ಶ್ರೀನಿವಾಸಪುರ:ನಕಾಸೆಯಲ್ಲಿನ ದಾರಿಯನ್ನು ಒತ್ತುವರಿಯಾದ ಪರಿಣಾಮ ಕೆಳಗಿನ ತೋಟಗಳಿಗೆ ಹೋಗಲು ದಾರಿಯಿಲ್ಲದ ಪರಿಸ್ಥಿತಿಯಲ್ಲಿ ಮಾವಿನ ತೋಟಗಳ ಮಾಲಿಕರು ಸುಮಾರು ವರ್ಷಗಳಿಂದ ಪರದಾಡುತ್ತಿದ್ದರು ಈ ಬಗ್ಗೆ ದಾರಿಕಾಣದೆ ಮಾವಿನ ತೋಟಗಳ ಮಾಲಿಕರು ತಾಲೂಕು ಆಫಿಸ್ ಅಲೆದಾಡಿ ಅಲವತ್ತು ಕೊಂಡಿದ್ದರು ಸ್ಪಂದನೆ ಇರಲಿಲ್ಲ ಸರ್ವೆ ಇಲಾಖೆ ನಕಾಸೆಯಲ್ಲಿ ದಾರಿ ದಾಖಲೆ ಇದ್ದರೂ ಸಹಾ ಅಕ್ಕ ಪಕ್ಕದ ಜಮೀನು ಮಾಲೀಕರು ಬಂಡಿ ದಾರಿಯನ್ನು ಒತ್ತುವರಿ ಮಾಡಿಕೊಂಡು ಓಬೇನಹಳ್ಳಿ ಹಾಗೂ ಹೆಬ್ಬಟ ಗ್ರಾಮದ ಮಾವಿನ ತೋಟಗಳ ರೈತರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಬಂಡಿದಾರಿಯನ್ನು ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕೋರಿದ್ದರು.
ಈ ಹಿನ್ನಲೆಯಲ್ಲಿ ಸರ್ವೇ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ಓಬೇನಹಳ್ಳಿ ಗ್ರಾಮದಿಂದ ಗುಂಡಮನತ್ತ ಗ್ರಾಮದ ತನಕ ಮಾವಿನ ತೋಟಗಳಲ್ಲಿ ಬಂಡಿರಸ್ತೆ ಗುರಿತಿಸಿ ಒತ್ತುವರಿ ಮಾಡಿಕೊಂಡಿದ್ದವರ ಒಮ್ಮತ ಪಡೆದು ಯಾರಿಗೂ ತೊಂದರೆಯಾಗದಂತೆ ರಸ್ತೆ ನಿರ್ಮಾಣಕ್ಕೆ ಅನವು ಮಾಡಲಾಗಿದೆ.
ರೈತ ರಮೇಶ್ ಮಾತನಾಡಿ ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು ಅಂದಾಜು 40-50 ಸರ್ವೆ ನಂಬರುಗಳ ಸುಮಾರು 500 ಎಕರೆ ತೋಟಗಳ ಜಮೀನಿಗೆ ಹೋಗಲು ತುಂಬಾ ಸಮಸ್ಯೆಯಾಗುತ್ತಿತ್ತು ಈಗ ರಸ್ತೆ ವ್ಯವಸ್ಥೆ ಮಾಡಿಕೊಟ್ಟ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಸದಸ್ಯ ಆನಂದ್ ಕುಮಾರ್ ಅವರಿಗೆ ಧನ್ಯವಾದಗಳು ಎಂದಿರುತ್ತಾರೆ.
ರಸ್ತೆ ಮಾಡಿದ ಸದಸ್ಯ ಅನಂದ್
ಹೆಬ್ಬಟ ಗ್ರಾಮದ ಪಂಚಾಯತಿ ಸದಸ್ಯ ಆನಂದ್ ಕುಮಾರ್ ತೆರವು ಮಾಡಿರುವ ಬಂಡಿದಾರಿಯಲ್ಲಿ ರೈತರ ಮನವಿಯಂತೆ ಪಂಚಾಯಿತಿ ವತಿಯಿಂದ ಮೀಸಗಾನಹಳ್ಳಿಯವರಿಗೆ ಸುಮಾರು 3 ಕೀ.ಮಿ ರಸ್ತೆ ಕಾಮಗಾರಿ ಮಾಡಿಸಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ಸರ್ವೇ ಮಾಡಿಸಿ ದಾರಿಯನ್ನು ಗುರುತು ಮಾಡಲಾಗಿದ್ದು,ರೈತರು ಇತರರಿಗೆ ತೊಂದರೆ ಮಾಡದೆ ಸಹಕಾರ ನೀಡುವ ಮೂಲಕ ಔದಾರ್ಯ ಮೆರೆಯುವಂತೆ ತಿಳಿಸಿದರು.