ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ರೈತ ಸಂಘ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿಪಡಿಸಿದ ಸಂದರ್ಭದಲ್ಲಿ ನಡೆದಂತ ತಳ್ಳಾಟ ನೂಕಾಟ ಸಮಯದಲ್ಲಿ ಆದ ಘಟನೆ ಕುರಿತಾಗಿ ತಹಶೀಲ್ದಾರ್ ಸುಧೀಂದ್ರ ಪ್ರತಿಕ್ರಿಯೆ ನೀಡಿದ್ದು ಕಚೇರಿ ಕೆಲಸದ ವೇಳೆ ಕೆಲವರು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತ ಕಚೇರಿಗೆ ಬರುವಂತವರಿಗೆ ಅಡ್ಡಿಪಡಿಸುತ್ತ ಸ್ಥಳದಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಸುತ್ತಿದ್ದರು ಹಾಗೆ ಪ್ರತಿಭಟನೆ ಈ ಜಾಗ ಸೂಕ್ತ ಅಲ್ಲ ಜೊತೆಗೆ ಪ್ರತಿಭಟನೆ ಮಾಡುವವರು ಯಾವುದೆ ಅನುಮತಿ ಪಡೆದಿಲ್ಲ ಅವರಿಂದ ಇಲ್ಲಿ ಎರಡು ಗುಂಪುಗಳ ನಡುವೆ ತಳ್ಳಾಟ ನೂಕಾಟ ನಡೆಯಿತು ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಬಗ್ಗೆ ಬೇಸರ ವ್ಯಕ್ತಪಡಿಸಿ ವಿರೋಧಿಸಿದೆ ಇದರಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಸ್ಪಷ್ಟಿಕರಿಸಿದ್ದಾರೆ.
ರೈತರಿಗೊಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯಾನ ಎಂದು ಸಾರ್ವಜನಿಕರು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆಗೆ ಕುಳಿತ ರೈತರನ್ನು ಬೆದರಿಸಿರುವ ತಹಶೀಲ್ದಾರ್ ಸುಧೀಂದ್ರ ಪ್ರತಿಭಟನೆ ಸ್ಥಳದಲ್ಲಿ ಸಮಸ್ಯೆಯನ್ನು ಅರಿತು ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಬೇಕಿದ್ದ ತಹಶಿಲ್ದಾರರೇ ಕಾನೂನು ಕೈಗೆ ತೆಗೆದುಕೊಂಡು ರೈತ ಮುಖಂಡರ ಬಟ್ಟೆ ಅಂಬೇಡ್ಕರ ಫೋಟೋ ಬಿಸಾಡಿ ವರ್ತಿಸಿದ ನೀವು ಎಲ್ಲಿ ಕಾನೂನಿನ ಉರುಳಿಗೆ ಸಿಲುಕುತ್ತೇನೋ ಎಂಬ ಭಯದಿಂದ ಕ್ಷಮೆ ಯಾಚನೆ ಮಾತನಾಡುತ್ತ ಇದ್ಎಂದೀರಿ. ನಿಮ್ಮ ಹಾರಾಟ ಯಾರನ್ನು ಮೆಚ್ಚಿಸಲಿಕ್ಕೆ ಹೋರಾಟಗಾರ ರೈತರು ಇಟ್ಟುಕೊಂಡಿದ್ದ ಪೋಟೋಗಳನ್ನು ಬಿಸಾಡದ್ರು ಎಂದು ತಹಶಿಲ್ದಾರ್ ವರ್ತನೆ ಬಗ್ಗೆ ಆಕ್ರೋಶ ಹೊರ ಹಾಕಿರುತ್ತಾರೆ.