ನ್ಯೂಜ್ ಡೆಸ್ಕ್:ಬಿಜೆಪಿ ಸೋತಿದ್ದಕ್ಕೆ ನೂರಾರು ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನು ಪುಂಖವಾಗಿ ಬರೆಯಲಾಗುತ್ತಿದೆ ಅದೆ ಹಳೆಯ ಕಥೆಗಳು ಕಾರಣಗಳು,ಯಡಿಯೂರಪ್ಪನವರನ್ನ ಕೈ ಬಿಟ್ಟದ್ದು,ಲಿಂಗಾಯಿತರನ್ನು ಸೈಡ್ ಲೈನ್ ಮಾಡಿದ್ದು ಹೊಸ ಮುಖಗಳಿಗೆ ಮಣೆ ಹಾಕಿದ್ದು ನಿಷ್ಟಾವಂತರಿಗೆ ನ್ಯಾಯ ಒದಗಿಸದೆ ಇದ್ದದ್ದು ಇತ್ಯಾದಿ ಇತ್ಯಾದಿಗಳು ಆದರೆ ಇದ್ಯಾವುದು ಅಲ್ಲ ಈ ಚುನಾವಣೆಯಲ್ಲಿ ನಡದದ್ದೆ ಬೆರೆ ಇದ್ಯಾವುದು ಮತದಾರನ ಗಮನಕ್ಕೆ ಬರಲೆ ಬಿಜೆಪಿ-ಜೆಡಿಎಸ್ ಯಾವುದನ್ನೂ ಸಿರಿಯಸ್ ಆಗಿ ಪರಿಗಣಿಸಲೆ ಇಲ್ಲ.
ಬಿಜೆಪಿ ಪಕ್ಷದ ಮೂಲ ಬ್ರಾಂಡ್ ಆದ ಬ್ರಾಹ್ಮಣ ಮತಗಳು ಅತಿ ಹೆಚ್ಚು ಇದ್ದ ಕಡೆ ಕೂಡ ಬಿಜೆಪಿ ಸೋತಿದೆ ಎಂದರೆ ಅದಕ್ಕೆ ಕಾರಣ ಸ್ಥಳೀಯ ವಿಷಯಗಳಿಗೆ ಮಹತ್ವ ನೀಡದೆ ಎಲ್ಲಕ್ಕೂ ಮೋದಿಯೇ ಮದ್ದು ಎಂದದ್ದು
ಕಾಂಗ್ರೆಸ್ ಗ್ಯಾರಂಟಿಯನ್ನು ಗಟ್ಟಿಯಾಗಿ ಘೋಷಣೆ ಮಾಡಿತು, ಅದನ್ನ ಯಶಸ್ವಿಯಾಗಿ ಮನೆಮನೆಗೆ ತಲುಪಿಸಿತು. ಅದು ಜನರಿಗೆ ಇನ್ನಿಲ್ಲದಷ್ಟು ಇಷ್ಟವಾಗಿ ಹೋಯ್ತು. ಇದೆಲ್ಲ ಬಿಟ್ಟಿ ಭಾಗ್ಯ ಎಂದು ಕಾಂಗ್ರೆಸ್ ಜರೆದಿದ್ದ ಬಿಜೆಪಿಗೆ ಇದು ಅರ್ಥವಾಗುವುದರಲ್ಲಿ ಸಮಯ ಮೀರಿ ಹೋಗಿತ್ತು.ಬಿಜೆಪಿ ಟಾಪ್ ಲೀಡರ್ ಗಳಿಗೆ ವಿಷಯ ಅರ್ಥವಾಗಿ ಅನ್ಯ ಮಾರ್ಗವಿಲ್ಲದೆ ಬಿಜೆಪಿಯವರು ಬಿಟ್ಟಿ ಭಾಗ್ಯಗಳನ್ನು ಘೋಷಿಸಿದರು.
ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ರಣತಂತ್ರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಸೃಷ್ಟಿಸಿ ಕಾಂಗ್ರೆಸ್ ಗೆ ಅದ್ಭುತವಾದ ಪ್ರಚಾರ ಒದಗಿಸಿದ್ದು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಅಲೆಯನ್ನೆ ಎಬ್ಬಿಸಿ ಫುಲ್ ಸಕ್ಸಸ್ ಆಯಿತು, ಇನ್ನು ಬಿಜೆಪಿ ಅಂದರೆ ೪೦ ಪರ್ಸೆಂಟ್ ಕಮಿಷನ್ ಸರಕಾರ ಎಂದು ಪುಟಾಣಿ ಮಗುವಿಗೂ ತಲುಪಿಸುವಂತೆ ಡಿಜಿಟಲ್ ಜಾಹಿರಾತು ನಿರ್ಮಿಸಿದ್ದು, ಗ್ಯಾಸ್ ಧರ ಏರಿದವರು ಬಂದಿದ್ದಾರೆ ಎಂದು ಗೃಹಣಿಯೊಬ್ಬಳು ಬಯ್ಯುವುದು ಮತದಾರರಲ್ಲಿ ಎಬ್ಬಿಸಿದ ಬಿರುಗಾಳಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಿಂದೆ ಯಾರ ಕೈವಾಡವಿದೆ ಎಂದರೆ ಪ್ರಚಾರ ತಂತ್ರಗಾರ ಕರ್ನಾಟಕದವರೆ ಆದ ಮಾಸ್ಟರ್ ಮೈಂಡ್ ಸುನಿಲ್ ಕನುಗೊಲು ಈಗ ಆತನ ಮುಂದಿನ ಗುರಿ ತೆಲಂಗಾಣ ಕೆರಳ ಇನ್ನೂ ಹಲವು ರಾಜ್ಯಗಳು ಟಾಸ್ಕ್.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದೆ.136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಂಡಿದೆ. ಬಿಜೆಪಿಯ ರಾಜಕೀಯಕ್ಕೆ ಮದ್ದು ಎಂಬಂತೆ ಕಾಂಗ್ರೆಸ್ ಹೊಸ ತಂತ್ರಗಳ ಮೂಲಕ ಹೋರಾಡಿ ಗೆದ್ದಿದೆ. ಈ ಮಹಾನ್ ಗೆಲುವಿಗಾಗಿ ಎಲ್ಲರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕೊಂಡಾಡುತ್ತಿದ್ದಾರೆ. ಆದರೆ ತೆರೆಮೇಲೆ ಕಾಣದ ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಪ್ರಮುಖ ಪಾತ್ರ ವಹಿಸಿದ್ದಾರೆ.ಅವರೇ ಚುನಾವಣಾ ರಣತಂತ್ರ ರೂಪಿಸಿದ್ದು ಸುನೀಲ್ ಕನುಗೊಲು.
2018ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಸುನೀಲ್ ಕನುಗೊಲು.2023 ಚುನಾವಣೆಯಲ್ಲಿ ಕಾಂಗ್ರೆಸ್ಗೆ ರಣತಂತ್ರ ರೂಪಿಸಿ ಪಕ್ಷವನ್ನು ಬಲಪಡಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಸುನೀಲ್ ತಂಡ ನಡೆಸಿದ ಸಮೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಕೆಲವು ಸಾಂಪ್ರದಾಯಿಕ ಅಭ್ಯರ್ಥಿಗಳನ್ನು ಹೊರತುಪಡಿಸಲಾಗಿದೆ ಕಳೆದ ವರ್ಷ ಮಾರ್ಚ್ನಲ್ಲಿ ಕಾಂಗ್ರೆಸ್ ಸುನಿಲ್ ಅವರನ್ನು ಪಕ್ಷದ ಚುನಾವಣಾ ತಂತ್ರಗಾರರನ್ನಾಗಿ ನೇಮಿಸಿಕೊಂಡಿತು ಆ ಎರಡು ತಿಂಗಳಲ್ಲಿ ಸೋನಿಯಾ ಗಾಂಧಿ 2024 ರ ಲೋಕಸಭಾ ಚುನಾವಣಾ ಕಾರ್ಯಪಡೆಗೆ ಪಕ್ಷವನ್ನು ಸೇರಿಸುವ ಮೂಲಕ ನಿರ್ಧಾರವನ್ನು ತೆಗೆದುಕೊಂಡಿತು,
ಈ ಹಿಂದೆ ಪ್ರಶಾಂತ್ ಕಿಶೋರ್ ಎಂಬ ಪ್ರಮುಖ ಚುನಾವಣಾ ಮಹಾತಂತ್ರಗಾರನ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ಸುನಿಲ್ ಬಗ್ಗೆ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕರ್ನಾಟಕದ ಬಳ್ಳಾರಿ ಮೂಲದ ಸುನೀಲ್ ಒದಿ ಬೆಳೆದದ್ದು ಚೆನ್ನೈನಲ್ಲಿ. ಈ ಹಿಂದೆ ಅವರು ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಕೆಲಸ ಮಾಡಿದ್ದಾರೆ 2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಸುನಿಲ್ ಅತ್ಯಂತ ಕ್ರೀಯಾಶಿಲ ಪಾತ್ರ ವಹಿಸಿದ್ದರು. ಬಿಜೆಪಿಯ ಬಿಲಿಯನ್ ಮೈಂಡ್ಸ್ ಅಸೋಸಿಯೇಷನ್ ಮುಖ್ಯಸ್ಥರಾಗಿದ್ದ ಸುನಿಲ್ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಲಾಗಿತ್ತು ಇದರ ರೂವಾರಿ ಸಹ ಸುನಿಲ್ ಎಂಬುದು ವಿಶೇಷ.ಕರ್ನಾಟಕ ಚುನಾವಣೆಗೂ ಮುನ್ನ ರಾಹುಲ್ ಕೈಗೊಂಡಿದ್ದ ಜೋಡೊ ಯಾತ್ರೆ ಕಾಂಗ್ರೆಸ್ ಪಾಲಿಗೆ ವರವಾಗಿ ಪರಿಣಮಿಸಿತು ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅದ್ಭುತವಾಗಿ ಗೆಲ್ಲಿಸಿರುವ ಸುನೀಲ್ ಕನಗೊಲು ಮುಂದಿನ ಟಾಸ್ಕ್ ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಅದಕ್ಕಾಗಿ ತಂತ್ರಗಳನ್ನು ರೂಪಿಸಿಸುತ್ತ ಅದರ ಜೊತೆಗೆ,ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ 2024ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ.ಈಗಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಕೆಲಸ ಆರಂಭಿಸಿರುವ ಸುನೀಲ್, ‘ಕಾಂಗ್ರೆಸ್ ವಾರ್ ರೂಂ’ ಪ್ರಕರಣದಲ್ಲಿ ಪೊಲೀಸ್ ತನಿಖೆ ಎದುರಿಸಿದ್ದರು. ಅಲ್ಲಿನ ಅಡಳಿತಾ ರೂಡ ಟಿ.ಆರ್,ಎಸ್ ಪಕ್ಷದ ಸಿಎಂ ಕೆಸಿಆರ್,ಸಚಿವ ಕೆಟಿಆರ್ ಹಾಗೂ ಎಂಎಲ್ ಸಿ ಕವಿತಾ ಅವರನ್ನು ಕೀಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ತನಿಖೆ ವೇಳೆ ತೆಲಂಗಾಣ ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.