ನ್ಯೂಜ್ ಡೆಸ್ಕ್:ಹಣಕಾಸು ಮಂತ್ರಿಗಳ ಬಹುಪಾಲು ಬಜೆಟ್ ಭಾಷಣಗಳು,ದೇಶದ ಭೌಗೋಳಿಕ ರಾಜಕೀಯ ವಿಷಯಗಳ ಕುರಿತಂತೆ ಉದ್ದುದ್ದ ಭಾಷಣ ಇರುತ್ತದೆ ಆದರೆ ಈ ವರ್ಷದ ಮಧ್ಯಂತರ ಬಜೆಟ್ ಭಾಷಣದಲ್ಲಿ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿ ಭಾರತ ಕೇಂದ್ರವಾಗಿ ಜಾಗತಿಕಮಟ್ಟದ ಆರ್ಥಿಕ ವ್ಯವಸ್ಥೆಯಲ್ಲಿ ಆಗಬಹುದಾದ ಬದಲಾವಣೆಯ ಹೊಸ ಚಿತ್ರಣದ ಕುರಿತಾಗಿ ಮಂಡಿಸಿದ್ದಾರೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಕುರಿತಂತೆ ನೂತನ ಆರ್ಥಿಕ ನೀತಿ ನಿಯಮಗಳನ್ನು ಪ್ರಸ್ತುತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವಾಗ ‘ಐಎಂಇಸಿ’ ಯೋಜನೆಯನ್ನು ಪ್ರಸ್ತಾಪಿಸಿದರು. ಈ ಯೋಜನೆಯು ಭಾರತದಲ್ಲಿ ಮುಂದಿನ ನೂರುವರ್ಷಗಳಲ್ಲಿ ಜಾಗತಿಕ ವ್ಯಾಪಾರಕ್ಕೆ ಆಧಾರವಾಗಲಿದೆ ಮತ್ತು ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.ಭಾರತದ ನೆಲದಲ್ಲಿ ಈ ಯೋಜನೆಯನ್ನು ಪ್ರಾರಂಭಿಸುವುದು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ.
‘ಐಎಂಇಸಿ’IMEC ಯೋಜನೆ ಏನು?
ಪ್ರಪಂಚದ ವ್ಯಾಪಾರದ ಜೀವನಾಡಿ ಆಗುವ ಕುರಿತಂತೆ ಐಮ್ಯಾಕ್ ಯೋಜನೆ IMEC ವಿವರ ಹೀಗಿದೆ ಯೋಜನೆಯು ಮಧ್ಯಪ್ರಾಚ್ಯದ ಮೂಲಕ ಯುರೋಪಿನೊಂದಿಗೆ ಭಾರತವನ್ನು ಸಂಪರ್ಕಿಸುವ ಒಂದು ಮೆಗಾ ವ್ಯಾಪಾರದ ಯೋಜನೆಯಾಗಿದೆ(mega project). ಇನ್ನೂ ಸರಳವಾಗಿ ಹೇಳುವುದಾದರೆ ಭಾರತ – ಮಧ್ಯಪ್ರಾಚ್ಯ – ಯುರೋಪ್ ಆರ್ಥಿಕ ಕಾರಿಡಾರ್. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ G-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆ ಸಮ್ಮೇಳನದಲ್ಲಿ ಭಾರತ, ಅಮೆರಿಕ, ಯುಎಇ, ಸೌದಿ, ಫ್ರಾನ್ಸ್, ಜರ್ಮನಿ, ಯುರೋಪಿಯನ್ ಯೂನಿಯನ್ ಮತ್ತು ಇಟಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ಮತ್ತು ಅಲ್ಲಿಂದ ಇಸ್ರೇಲ್ ಮೂಲಕ ಐರೋಪ್ಯ ರಾಷ್ಟ್ರಗಳಿಗೆ ಸರಕುಗಳನ್ನು ಸಾಗಿಸಲು ಈ ಐಎಂಇಸಿ ಯೋಜನೆಯನ್ನು ರೂಪಿಸಲಾಗುತ್ತಿದೆ ಸೆಪ್ಟೆಂಬರ್ 9ರಂದು ಈ ಎಂಒಯುಗೆ ಸಹಿ ಹಾಕಲಾಗಿದ್ದು, ಅಂದು ಪ್ರಧಾನಿ ಮೋದಿ ಇದೊಂದು ಐತಿಹಾಸಿಕ ಒಪ್ಪಂದ ಎಂದು ಬಣ್ಣಿಸಿದ್ದರು.
ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಮಾರ್ಗವನ್ನು ಪೂರ್ವ ಕಾರಿಡಾರ್ ಎಂದು ವಿಂಗಡಿಸಲಾಗಿದೆ ಮತ್ತು ಅಲ್ಲಿಂದ ಯುರೋಪ್ ಮಾರ್ಗವನ್ನು ಉತ್ತರ ಕಾರಿಡಾರ್ ಎಂದು ವಿಂಗಡಿಸಲಾಗಿದೆ. ಈ ಯೋಜನೆಯ ಭಾಗವಾಗಿ ರೈಲು ಮತ್ತು ಜಲಮಾರ್ಗಗಳನ್ನು ಬಳಸಲಾಗುವುದು. ಪರಿಣಾಮವಾಗಿ ಬೃಹತ್ ಮಟ್ಟದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತದೆ ಭಾರತದ ಮುಂದ್ರಾ, ಕಾಂಡ್ಲಾ ಮತ್ತು ನವಿ ಮುಂಬೈ ಬಂದರುಗಳು ಈ ಮಾರ್ಗದ ಭಾಗವಾಗಿದೆ. ನೀರು ಮತ್ತು ರೈಲು ಮೂಲಕ ಏಷ್ಯಾ ಮತ್ತು ಯುರೋಪ್ ನಡುವಿನ ಸಂಪರ್ಕವನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಈ ಯೋಜನೆಯು ಸಂಪರ್ಕಿತ ದೇಶಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಸುಗಮಗೊಳಿಸುತ್ತದೆ.
ಈ ಯೋಜನೆಯಿಂದ ಭಾರತಕ್ಕೆ ಏನು ಲಾಭ?
ಆದಾಗ್ಯೂ, ಈ ಯೋಜನೆಯು ನಿಜವಾದ ರೂಪವನ್ನು ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎಂಒಯುಗೆ ಸಹಿ ಹಾಕಿದ ಪಾಲುದಾರ ರಾಷ್ಟ್ರಗಳು ವಿದ್ಯುತ್ ಮಾರ್ಗಗಳು,ಡಿಜಿಟಲ್ ಸಂಪರ್ಕ, ರೈಲ್ವೆ ಯೋಜನೆಗಳ ಅಭಿವೃದ್ಧಿ ಹೈಡ್ರೋಜನ್ ಪೈಪ್ಲೈನ್ಗಳನ್ನು ಅಳವಡಿಸುವ ಕುರಿತಂತೆ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಅಗತ್ಯತೆಗೆ ಅನುಗುಣವಾಗಿ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ. ಈ ಯೋಜನೆ ಸಾಕಾರಗೊಂಡರೆ ಭಾರತ ಮತ್ತು ಗಲ್ಫ್ ಪ್ರದೇಶದ ನಡುವೆ ಹಡಗು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೈಲು ಮತ್ತು ಸಮುದ್ರ ಸೇರಿದಂತೆ ಬಹು-ಮಾದರಿ ಸಾರಿಗೆಯ ಮೂಲಕ ಗಲ್ಫ್ ಪ್ರದೇಶ ಮತ್ತು ಯುರೋಪ್ ನಡುವೆ ಸಂಪರ್ಕವನ್ನು ಒದಗಿಸುವ ಕಾರಿಡಾರ್ ನಲ್ಲಿ ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಇಸ್ರೇಲ್ ಮತ್ತು ಇಯುಗಳನ್ನು ಒಳಗೊಂಡಿರುತ್ತದೆ.ಜೊತೆಗೆ ಪರಿಸರ, ಸಾಮಾಜಿಕ ಮತ್ತು ಸರ್ಕಾರಿ ಪರಿಣಾಮಗಳನ್ನು ಹೊಂದಿದೆ. ವಿಶ್ವಾಸಾರ್ಹ ಭೌಗೋಳಿಕ ಪ್ರದೇಶಗಳಲ್ಲಿ ಕಾರಿಡಾರ್ಗಳನ್ನು ನಿರ್ಮಿಸುವತ್ತ ಭಾರತದ ಕಾರ್ಯತಂತ್ರದ ಬದಲಾವಣೆಯನ್ನು IMEC ಸೂಚಿಸುತ್ತದೆ.ಪಾಲುದಾರ ರಾಷ್ಟ್ರಗಳ ಸಾರಿಗೆ ಸಾಮರ್ಥ್ಯ ಸುಧಾರಿಸಲಿದೆ. ಆಯಾ ದೇಶಗಳ ನಡುವೆ ಆರ್ಥಿಕ ಬಾಂಧವ್ಯ ಬಲಗೊಳ್ಳಲಿದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಎಲ್ಲಕ್ಕಿಂತ ಮಿಗಿಲಾಗಿ.ಈ ಯೋಜನೆಯ ಭಾಗವಾಗಿರುವ ಎಲ್ಲ ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಲಿದ್ದು, IMEC ಯೋಜನೆ ಭಾರತಕ್ಕೆ ತುಂಬಾ ಅನುಕೂಲಕರವಾಗಲಿದೆ. ಮುಖ್ಯವಾಗಿ ಹಣದ ವೆಚ್ಚ ಜೊತೆಗೆ ಭಾರತಕ್ಕೆ ಹೆಚ್ಚು ಆದಾಯ ತರುವಂತಾಗುತ್ತದೆ ಪ್ರಸ್ತುತ ಭಾರತದಿಂದ ಯುರೋಪ್ಗೆ ಸರಕುಗಳನ್ನು ಸಾಗಿಸಲು ಸೂಯೆಜ್ ಕಾಲುವೆಯನ್ನು ಬಳಸಲಾಗುತ್ತಿದೆ. ಈ ಕಾರಿಡಾರ್ ಸ್ಥಾಪನೆಯಾದರೆ ಮುಂಬೈನಿಂದ ನೇರವಾಗಿ ಕೊಲ್ಲಿ ರಾಷ್ಟ್ರಗಳಿಗೆ ರವಾನೆ ಯೋಜನೆ ರೂಪಿಸದಂತಾಗುತ್ತದೆ ಅಲ್ಲಿಂದ ಸರಕುಗಳು ರೈಲಿನಲ್ಲಿ ಇಸ್ರೇಲ್ನ ಹೈಫಾ ಬಂದರಿಗೆ ಮತ್ತು ಅಲ್ಲಿಂದ ಸಮುದ್ರದ ಮೂಲಕ ಯುರೋಪಿಯನ್ ರಾಷ್ಟ್ರಗಳಿಗೆ ಹೋಗುತ್ತವೆ.ಇದರಿಂದಾಗಿ ಸಾಗಾಣಿಕೆ ಸಮಯ ಮತ್ತು ಹಣ ಎರಡನ್ನೂ ಉಳಿದಂತಾಗುತ್ತದೆ ಇದರ ಪರಿಣಾಮ ಭಾರತದ ರಫ್ತು ಬಹಳ ಪಟ್ಟು ಹೆಚ್ಚಾಗುತ್ತದೆ ಎಂದು ವ್ಯವಹಾರಿಕ ರಂಗದ ನಂಬಿಕೆ, ಜೊತೆಗೆ ಐಎಂಇಸಿ ಯೋಜನೆ ಅನುಷ್ಟಾನವಾದರೆ, ಚೀನಾ ದೇಶದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್Belt and Road Initiative (BRI, or B&R),ಗೆ ಭಾರತದ IMEC ಯೋಜನೆ ಸಮರ್ಪಕವಾಗಿ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ.