ಮುಳಬಾಗಿಲು:ಕಾಂಗ್ರೆಸ್ ಪ್ರಜಾಯಾತ್ರೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ಬಂದರೆ ಸಹಕಾರ ಬ್ಯಾಂಕ್ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಮ್ಮ ಮತ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲಿ ಇಲದಿದ್ದರೆ ಮಹಿಳೆಯರಿಗೆ ದ್ರೋಹ ಮಾಡಿದಂತೆ ಎಂದು ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿಹಾಕಲು ಮಹಿಳೆಯರು ಮುಂದಾದ ಘಟನೆ ಮುಳಬಾಗಿಲು ತಾಲ್ಲೂಕು ಬೈರಕೂರು ಗ್ರಾಮದಲ್ಲಿ ನಡೆದಿದೆ.
ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಬಳಿ ಸಾಲ ವಸೂಲಿಗೆ ತೆರಳಿದ್ದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಮಹಿಳೆಯರು ತರಾಟೆಗೆ ತಗೆದುಕೊಂಡು ಸಿದ್ದರಾಮಯ್ಯ ಸಾಲ ಮನ್ನಾ ಮಾಡ್ತಾರೆ ಎಂದು ಹೇಳಿಕೆ ನೀಡಿರುವಂತ ಪೇಪರ್ ಕಟ್ಟಿಂಗ್ ತೋರಿಸಿದ ಮಹಿಳೆಯರು ಬ್ಯಾಂಕ್ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿದ್ದಾರೆ ಇದಕ್ಕೆ ಊರಿನ ಕೆಲ ಪುರಷರು ವಿರೋಧ ವ್ಯಕ್ತಪಡಿಸಿ ಮಹಿಳೆಯರಿಂದ ಬ್ಯಾಂಕ್ ಸಿಬ್ಬಂದಿಯನ್ನು ಬಿಡಿಸಿರುತ್ತಾರೆ. ಇದಕ್ಕೆ ಮಹಿಳೆಯರು ಗ್ರಾಮದ ಪುರಷರ ಮೇಲೆ ತಿರುಗಿ ಬಿದಿದ್ದಾರೆ ಚುನಾವಣೆಯಲ್ಲಿ ಹೇಳಿದಂತೆ ನಡೆದುಕೊಳ್ಳಲಿ ಎಂದು ಆಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ.


