ಶ್ರೀನಿವಾಸಪುರ:ಏಷ್ಯಾಕಪ್ ಟಿ.20 ಪಂದ್ಯಾವಳಿಗಳಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ವಿಜಯ ಸಾಧಿಸಿರುವುದನ್ನು ಬೆಂಬಲಿಸಿ
ಪಾಕಿಸ್ತಾನ ಪರ ಘೋಷಣೆ ಹಾಕಿ ವ್ಯಾಟ್ಸಾಪ್ ಸ್ಟೆಟಸನಲ್ಲಿ ಪ್ರಚಾರ ಮಾಡಿದ್ದ ಮೂವರ ವಿರುದ್ದ ಶ್ರೀನಿವಾಸಪುರ ಪೋಲಿಸರು ದೂರು ದಾಖಲಿಸಿ ಒರ್ವನನ್ನು ಬಂಧಿಸಿರುತ್ತಾರೆ.
ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಮುನ್ಸೂರ್ ಉಲ್ಲಾ,ಸುಹೇಲ್ ಪಾಷಾ,ತೊಹಿದ್ ಪಾಷಾ,ಎಂಬುವರ ವಿರುದ್ದ FIR ದಾಖಲಾಗಿದೆ ಇದರಲ್ಲಿ ಓರ್ವನನ್ನ ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪಟ್ಟಣದ ನಿವಾಸಿ ರಾಮಾಂಜಿ ಎನ್ನುವರು ಸೆಪ್ಟೆಂಬರ್ 6 ರಂದು ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿದ್ದರು, ಪೊಲೀಸ್ ಇನ್ಸೆಪೇಕ್ಟರ್ ನಾರಯಣಸ್ವಾಮಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು ಇವರಲ್ಲಿ ಒರ್ವನನ್ನು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿರುತ್ತಾರೆ.
ವರದಿ :ಸುರೇಶ್ ನಂಬಿಹಳ್ಳಿ