ್,ಹಾಜರಿದ್ದರು.