ನ್ಯೂಜ್ ಡೆಸ್ಕ್:ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮೇರುನಟ ಕನ್ನಡಿಗರು ಮರೆಯದಮಾಣಿಕ್ಯ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನುಮದಿನ ಸೆಪ್ಟೆಂಬರ್ 18 ರಂದು, ಅವರ ಜನುಮದಿನವನ್ನು ವಿನೂತನವಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಡೈಲಾಗ್ಸ್, ಖದರ್ ಲುಕ್, ಕೈ ಎತ್ತಿ ಖಡ್ಗ ತಿರುಗುಸುತ್ತಿದ್ದ ಶೈಲಿ, ಅವರ ಡ್ಯಾನ್ಸ್ ಇಂದಿಗೂ ಕರುನಾಡಿನ ಚಿತ್ರರಸಿಕರು ಇನ್ನೂ ಮರೆತಿಲ್ಲ ಕಣ್ಣ ಮುಂದೆ ಹಾಗೆಯೇ ಇದೆ.
ಡಾ.ವಿಷ್ಣುವರ್ಧನ್ ಅವರು ಸಿನಿಮಾರಂಗಕ್ಕೆ ಬಂದು ಇದೇ ವರ್ಷದ ಡಿಸೆಂಬರ್ 29 ರಂದು 50 ವರ್ಷಗಳಾಗಲಿದೆ. ಅದೇ ರೀತಿ ಇದೇ ತಿಂಗಳ 18 ರಂದು ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವಿದೆ.72 ವರ್ಷದ ಜಯಂತೋತ್ಸವ ಆಚರಿಸುವ ನಿಟ್ಟಿನಲ್ಲಿ ಈ ಎರಡು ಸಂಭ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿರುವ ಡಾ.ವಿಷ್ಣು ಪುಣ್ಯಭೂಮಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಪ್ರಚಾರ ನಡೆದಿದೆ.
ಭಾರತೀಯ ಚಲನ ಚಿತ್ರರಂಗದಲ್ಲಿ ಯಾವ ಕಲಾವಿದನಿಗೂ ಇಷ್ಟು ವಿಭಿನ್ನವಾಗಿ ಹಾಗೆ ಒಂದೇ ಕಡೆ ಇಷ್ಟು ಸಂಖ್ಯೆಯ ಕಟೌಟ್ ಗಳು ಸ್ಥಾಪಿಸಿಲ್ಲ ಪ್ರಪಂಚದಲ್ಲಿಯೇ ಬಹುಶಃ ಇದು ಮೊದಲ ಬಾರಿಗೆ ಆಗುತ್ತಿರುವುದರಿಂದ ವಿಶ್ವದಾಖಲೆ ಆಗಲಿದೆ ಎಂಬ ವಿಶ್ವಾಸ ವಿಷ್ಣುದಾದನ ಅಭಿಮಾನಿಗಳದು.
ವಿಷ್ಣುದಾದ ನಟಸಿ ಯಶಸ್ಸು ಕಂಡಿರುವ 50 ಚಿತ್ರಗಳ 40 ಅಡಿ ಎತ್ತರದ ಬೃಹತ್ ಕಟೌಟ್ ಗಳನ್ನು ಅಭಿಮಾನ್ ಸ್ಟುಡಿಯೋದಲ್ಲಿ ತಲೆ ಎತ್ತಲಿದ್ದು ಈ 50 ಕಟೌಟ್ ಗಳನ್ನು ಯಾರೋ ಒಬ್ಬರು ಸ್ಪಾನ್ಸರ್ ಮಾಡಿರುವುದಲ್ಲ ಒಂದೊಂದು ಕಟೌಟ್ ಅನ್ನು ರಾಜ್ಯದ ವಿವಿಧ ಭಾಗದಲ್ಲಿರುವ ಒಬ್ಬೊಬ್ಬ ಸಾಮಾನ್ಯ ವಿಷ್ಣುದಾದ ಅಭಿಮಾನಿಗಳು ಸ್ವಯಂ ಪ್ರೇರಣೆಯ ಸಹಕಾರದಿಂದ ನಿರ್ಮಿಸಲಾಗುತ್ತಿದೆ ಎನ್ನುವುದು ವಿಶೇಷ.
ಈಗಾಗಲೆ 50 ಸಂಖ್ಯೆಯ ಕಟೌಟ್ ಗಳ ಸ್ಥಾಪನೆ ಎನ್ನಲಾಗಿದೆ ಆದರೆ ಅಭಿಮಾನಿಗಳ ಅಭಿಮಾನ ಮೀರುತ್ತಿರುವುದರಿಂದ ಅದರ ಸಂಖ್ಯೆ ಇನ್ನು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಡಾ.ವಿಷ್ಣುವರ್ಧನ್ ಅವರ ಮೊದಲಬಾರಿಗೆ ನಾಯಕನಟನಾಗಿ ನಟಿಸಿದ ನಾಗರಹಾವು ಚಿತ್ರದ ಕಟೌಟ್ ನಿಂದ ಆರಂಭವಾಗುವ ಸಾಲಿನಲ್ಲಿ ಖೈದಿ,ಯಜಮಾನ,ಸಾಹಸಸಿಂಹ,ಸಿಂಹಾದ್ರಿಯ ಸಿಂಹ, ಆಪ್ತರಕ್ಷಕ, ವಿಷ್ಣುಸೇನೆ,ಬಂಧನ, ಹೃದಯವಂತ, ಕದಂಬ, ಸೂರಪ್ಪ, ಜಯಸಿಂಹ,ವೀರಪ್ಪನಾಯ್ಕ, ಕರ್ಣ,ದೇವ ಸೇರಿದಂತೆ ಹಲವಾರು ಸಿನಿಮಾಗಳ ಕಟೌಟ್ ಗಳ ಕಾಣಸಿಗುತ್ತದೆ.