ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಸಪ್ತಮಾತ್ರೀಕೆಯರಲ್ಲಿ ಒಬ್ಬರಾದ ವಾರಾಹಿ ಮಾತೆ ದೀಕ್ಷೆ ತೊಟ್ಟಿದ್ದರು ವಿಜಯವಾಡದ ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಕೇಂದ್ರ ಕಚೇರಿಯಲ್ಲಿ ವಾರಾಹಿ ಮಾತೆಯ ಪೂಜೆಯೊಂದಿಗೆ ಜುನ್ 25 ರಂದು ಅವರು ವೇದ ಪಂಡಿತರ ಮಂತ್ರಘೋಷಗಳ ನಡುವೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹನ್ನೊಂದು ದಿನಗಳ ಕಾಲ ವಾರಾಹಿ ದೀಕ್ಷೆ ತೊಟ್ಟಿದ್ದು 11 ದಿನಗಳ ಇದ್ದರು ದೀಕ್ಷಾ ಸಮಯದಲ್ಲಿ ಪವನ್ ಹಾಲು, ಹಣ್ಣುಗಳು ಮತ್ತು ದ್ರವ ಆಹಾರವನ್ನು ಮಾತ್ರ ಸೇವಿಸುತ್ತ ವ್ರತಾಚರಣೆ ಮಾಡಿದ್ದಾಗಿ ಹೇಳಲಾಗಿದ್ದು ಪವನ್ ಕಲ್ಯಾಣ್ ಅವರ ದೀಕ್ಷೆ ತೊಟ್ಟು ಪೂಜೆ ಸಲ್ಲಿಸುತ್ತಿರುವ ಫೋಟೋಗಳನ್ನು ಜನಸೇನಾ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದು, ಫೋಟೋಗಳು ಈಗ ಎಲ್ಲಡೆ ವೈರಲ್ ಆಗುತ್ತಿವೆ.
ವಾರಾಹಿ ವಾಹನದಲ್ಲಿಯೇ ಚುನಾವಣಾ ಕ್ಯಾಂಪೇನ್
ಚುನಾವಣೆ ಕ್ಯಾಂಪೇನ್ ಸಂದರ್ಭದಲ್ಲೂ ಮೀಲ್ಟ್ರಿ ವಾಹನ ಹೊಲುವಂತ ಅದೆ ಬಣ್ಣದ ಬಾರಿ ಗಾತ್ರದ ಟ್ರಕ್ ತರಿಸಿದ್ದ ಪವನ್ ಆ ವಾಹನಕ್ಕೂ ವಾರಹಿ ಎಂದು ನಾಮಕರಣ ಮಾಡಿದ್ದರು.ಪವನ್ ತೆಲಂಗಾಣ ರಾಜ್ಯದಲ್ಲಿರುವ ಕೊಂಡಗಟ್ಟು ಆಂಜನೇಯ ಸ್ವಾಮಿ ದೇವರ ಪರಮ ಭಕ್ತ ಸದಕಾಲ ಅಲ್ಲಿಗೆ ಬೇಟಿ ನೀಡುವುದು ವಾಡಿಕೆಯಾಗಿ ಇಟ್ಟುಕೊಂಡಿದ್ದಾರೆ.
ಏನಿದು ವಾರಾಹಿ ದೀಕ್ಷೆ ಮಹಿಮೆ
ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲಿ ಉನ್ನತಸ್ಥಾನದಲ್ಲಿದ್ದಾರೆ ಪ್ರಧಾನಿ ಮೆಚ್ಚುವಷ್ಟು ಪ್ರಭಲ ರಾಜಕಾರಣಿಯಾಗಿದ್ದಾರೆ ಅವರ ರಾಜಕೀಯ ಜೀವನ ಹಾಗು ಅವರು ತೊಟ್ಟಿದ್ದ ವಾರಾಹಿ ದೀಕ್ಷೆ ಕುರಿತಾಗಿ ಕರ್ನಾಟಕದ ಶಿಲಾಶಾಸನಗಳ ಕುರಿತು ಅಧ್ಯಯನ ಶೀಲರಾಗಿರುವ ಸುದರ್ಶನ್ ರೆಡ್ಡಿ ಡಿ.ಎನ್. ಹೇಳುವಂತೆ ಆಂಧ್ರ ಪ್ರದೇಶದ ರಾಜಕೀಯ ಸಂಘರ್ಷದಲ್ಲಿ ಉದಯಿಸಿದ ರಾಜಕೀಯ ದೃವತಾರೆ ಪವನ್ ಕಲ್ಯಾಣ್ ತಾನು ಏರಿದ ಎತ್ತರಕ್ಕೆ ಆತನ ಅಪಾರ ಪರಿಶ್ರಮ ಕಾರಣವಾದರೂ ಆತನಿಗೆ ರಾಜಕೀಯದಲ್ಲಿ ಮನೋಬಲ ಹಾಗು ದೈವಬಲ ಸಿದ್ಧಿಸಿದ್ದು ಸಪ್ತಮಾತೃಕೆಯರಲ್ಲಿ ಒಬ್ಬಳಾದ ವಾರಾಹಿಯ ವ್ರತ ಆಚರಣೆಯಿಂದ ಎಂದು ವಿಶ್ಲೇಷಿಸಿದ್ದಾರೆ.
ಬಾದಾಮಿ ಚಾಲುಕ್ಯರು ತಮ್ಮ ರಾಜ್ಯೊದ್ಧಾರದ ಏಳಿಗೆಯಲ್ಲಿ ಸಪ್ತಮಾತೃಕೆಯರ ಕೃಪೆ ಕಾರಣ ಎಂದು ಕೋಲಾರ ಜಿಲ್ಲೆಯ ವಕ್ಕಲೇರಿಯ ತಾಮ್ರಶಾಸನದಲ್ಲಿ ಉಲ್ಲೇಕಿಸಿದ್ದಾರೆ, ಅಂತಹ ಮಹತ್ವ ಉಳ್ಳ ಸಪ್ತಮಾತೃಕೆಯರನ್ನು ಈಗಲೂ ನಮ್ಮ ಕೋಲಾರ ಸೀಮೆಯ ಜನ, ವಿಶೇಷವಾಗಿ ಮಹಿಳೆಯರು ‘ಏಳು ಮಂದಿ ಅಕ್ಕಯ್ಯಮ್ಮನವರು’ಆಡುಭಾಷೆಯಲ್ಲಿ ಅಕ್ಕಗಾರ್ಲು ಹೆಸರಿನಲ್ಲಿ ಪೂಜಿಸಿ ನೆಮ್ಮದಿ ಪಡೆದುಕೊಳ್ಳುತ್ತಾರೆ.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬಹುತೇಕ ಶ್ರೀಚೌಡೇಶ್ವರಿ ದೇವಾಲಯಗಳಲ್ಲಿ ಸಪ್ತಮಾತೃಕೇಯರ ವಿಗ್ರಹಗಳ ಪ್ರತಿಷ್ಠಾಪನೆ ಆಗಿದೆ ವಿಶೇಷವಾಗಿ ಕೋಲಾರ ನಗರದ ಕೋಲಾರಮ್ಮನ ಗುಡಿಯಲ್ಲೂ ಇದೆ.
ಊರೂರಿಗೂ ಇರುವ ಮುನೇಶ್ವರ (ವೀಣಾಧರ ಶಿವ?)ಗುಡಿಗಳ ಮುಂದೆ ಸಪ್ತಮಾತೃಕೆಯರ ಗುಡಿ ಇರುವುದು ಸಾಮನ್ಯ, ನಮ್ಮ ಜನಪದರು ಮುನೇಶ್ವರನನ್ನು ಸಪ್ತಮಾತೃಕೆಯರ ತಮ್ಮನೆಂದು ನಂಬಿದ್ದಾರೆ.